ತಿರುಪತಿ ತಿಮ್ಮಪ್ಪ ತಪ್ಪಾಯ್ತು ಎಂದ ತಮನ್ನಾ ಭಾಟಿಯಾ

By Rajendra

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಿರುಪತಿ ತಿಮ್ಮಪ್ಪ ಕ್ಷಮಿಸಪ್ಪಾ ತಪ್ಪಾಯ್ತು ಎಂದು ಕೆನ್ನೆಗೆ ಹಾಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಟೈಟ್ ಜೀನ್ಸ್‌ನಲ್ಲಿ ತಮನ್ನಾ ತಿರುಪತಿ ತಿಮ್ಮಪ್ಪನಿಗೆ ಅಡ್ಡ ಬಿದ್ದಿದ್ದರು. ಸಂಪ್ರದಾಯ ಮುರಿದು ತಿಮ್ಮಪ್ಪನ ದರ್ಶನ ಭಾಗ್ಯ ಪಡೆದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿರುವ ತಮನ್ನಾ, ಜೀನ್ಸ್ ಪ್ಯಾಂಟು, ಟೀ ಶರ್ಟಿನಲ್ಲಿ ತಿರುಪತಿಗೆ ಭೇಟಿ ನೀಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಆ ದಿನ ತರಾತುರಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದಿದ್ದೆ. ಏನೋ ಅಚಾನಕ್ಕಾಗಿ ಈ ಘಟನೆ ನಡೆದು ಹೋಯಿತು. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದಿದ್ದಾರೆ.

ತಾನು ದೇವಸ್ಥಾನಕ್ಕೆ ಹೋಗಬೇಕಾದರೆ ಲಕ್ಷಣವಾಗಿ ಸೀರೆ ಉಟ್ಟೋ ಅಥವಾ ಸಲ್ವಾರ್ ಕಮೀಜ್ ಧರಿಸಿಯೋ ಹೋಗುತ್ತೇನೆ. ಅಂದು ಬಟ್ಟೆ ಬದಲಾಯಿಸಿಕೊಳ್ಳಲು ಟೈಮಿರಲಿಲ್ಲ. ಹಾಗಾಗಿ ಜೀನ್ಸ್‌ನಲ್ಲೇ ದೇವಸ್ಥಾನಕ್ಕೆ ಭೇಟಿ ನೀಡಬೇಕಾಯಿತು. ದಯವಿಟ್ಟು ಈ ವಿಚಾರವನ್ನು ಇಷ್ಟಕ್ಕೇ ಬಿಟ್ಟುಬಿಡಿ, ದೊಡ್ಡದು ಮಾಡಬೇಡಿ ಎಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
Actress Tamanna Bhatia clarified that she went to the Tirumala Tirupati temple in a hurry and did not have the time to change her clothes. She did not intend to insult anyone by visiting the Tirupati temple in jeans and t-shirt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X