ಶಾಕಿಂಗ್ ನ್ಯೂಸ್...ಶ್ರುತಿ ಹಾಸನ್‌ಗೆ ತೀವ್ರ ದೃಷ್ಟಿದೋಷ!
ಸಕಲ ಕಲಾ ವಲ್ಲಭ ಕಮಲ ಹಾಸನ್ ಮಗಳು ಶ್ರುತಿ ಹಾಸನ್ ಇಷ್ಟೆಲ್ಲಾ ನಿರ್ಭಿಡೆಯಾಗಿ ಮಾತನಾಡಬಲ್ಲಳು ಎಂದು ಗೊತ್ತಾಗಿದ್ದೇ ಆಕೆ ಟ್ವೀಟ್ ಮಾಡಿದ ಮೇಲೆ. ಆಕೆ ಟ್ವೀಟ್ ಓದಿದವರು ಶಾಕ್ ಆಗಿದ್ದಾರೆ. ಇಷ್ಟಕ್ಕೂ ಆಕೆ ಟ್ವಿಟ್ಟರ್‌ನಲ್ಲಿ ಹೇಳಿದ್ದೇನೆಂದರೆ...
"ನನಗೆ ಶೇಕಡಾ ತೊಂಬತ್ತಷ್ಟು ಕುರುಡುತನವಿದೆ. ಕನ್ನಡಕ ಇಲ್ಲದಿದ್ದರೆ ತುಂಬ ಕಷ್ಟವಾಗುತ್ತದೆ. ನಾನು ಎರಡು ಸೆಂ.ಮೀಗಳಿಗಿಂತಲೂ ದೂರದ ವಸ್ತುಗಳನ್ನು ನೋಡಲಾರೆ.ಹಾಗಾಗಿ ನಾನು ಯಾರನ್ನೂ ವಿಶ್ ಮಾಡುವುದಿಲ್ಲ. ಎದುರಿಗಿರುವವರು ನನಗೆ ಕಾಣಿಸದಿರುವುದೇ ಇದಕ್ಕೆ ಕಾರಣ " ಎಂದಿದ್ದಾರೆ.
ಎದುರಿಗಿರುವವರು ಯಾರು ಎಂದು ಗೊತ್ತಾಗದಿದ್ದಾಗ ಹೇಗೆ ವಿಶ್ ಮಾಡುವುದು. ಹಾಗಾಗಿ ಬಳಿಕ ಅವರು ತಮಗೆ ಸಿಕ್ಕಿದಾಗ ಅವರಲ್ಲಿ ಕ್ಷಮೆ ಕೇಳುತ್ತೇನೆ. ಮೊನ್ನೆ ಒಂದು ದಿನ ಹಾಗೇ ಆಯಿತು. ಗ್ಲಾಸ್ ಡೋರ್ ಮೂಲಕ ಹೊರಡುತ್ತಿರಬೇಕಾದರೆ ಅಪರಿಚಿತರೊಬ್ಬರನ್ನು ವಿಶ್ ಮಾಡಿದೆ ಎಂದು ಟ್ವಿಟ್ಟರ್ ಖಾತೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ನನಗೆ ಪ್ರತಿಯೊಂದು ಮಸುಕು ಮಸುಕಾಗಿ ಕಾಣುತ್ತದೆ. ನನಗಿರುವ ದೃಷ್ಟಿದೋಷದ ಕಾರಣ ಬಹಳಷ್ಟು ಇರುಸು ಮುರುಸಾಗುತ್ತದೆ. ನನ್ನ ಕಣ್ಣಿನ ದೃಷ್ಟಿ ಕೇವಲ ಸಂಪರ್ಕ ಮಸೂರ (ಕಾಂಟಾಕ್ಟ್ ಲೆನ್ಸ್) ಮತ್ತು ಕನ್ನಡಕಗಳ ಮೇಲೆ ಅವಲಂಬಿಸಿದೆ ಎಂದು ಅಲವತ್ತುಕೊಂಡಿದ್ದಾರೆ. ಕನ್ನಡದ 'ಪೃಥ್ವಿ' ಚಿತ್ರದಲ್ಲಿ ಶ್ರುತಿ ಹಾಸನ್ ಹಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.


Click it and Unblock the Notifications











