»   » ಸಂಗಾತಿ, ಪ್ರೀತಿಗಾಗಿ ನಾ , ಪಯಣ!

ಸಂಗಾತಿ, ಪ್ರೀತಿಗಾಗಿ ನಾ , ಪಯಣ!

Posted By:
Subscribe to Filmibeat Kannada

ಪಯಣ
ಕಿರುತೆರೆ ಸ್ಟಾರ್ 'ಸಿಲ್ಲಿ ಲಲ್ಲಿ' ಖ್ಯಾತಿಯ ರವಿಶಂಕರ್ ನಾಯಕನಟನಾಗಿ ನಟಿಸಿರುವ 'ಪಯಣ' ಇಂದಿನಿಂದ ಅಮೋಘ ಪಯಣ ಆರಂಭಿಸಿದೆ.ಕಿರಣ್ ಗೋವಿ ನಿರ್ದೇಶನದಲ್ಲಿ, ಟ್ಯಾಕ್ಸಿ ಚಾಲಕನ ಪ್ರೇಮಕಥೆಯ ಸುತ್ತ ಚಿತ್ರ ಸಾಗುತ್ತದೆ.ನಾಯಕನ ಪ್ರೀತಿಯ ಹುಡುಕಾಟ, ತಾಕಲಾಟ, ಹಂಬಲ, ಅನಾಹುತಗಳ ಸುತ್ತ ಕಥೆ ಹೆಣೆದುಕೊಂಡಿದೆ. 'ಪಲ್ಲಕ್ಕಿ', 'ಬೆಳದಿಂಗಳಾಗಿ ಬಾ' ಚಿತ್ರಗಳ ಹುಡುಗಿ ರಮಣಿತೋ ಚೌಧುರಿ ಚಿತ್ರದ ನಾಯಕಿ. ಸಂಗೀತ ನಿರ್ದೇಶನ ವಿ. ಹರಿಕೃಷ್ಣ ಅವರದು.

ಬೆಂಗಳೂರಿನ ಅಭಿನಯ್, ವೀರೇಶ್, ನಳಂದಾ, ಈಶ್ವರಿ, ರೇಣುಕಾಪ್ರಸನ್ನ, ಗಣೇಶ್, ಕೃಷ್ಣ, ಅಶೋಕ್ ಚಿತ್ರಮಂದಿರಗಳಲ್ಲಿ ದಿನವಹಿ 4 ಆಟಗಳು ಹಾಗೂ ಲಗ್ಗೆರೆಯ ರಾಜೇಶ್ವರಿ ಚಿತ್ರಮಂದಿರದಲ್ಲಿ 3 ಆಟಗಳ ಪಯಣ ಸಾಗಿದೆ. ಚಿತ್ರದಲ್ಲಿನ ಮಾನಸ ಗಂಗೆ, ಮೋಡದ ಒಳಗೆ ಹಾಗೂ ಚಂದಿರ ಮೂಡುವ ಹಾಡುಗಳು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಪ್ರೀತಿಯ ಕಡೆಗೆ ಸಾಗಿರುವ 'ಪಯಣ' ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸಂಗಾತಿ
'ಅಯ್ಯ್ಯ' ಚಿತ್ರದ ನಿರ್ಮಾಪಕರಿಂದ ನ್ಯೂಜಿಲ್ಯಾಂಡ್ ನಲ್ಲಿ ಚಿತ್ರಿಸಿರುವ ಅದ್ದೂರಿ, ಸಾಹಸಮಯ, ಇಂಪಾದ ಹಾಡುಗಳಿಂದ ಕೂಡಿದ ಚಿತ್ರ 'ಸಂಗಾತಿ'.ಹೊಸ ಮುಖ ಚೇತನ್ ಮತ್ತು ಮಲಯಾಳಿ ಬೆಡಗಿ ಐಶ್ವರ್ಯ ನಟಿಸಿರುವ 'ಸಂಗಾತಿ' ಚಿತ್ರ ಇಂದು ಬೆಳ್ಳಿತೆರೆಗೆ ಕಾಲಿಟ್ಟಿತು. ಕಾಲೇಜ್ ಸುತ್ತ ಮುತ್ತ ನಡೆಯುವ ಪ್ರೇಮ ಕಥೆ ಈ ಚಿತ್ರದ ಜೀವಾಳ. ನಿರ್ದೇಶಕರಾಗಿ ಶ್ರೀನಿವಾಸ್ ರಾಜು, ಸಂಗೀತ ಮತ್ತು ಸಾಹಿತ್ಯ ಹಂಸಲೇಖ, ಛಾಯಾಗ್ರಹಕರಾಗಿ ದತ್ತ, ಹಾಗೂ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಗಿರೀಶ್ ಕಾರ್ನಾಡ್, ಶ್ರೀನಾಥ್, ಸತ್ಯಪ್ರಕಾಶ್ ಹಾಗೂ ವಿನಯ ಪ್ರಕಾಶ್ ಇದ್ದಾರೆ.

ಬೆಂಗಳೂರಿನ ಕಪಾಲಿ, ವಿನಾಯಕ, ಕಾಮಾಕ್ಯ, ಉಲ್ಲಾಸ್, ವಜ್ರೇಶ್ವರಿ ಚಿತ್ರಮಂದಿರಗಳಲ್ಲಿ ದಿನವಹಿ 4 ಆಟಗಳನ್ನು ಹಾಗೂ ನಂದಿನಿ, ಮಾರುತಿ,ಮಾನಸ ಚಿತ್ರಮಂದಿರಗಳಲ್ಲಿ 3ಆಟಗಳ ಪ್ರದರ್ಶನಗಳನ್ನು ಕಾಣುತ್ತಿದೆ. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಇರುವ ಕಾರಣ ಪ್ರೇಕ್ಷಕವಲಯದಲ್ಲಿ ಕುತೂಹಲ ಇದ್ದೇ ಇದೆ.

ಪ್ರೇಮಿಗಾಗಿ ನಾ
'ನಿಜವಾದ ಪ್ರೇಮ ಕೊನೆಯುಸಿರಿರುವ ತನಕ' ಎಂಬ ಸಂದೇಶ ಸಾರಲು ಪ್ರೇಮಿಗಾಗಿ ನಾ ಚಿತ್ರ ಇಂದು ತೆರೆಕಂಡಿತು. ಸ್ನೇಹಪ್ರಿಯ ನಿರ್ದೇಶನದ 'ಪ್ರೇಮಿಗಾಗಿ ನಾ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. " ಪ್ರೀತಿಯಲ್ಲಿ ನಂಬಿಕೆ ಮುಖ್ಯ, ನಂಬಿಕೆ ತಳಹದಿಯಲ್ಲಿ ನೆಲೆಕಂಡುಕೊಳ್ಳುವ ಪ್ರೀತಿ ನಿಜಕ್ಕೂ ದೊಡ್ಡ ಆಸ್ತಿ" ಇದು ಈ ಚಿತ್ರದ ಸಂದೇಶ. ನಾಯಕನಾಗಿ ಶಂಕರ್,
ನಾಯಕಿಯಾಗಿ ವಂದನ, ರಾಜೇಶ್ ರಾಮನಾಥ್ ಸಂಗೀತ, ಹ್ಯಾರಿಸ್ ಜಾನ್ ಅವರ ಸಾಹಸ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ದ್ವಾರಕೀಶ್, ಸುಮಿತ್ರ,ಉಮಾಶ್ರೀ, ಅಭಿನಯ, ನಾಗಶೇಖರ್ ಇತರರು ಇದ್ದಾರೆ.

ಅಮೆರಿಕ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಮಲೇಷಿಯಾ ಹಾಗೂ ಸಿಂಗಾಪುರದಲ್ಲೂ ಚಿತ್ರ ಬಿಡುಗಡೆಯಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಬೆಂಗಳೂರಿನ ಬಾಲಾಜಿ, ವಿಶಾಲ್, ಪ್ರಸನ್ನ, ನವರಂಗ್, ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ 'ಸಂಗಾತಿ' ಹುಡುಕಿ ಚಿತ್ರರಸಿಕರು ಹೊರಟಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada