For Quick Alerts
  ALLOW NOTIFICATIONS  
  For Daily Alerts

  ಜಪಾನ್ ಸುನಾಮಿ ಸಂತ್ರಸ್ತರಿಗೆ ರಜನಿಕಾಂತ್ ನೆರವಿನ ಹಸ್ತ

  By Rajendra
  |

  ನಟ ರಜನಿಕಾಂತ್ ಅವರಿಗೆ ಜಪಾನ್‌ನಲ್ಲೂ ಅಭಿಮಾನಿಗಳಿರುವುದು ಗೊತ್ತೇ ಇದೆ. ರಜನಿ ಚಿತ್ರಗಳನ್ನು ಪ್ರೀತಿಸುವ ಜಪಾನಿ ಅಭಿಮಾನಿಗಳಿಗೂ ಬರವಿಲ್ಲ. ಆದರೆ ಈಗ ಅಲ್ಲಿ ಸುನಾಮಿ, ಭೂಕಂಪ, ವಿಕಿರಣ ಆಪತ್ತು ತಲೆದೋರಿದ್ದು ಎಲ್ಲವೂ ಅತಂತ್ರ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಅಭಿಮಾನಿ ದೇವರುಗಳಿಗೆ ರಜನಿ ಸಹಾಯ ಹಸ್ತ ಚಾಚಿದ್ದಾರೆ.

  ಸುನಾಮಿ ಸಂತ್ರಸ್ತರನ್ನು ರಕ್ಷಿಸಲು ರಜನಿ ಮುಂದಾಗಿದ್ದು ಚೆನ್ನೈನ ಕಚೇರಿಯಿಂದ ಜಪಾನಿಯರಿಗೆ ನೆರವು ನೀಡಲಿದ್ದಾರೆ. ಮನೆ ಮಠ ಕಳೆದುಕೊಂಡವರಿಗೆ ಸಹಾಯ ಮಾಡಲು ರಜನಿ ಚಿತ್ರೋದ್ಯಮದವನ್ನು ಮನವಿ ಮಾಡಿಕೊಂಡಿದ್ದಾರೆ. ಒಂದು ತಂಡ ರಚಿಸಿ ಅವರನ್ನು ಜಪಾನಿಗೆ ಕಳುಹಿಸಿಕೊಡಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.

  ರಜನಿ ಕರೆಗೆ ಓಗೊಟ್ಟು ಈಗಾಗಲೆ ನಟರಾದ ಸೂರ್ಯ, ಕಮಲ್ ಹಾಸನ್ ಮತ್ತು ವಿಜಯ್ ಮುಂದೆ ಬಂದಿದ್ದು ತಮ್ಮ ಕೈಲಾದ ಸಹಾಯಕ್ಕೆ ಮುಂದಾಗಿದ್ದಾರೆ. ಮನೆ ಮಠ ಕಳೆದುಕೊಂಡವರಿಗೆ ಮನೆ ನಿರ್ಮಿಸುವುದು. ಆರ್ಥಿಕ ಸಹಾಯ ಮಾಡುವುದು ಇವೇ ಕಾರ್ಯಗಳನ್ನು ರಜನಿ ತಂಡ ಹಮ್ಮಿಕೊಳ್ಳಲಿದೆ.

  English summary
  Superstar Rajinikanth to help Japan Tsunami victims. who has a huge fan following in Japan, has decided to raise finds through all means. Sources said that he has set up a team to visit Japan and to help as many Japanese people as possible in this time of crisis.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X