ದುನಿಯಾ ಸೂರಿ ಆಕ್ಷನ್, ಕಟ್‌ನಲ್ಲಿ ಹ್ಯಾಟ್ರಿಕ್ ಹೀರೋ
ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ದುನಿಯಾ ಸೂರಿ ಆಕ್ಷನ್, ಕಟ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ವಿಚಿತ್ರ ಶೀರ್ಷಿಕೆ ವಿಚಿತ್ರವಾಗಿದೆ, ಅದೇನೆಂದರೆ 'ಕಡ್ಡಿ ಪುಡಿ' ಎಂದು!
ಆದರೆ ಈ ಚಿತ್ರ ಸೆಟ್ಟೇರಲು ಶಿವಣ್ಣನ ಅಭಿಮಾನಿಗಳು ಎರಡು ವರ್ಷ ಕಾಯಬೇಕು.2012ರಲ್ಲಿ ಸೆಟ್ಟೇರಲಿರುವ ಕಡ್ಡಿ ಪುಡಿ 2013ರ ಹೊತ್ತಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಅಲ್ಲಿಯವರೆಗೂ ಶಿವಣ್ಣ ಅಭಿಮಾನಿಗಳು ಕಾಯಲೇಬೇಕು. ಸದ್ಯಕ್ಕೆ 'ಕಡ್ಡಿಪುಡಿ' ಚಿತ್ರಕತೆ ಹೆಣೆಯುವಲ್ಲಿ ಸೂರಿ ಬಿಜಿಯೋ ಬಿಜಿಯಂತೆ.
ಇದಕ್ಕೂ ಮುನ್ನ ದುನಿಯಾ ಸೂರಿ ಮತ್ತೆರಡು ಚಿತ್ರಗಳು ಸೆಟ್ಟೇರಲಿವೆ. ಒಂದು ಪುನೀತ್ ರಾಜ್ ಕುಮಾರ್ ಅವರೊಂದಿಗೆ 'ಅಣ್ಣಾಬಾಂಡ್' ಚಿತ್ರ. ಮತ್ತೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ 'ಕೆಂಡ ಸಂಪಿಗೆ'. ಇವರೆಡೂ ಚಿತ್ರಗಳು ಮುಗಿಯುವ ಹೊತ್ತಿಗೆ ಎರಡು ವರ್ಷ ಕಳೆದುಹೋಗಿರುತ್ತದೆ. ಆಗಷ್ಟೇ 'ಕಡ್ಡಿಪುಡಿ'ಗೆ ಕೈಹಾಕಲಿದ್ದಾರೆ ಸೂರಿ.
More from Filmibeat
English summary
Duniya Suri says action, cut to Hat Trick Hero Shivarajkumar. The movie is titled as Kaddi Pudi. But the movie to be launched in 2012. Until Shivarajkumar fans should wait to watch this movie, suppose to release in 2013. More details are awaited.
ದುನಿಯಾ ಸೂರಿ ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ದರ್ಶನ್ ಕೆಂಡ ಸಂಪಿಗೆ duniya suri shiva rajkumar puneeth rajkumar hat trick hero darshan


Click it and Unblock the Notifications











