»   » ಆಸೆ ತೋಡಿಕೊಂಡ ಮೀಸೆ ಚಿಗುರಿದ ನಾಯಕ!

ಆಸೆ ತೋಡಿಕೊಂಡ ಮೀಸೆ ಚಿಗುರಿದ ನಾಯಕ!

Subscribe to Filmibeat Kannada

*ಜಯಂತಿ

Tamil Star Tejas
ಐದು ವರ್ಷಗಳ ಹಿಂದೆ 'ಮೀಸೆ ಚಿಗುರಿದಾಗ" ಚಿತ್ರದಲ್ಲಿ ನಟಿಸಿ ಕಣ್ಮರೆಯಾಗಿದ್ದ ತೇಜಸ್ ಎನ್ನುವ ಹುಡುಗ ಮತ್ತೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದಾನೆ. ಐದು ವರ್ಷಗಳಿಗೊಮ್ಮೆ ಮುಖ ತೋರಿಸುವ ರಾಜಕಾರಣಿಗಳ ಗುಂಪಿಗೆ ತೇಜಸ್ ಸೇರಿದವರಾ? ವಿಷಯ ಅದಲ್ಲ; ಕನ್ನಡದ ನಿರ್ಮಾಪಕರಿಗೆ ತೇಜಸ್ ಪಥ್ಯವಾದಂತಿಲ್ಲ. ಆ ಕಾರಣಕ್ಕೇ, ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದ ತೇಜಸ್- 'ಅಭಿನಯಿಸಲಿಕ್ಕೆ ನಾನ್ ರೆಡಿ" ಎಂದು ಪ್ರಕಟಿಸಿದರು. ಚೆಂಡು ಕನ್ನಡ ನಿರ್ಮಾಪಕರ ಅಂಗಳದಲ್ಲಿ.

ತೇಜಸ್ ಸುಮ್ಮನೆ ಅವಕಾಶ ಕೇಳುತ್ತಿಲ್ಲ. ಅವರ ಬಯೋಡೇಟಾ ಭರ್ಜರಿಯಾಗಿದೆ. ತಮಿಳಿನ 'ಕಾದಲಕ್ಕು ಮರಣಂ ಇಲ್ಲೈ" ಚಿತ್ರದಲ್ಲಿವರು ನಾಯಕ. ಈ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ತೇಜಸ್ ಬಿಡುವಿನ ಸಮಯದಲ್ಲಿ ಗಾಂಧಿನಗರದಲ್ಲಿ ಪತ್ರಕರ್ತರ ಮುಂದೆ ನಿಂತಿದ್ದರು. ಅಂದಹಾಗೆ, 'ಕಾದಲಕ್ಕು ಮರಣಂ ಇಲ್ಲೈ" ಚಿತ್ರದ ನಿರ್ಮಾಪಕ ಕುಂಜಮೋನ್!

ಕುಂಜಮೋನ್ ಗೊತ್ತಲ್ಲ? ಅವರದ್ದು 'ಜಂಟಲ್‌ಮನ್" ಖ್ಯಾತಿ. 'ಕಾದಲನ್", 'ಕಾದಲ್ ದೇಸಂ" ಅವರ ನಿರ್ಮಾಣದ ಮತ್ತೆರಡು ಯಶಸ್ವಿ ಚಿತ್ರಗಳು. ಈ ಹಿಟ್ ನಿರ್ಮಾಪಕನಿಗೆ ಯಾರ ಮೂಲಕವೋ ತೇಜಸ್ ಫೋಟೊ ದೊರೆತಿದೆ. ಅದೃಷ್ಟ ಕೈಬೀಸಿ ಕರೆದಿದೆ. ಭಾರತೀರಾಜ, ಶಂಕರ್, ಸುರೇಶ್ ಕೃಷ್ಣ ಅವರ ಸಹಾಯಕರಾಗಿ ಕೆಲಸ ಮಾಡಿದ ಬಾಲಾಜಿ 'ಕಾದಲಕ್ಕು ಮರಣಂ ಇಲ್ಲೈ" ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನನ್ನ ಮುಂದಿನ ಚಿತ್ರಕ್ಕೂ ನೀನೇ ಹೀರೊ ಎಂದು ಕುಂಜಮೋನ್ ಬೆನ್ನುತಟ್ಟಿದ್ದಾರೆ. ಈ ನಡುವೆ ಮತ್ತೊಂದು ತಮಿಳು ಚಿತ್ರವೂ ತೇಜಸ್‌ರನ್ನು ಕೈಬೀಸಿ ಕರೆದಿದೆ. ಆದರೆ, ತೇಜಸ್ ಮನ ಕನ್ನಡದತ್ತಲೇ ತುಡಿಯುತ್ತಿದೆ.

ಕನ್ನಡದಲ್ಲಿ ಅವಕಾಶ ಬೇಕು ಎನ್ನೋದು ಈ ಹುಡುಗನ ಹಂಬಲ. ಹೂಂ ಎನ್ನು ಗಾಂಧಿನಗರವೇ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada