ಬೆಳ್ಳಿತೆರೆಗೆ ರಾಜೇಂದ್ರ ಸಿಂಗ್ ಬಾಬು ಪುತ್ರಿ ರೋಹಿಣಿ
ಈಗಾಗಲೇ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಿರ್ಮಾಪಕ ರಾಮು ಈಗ ಮತ್ತೊಂದು ಚಿತ್ರದ ಚಿತ್ರೀಕರಣ ಆರಂಭಿಸಲು ಸಜ್ಜಾಗಿದ್ದಾರೆ.ರಾಮು ನಿರ್ಮಾಣದಲ್ಲಿ ಮಾಲಾಶ್ರೀ ಅಭಿನಯದ 'ವೀರ' ಹಾಗೂ ಚಿರಂಜೀವಿ ಸರ್ಜಾ ಅಭಿನಯದ 'ಗಂಡೆದೆ' ಚಿತ್ರೀಕರಣ ಭರದಿಂದ ಸಾಗುತ್ತಿದೆ.
ರಾಮು ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ಮತ್ತೊಂದು ಅದ್ದೂರಿ ಚಿತ್ರ 'ಕಂಠೀರವ' ಆರಂಭಿಸಲಿದ್ದು, ಈ ಚಿತ್ರವು ಮಾರ್ಚ್‌ನಲ್ಲಿ ಆರಂಭವಾಗಲಿದೆ. ದಾಸರಿ ಸೀನು ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ವಿರುವ ಈ ಚಿತ್ರದ ಸಂಭಾಷಣೆ ಮತ್ತು ನಿರ್ದೇಶನ ತುಷಾರ್ ರಂಗನಾಥ್.
ವಿಜಯ್ ಜೋಡಿಯಾಗಿ ರಿಷಿಕಾ (ರೋಹಿಣಿ) ಎಸ್.ವಿ. ರಾಜೇಂದ್ರಸಿಂಗ್ ಬಾಬುರವರ ಪುತ್ರಿ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲಿದ್ದು, ದಿವಂಗತ ಶಂಕರ್ ಸಿಂಗ್‌ರ ಮೂರನೇ ತಲೆಮಾರಿನ ಮತ್ತೊಂದು ಕುಡಿ ಚಿತ್ರರಂಗ ಪ್ರವೇಶಿಸಿದಂತಾಗುತ್ತದೆ. ಇವರೊಂದಿಗೆ ಶುಭಾಪೂಂಜಾ ಮತ್ತೊಬ್ಬ ನಾಯಕಿ ಕಾಣಿಸಿಕೊಳ್ಳಲಿದ್ದಾರೆ.
ವಿಜಯ್ ramu shubha poonja ಶುಭಾ ಪೂಂಜಾ ಚಿರಂಜೀವಿ ಸರ್ಜಾ ವೀರ ಗಂಡೆದೆ gandedhe veera ಕಂಠೀರವ kanteerava ರೋಹಿಣಿ ರಿಷಿಕಾ dunia vijay rohini rishika


Click it and Unblock the Notifications