ಮಹಾಶಿವರಾತ್ರಿಗೆ ಶಿವರಾಜ್ ಕುಮಾರ್ ಶಿವ ಸಾಕ್ಷಾತ್ಕಾರ

By Rajendra

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಯಂಗ್ ಅಂಡ್ ಸ್ಟೈಲಿಶ್ ತೋರಿಸಲಿರುವ ಚಿತ್ರ 'ಶಿವ'. ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಚಿತ್ರ 2012ರ ಮಹಾಶಿವರಾತ್ರಿಗೆ ತೆರೆಕಾಣಲಿದೆ. 'ಶಿವ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ರಾಕ್‌ಲೈನ್ ಸ್ಟುಡಿಯೋದಲ್ಲಿ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿದೆ.

ಪಕ್ಕಾ ಮಾಸ್ ಮಸಾಲಾ ನಿರ್ದೇಶಕ ಎಂದೇ ಖ್ಯಾತರಾದ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಾಯಕಿ ಗ್ಲಾಮರ್ ಗೊಂಬೆ ರಾಗಿಣಿ. ಈಗಾಗಲೆ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಬಗ್ಗೆ ಓಂ ಮಾತನಾಡುತ್ತಾ, ಬೆಗ್ಗರ್ಸ್ ಮಾಫಿಯಾಗೆ ಬಲಿಯಾದ ಓರ್ವ ಭಿಕ್ಷುಕ ಹಾಗೂ ಮಗುವೊಂದನ್ನು ಶಿವಣ್ಣ ರಕ್ಷಿಸುತ್ತಾರೆ.

ಆರುನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ ಫಳನಿ ರಾಜ್ ಅವರ ನಿರ್ದೇಶನದಲ್ಲಿ ಈ ಸನ್ನಿವೇಶ ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರದ ಎರಡು ಹಾಡುಗಳನ್ನು ಆಸ್ಟ್ರೇಲಿಯಾ ಹಾಗೂ ಯೂರೋಪ್‌ನಲ್ಲಿ ಚಿತ್ರೀಕರಿಸಲಾಗುತ್ತದೆ. ಪ್ರಮುಖ ಸನ್ನಿವೇಶಗಳನ್ನು ಬೆಂಗಳೂರಿನ ರೇಸ್‌ಕೋರ್ಸ್‌ನಲ್ಲಿ ಚಿತ್ರೀಕರಿಸಲಾಗುವುದು ಎಂದು ನಿರ್ಮಾಪಕ ಶ್ರೀಕಾಂತ್ ತಿಳಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Hat Trick Hero Shivarajkumar lead movie Shiva to be released during the next year’s Mahaashivarathri. Om Prakash Rao is directing this film while glamorous Raagini is the heroine of the film.Shivanna saves a beggar and a child who would have become a victim of Beggar’s Mafia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X