'ರಜನಿಕಾಂತ್ ಇನ್ನಾರು ತಿಂಗಳು ನಟಿಸುವುದಿಲ್ಲ'

By Srinath

ಸೋಮವಾರ ಶಸ್ತ್ರಚಿಕಿತ್ಸೆಯ ಬಳಿಕ ನಟ ರಜನಿಕಾಂತ್ ಅವರಿಗೆ ವಿಶ್ರಾಂತಿಯ ಆಗತ್ಯವಿದ್ದು ಕನಿಷ್ಠ ಇನ್ನು ಆರು ತಿಂಗಳ ಕಾಲ ಅವರು ಯಾವುದೇ ಶೂಟಿಂಗ್ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಜನಿ ಅವರ ಸೋದರ ಸತ್ಯನಾರಾಯಣ ರಾವ್ ಖಾಸಗಿ ಚಾನೆಲ್ ಗೆ ತಿಳಿಸಿದ್ದಾರೆ. ಇದೇ ವೇಳೆ, ರಜನಿ ಆವರ ಆರೋಗ್ಯ ಸುಧಾರಿಸಿದ್ದು, ಅಭಿಮಾನಿಗಳು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಣಾ ಚಿತ್ರಕ್ಕಾಗಿ ರಜನಿ ವಿಪರೀತವಾಗಿ ಡಯಟ್ ಮಾಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ. ರಜನಿ ಆರೋಗ್ಯ ಸೂಪರ್ ಆಗಿದ್ದು ಚಿಕಿತ್ಸೆಗೆಂದು ಅವರು ವಿದೇಶಕ್ಕೆ ತೆರಳುವ ಅಗತ್ಯವಿಲ್ಲ ಎಂದು ಧನುಷ್ ಹೇಳಿದ್ದಾರೆ.

ತಮ್ಮ ನೆಚ್ಚಿನ ನಾಯಕ ರಜನಿ ಆರೋಗ್ಯದ ಬಗ್ಗೆ ಎದ್ದಿರುವ ಗಾಳಿಮಾತಿನ ಬಗ್ಗೆ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ರಜನಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಬಳಿ ಸೋಮವಾರ ಸಾಯಂಕಾಲ ನೂರಾರು ಅಭಿಮಾನಿಗಳು ಧರಣಿ ನಡೆಸಿದ್ದಾರೆ. ರಜನಿ ತಾವಿರುವ ಕೊಠಡಿಯಿಂದಲೇ ನಮಗೆ ಕಾಣಿಸಿಕೊಳ್ಳಬೇಕು. ಇಲ್ಲವೇ ವೀಡಿಯೋ ಮೂಲಕ ನಮಗೆ ದರುಶನ ನೀಡಬೇಕು ಎಂದು ಅವರು ಒತ್ತಾಯಿಸಿದರು.

More from Filmibeat

English summary
Rajinikanth’s brother Sathyanarayana Rao spoke to a private television channel about his health. Sathyanarayana said that Rajini will not get back to acting for at least six months as the doctors have advised him complete rest. He said that Rajini is responding to treatment and there is no cause of concern.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X