ಬನ್ನಿ ಎಲ್ಲರೂ ಕುಳಿತು ಒಟ್ಟಿಗೆ ನೋಡೋಣ 'ಸಂಸ್ಕಾರ'

ಯು.ಆರ್. ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿ ಆಧಾರಿತ ಈ ಚಿತ್ರವನ್ನು ಪಟ್ಟಾಭಿರಾಮ ರೆಡ್ಡಿ ನಿರ್ದೇಶಿಸಿದ್ದರು. ಅದೇ ಚಿತ್ರ ಈಗ ಡಿವಿಡಿ ರೂಪದಲ್ಲಿ ಟೋಟಲ್ ಕನ್ನಡ ಹೊರತಂದಿದೆ. 'ಸಂಸ್ಕಾರ' ಡಿವಿಡಿ ನವೆಂಬರ್ 20ರಂದು ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರಲ್ಲಿ ಬಿಡುಗಡೆಯಾಗುತ್ತಿದೆ.
ನ.20ರಂದು ಸಂಜೆ 3.30ಕ್ಕೆ 'ಸಂಸ್ಕಾರ' ಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಚಿತ್ರ ಪ್ರದರ್ಶನದ ಬಳಿಕ 'ಸಂಸ್ಕಾರ' ಡಿವಿಡಿ ಬಿಡುಗಡೆಯಾಗಲಿದೆ. ಪ್ರಾಣೇಶಚಾರ್ಯ (ಗಿರೀಶ್ ಕಾರ್ನಾಡ್), ನಾರಣಪ್ಪ (ಪಿ.ಲಂಕೇಶ್), ಚಂದ್ರಿ (ಸ್ನೇಹಲತಾ ರೆಡ್ಡಿ) ಸಂಸ್ಕಾರದ ಪ್ರಮುಖ ಪಾತ್ರಗಳು.
ಸಂಸ್ಕಾರ ಚಿತ್ರ ಪ್ರದರ್ಶನದ ಸ್ಥಳ: ಕೆವಿ ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ, ಮೊದಲ ಹಂತ (ದಯಾನಂದ ಸಾಗರ್ ಕಾಲೇಜು, ವಸುಧಾ ಭವನ ಮುಂದೆ, ಕುಮಾರಸ್ವಾಮಿ ಲೇಔಟ್), ಬೆಂಗಳೂರು-560078. ಚಿತ್ರದ ಬಗ್ಗೆ ಸಂವಾದವನ್ನು ಏರ್ಪಡಿಸಲಾಗಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Ram Manohara Chitra presents ‘Samskara’ the path breaking cinema directed by Pattabhi Rama Reddy, DVD will be released by total Kannada at KV Subbanna Aptha Samuha and Kannada Vartha Ilake. The movie is screening in Bangalore on Sunday 20th Nov 2011 at 3.30 pm IST.
ಗಿರೀಶ್ ಕಾರ್ನಾಡ್ ಯು ಆರ್ ಅನಂತಮೂರ್ತಿ ಪಿ ಲಂಕೇಶ್ ಸಂಸ್ಕಾರ girish karnad ur ananthamurthy p lankesh samskara


Click it and Unblock the Notifications











