For Quick Alerts
  ALLOW NOTIFICATIONS  
  For Daily Alerts

  ಬನ್ನಿ ಎಲ್ಲರೂ ಕುಳಿತು ಒಟ್ಟಿಗೆ ನೋಡೋಣ 'ಸಂಸ್ಕಾರ'

  By Rajendra
  |
  <ul id="pagination-digg"><li class="previous"><a href="/news/17-path-breaking-kannada-movie-samskara-aid0052.html">« Previous</a>

  ಹೆಂಡತಿಯನ್ನು ತ್ಯಜಿಸಿ ಕೀಳು ಜಾತಿಯ ಮನೆಯ ಚಂದ್ರಿಯನ್ನು ತಂದಿಟ್ಟುಕೊಂಡವನು. ಬ್ರಾಹ್ಮಣರ ನಡುವೆ ಚಂಡಾಲನಾಗಿ ಬದುಕಿದವನು. ಆತನನ್ನು ಕಂಡರೆ ಸಂಪ್ರದಾಯಸ್ಥರಿಗೆ ಮತ್ಸರ. ಬಹಿಷ್ಕಾರಕ್ಕೊಳಗಾಗುವ ಮುನ್ನವೇ ಸತ್ತಿದ್ದಾನೆ. ಹಾಗಾಗಿ ಇಂಥ ಹೆಣಕ್ಕೆ 'ಸಂಸ್ಕಾರ' ಮಾಡುವವರು ಯಾರು? ಹೇಗೆ? ಎಂಬ ಪ್ರಶ್ನೆ ಎದುರಾಗುತ್ತದೆ.

  ಯು.ಆರ್. ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿ ಆಧಾರಿತ ಈ ಚಿತ್ರವನ್ನು ಪಟ್ಟಾಭಿರಾಮ ರೆಡ್ಡಿ ನಿರ್ದೇಶಿಸಿದ್ದರು. ಅದೇ ಚಿತ್ರ ಈಗ ಡಿವಿಡಿ ರೂಪದಲ್ಲಿ ಟೋಟಲ್ ಕನ್ನಡ ಹೊರತಂದಿದೆ. 'ಸಂಸ್ಕಾರ' ಡಿವಿಡಿ ನವೆಂಬರ್ 20ರಂದು ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರಲ್ಲಿ ಬಿಡುಗಡೆಯಾಗುತ್ತಿದೆ.

  ನ.20ರಂದು ಸಂಜೆ 3.30ಕ್ಕೆ 'ಸಂಸ್ಕಾರ' ಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಚಿತ್ರ ಪ್ರದರ್ಶನದ ಬಳಿಕ 'ಸಂಸ್ಕಾರ' ಡಿವಿಡಿ ಬಿಡುಗಡೆಯಾಗಲಿದೆ. ಪ್ರಾಣೇಶಚಾರ್ಯ (ಗಿರೀಶ್ ಕಾರ್ನಾಡ್), ನಾರಣಪ್ಪ (ಪಿ.ಲಂಕೇಶ್), ಚಂದ್ರಿ (ಸ್ನೇಹಲತಾ ರೆಡ್ಡಿ) ಸಂಸ್ಕಾರದ ಪ್ರಮುಖ ಪಾತ್ರಗಳು.

  ಸಂಸ್ಕಾರ ಚಿತ್ರ ಪ್ರದರ್ಶನದ ಸ್ಥಳ: ಕೆವಿ ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ, ಮೊದಲ ಹಂತ (ದಯಾನಂದ ಸಾಗರ್ ಕಾಲೇಜು, ವಸುಧಾ ಭವನ ಮುಂದೆ, ಕುಮಾರಸ್ವಾಮಿ ಲೇಔಟ್), ಬೆಂಗಳೂರು-560078. ಚಿತ್ರದ ಬಗ್ಗೆ ಸಂವಾದವನ್ನು ಏರ್ಪಡಿಸಲಾಗಿದೆ. (ಒನ್‌ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/17-path-breaking-kannada-movie-samskara-aid0052.html">« Previous</a>
  English summary
  Ram Manohara Chitra presents ‘Samskara’ the path breaking cinema directed by Pattabhi Rama Reddy, DVD will be released by total Kannada at KV Subbanna Aptha Samuha and Kannada Vartha Ilake. The movie is screening in Bangalore on Sunday 20th Nov 2011 at 3.30 pm IST.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X