ತೆಲುಗಿನಲ್ಲಿ ಉಪೇಂದ್ರ ಸೂಪರ್‌ಗೆ ಭರ್ಜರಿ ಓಪನಿಂಗ್

By Rajendra

ವಿಶ್ವಕಪ್ ಕ್ರಿಕೆಟ್ ಜ್ವರದ ನಡುವೆಯೂ ಉಪೇಂದ್ರ ಅಭಿನಯದ 'ಸೂಪರ್'ಚಿತ್ರಕ್ಕೆ ಆಂಧ್ರದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು ಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ 'ಸೂಪರ್' ತೆಲುಗು ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾಗಿದೆ. ಚಿತ್ರದ ಬಗ್ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉಪೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ತೆಲುಗಿನ ಅತ್ಯಧಿಕ ಪ್ರಸಾರ ಸಂಖ್ಯೆಯುಳ್ಳ 'ಈನಾಡು' ಹಾಗೂ 'ವಾರ್ತಾ' ಪತ್ರಿಕೆಗಳಲ್ಲಿ ಸೂಪರ್ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ವ್ಯಕ್ತವಾಗಿತ್ತು. ಉಪೇಂದ್ರ ಅಭಿನಯದ ಬಗೆಗೂ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದವು. ಕರ್ನಾಟಕದಲ್ಲಿ ಹಣ ಬಾಚಿದ 'ಸೂಪರ್' ಚಿತ್ರ ಈಗ ಆಂಧ್ರದ ಬಾಕ್ಸಾಫೀಸಿನಲ್ಲೂ ಸದ್ದು ಮಾಡುತ್ತಿದೆ.

ಚಿತ್ರದ ಕತೆಯಲ್ಲಿನ ಹೊಸತನದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದು ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೂ ಕಾರಣವಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ. 'ಸೂಪರ್' ಚಿತ್ರದ ಆಂಧ್ರ ವಿತರಕರ ಜೇಬಿಗೂ ದುಡ್ಡು ಹರಿದು ಬರುತ್ತಿದ್ದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೆ ತಮಿಳಿಗೆ ಈ ಚಿತ್ರವನ್ನು ಡಬ್ ಮಾಡಲಾಗುತ್ತದೆ ಎಂದು ಉಪ್ಪಿ ತಿಳಿಸಿದ್ದಾರೆ.

More from Filmibeat

English summary
Real Star Upendra acted Super movie receives extra ordinary reviews from Telugu film industry. Telugu dubbing of Super is doing very well in Andhra Pradesh despite the cricket season. Telugu newspapers like 'Ee Nadu' and 'Vartha' which described Super as Upendra's best creative attempt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X