ಬೆಂಗಳೂರಿಗೆ ವಾಪಸ್ಸಾದ 'ಶ್ರೀಹರಿ'
ಸಿ.ಕೆ. ಫಿಲಂಸ್ ಹಾಗೂ ಡಿ ಪಿಕ್ಚರ್ಸ್ ಲಾಂಛನದಲ್ಲಿ ಎಸ್.ಎ. ಚಿನ್ನೇಗೌಡ, ಎಂ. ಎನ್. ಕುಮಾರ್ ಹಾಗೂ ದಯಾಳ್ ಪದ್ಮನಾಭನ್ ಸೇರಿ ನಿರ್ಮಿಸುತ್ತಿರುವ ಶ್ರೀಹರಿ ಚಿತ್ರದಲ್ಲಿ ಪೂಜಾ ಗಾಂಧಿ ಹಾಗೂ ರಾಧಿಕಾ ಗಾಂಧಿ ಒಟ್ಟಿಗೇ ಅಭಿನಯಿಸುತ್ತಿದ್ದು, ಬೆಂಗಳೂರಿನಲ್ಲಿ 3 ಹಾಡುಗಳನ್ನು ಮುಗಿಸಿ,ಕೊಂಡಿದೆ.
ಇಪ್ಪತ್ತು ದಿನಗಳ ಕಾಲ ಮಂಗಳೂರು ಸುತ್ತಮುತ್ತ ಮಲ್ಪೆ ಬೀಚ್ ಹಾಗೂ ಬೀಚ್ ಪಕ್ಕದ ದೊಡ್ಡ ಬಂಗಲೆಯೊಂದರಲ್ಲಿ ಹಾಗೂ ಸಕಲೇಶಪುರದ ಸುತ್ತಮುತ್ತ ರಮ್ಯ ಹೊರಾಂಗಣದಲ್ಲಿ ಉಳಿದ 2 ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಇದೀಗ ಬೆಂಗಳೂರಿಗೆ ವಾಪಸಾಗಿದೆ.
ಎಂ.ಎಲ್. ಪ್ರಸನ್ನ ಅವರ ಸಂಭಾಷಣೆ, ಬಿ. ರಾಕೇಶ್‌ರ ಛಾಯಾಗ್ರಹಣ, ಸಮೀರ್ ಕುಲಕರ್ಣಿರವರ ಸಂಗೀತ ಸಂಯೋಜನೆ, ರೇವಣ್ಣ ಅವರ ಕಲಾನಿರ್ದೇಶನ, ಹರ್ಷ-ಮುರಳಿ ಅವರ ನೃತ್ಯ ಸಂಯೋಜನೆ, ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, ನಾಗೇಂದ್ರಪ್ರಸಾದ್, ಶಶಾಂಕ್‌ರ ಸಾಹಿತ್ಯ ರಚನೆ ಈ ಚಿತ್ರಕ್ಕಿದ್ದು, ಕಥೆ-ಚಿತ್ರಕಥೆ-ನಿರ್ದೇಶನ ದಯಾಳ್ ಪದ್ಮನಾಭನ್ ಅವರದಾಗಿದೆ.
ಶ್ರೀಮುರಳಿ, ರಾಧಿಕಾ ಗಾಂಧಿ, ಪೂಜಾ ಗಾಂಧಿ, ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಅಚ್ಯುತ್, ಪದ್ಮಜಾ ರಾವ್, ನವೀನ್ ಕೃಷ್ಣ, ಶರಣ್, ನಾಗಶೇಖರ್, ಸಂಗೀತಾ, ಶೋಭಾ ನಾಯ್ಡು, ಶ್ರೀನಿವಾಸಮೂರ್ತಿ, ಪ್ರಮುಖ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











