ಶ್!! ಕಲ್ಪನ ಜೊತೆ ಬರಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ

By Rajendra

ರಿಯಲ್ ಸ್ಟಾರ್ ಉಪೇಂದ್ರ ಏಕಧಾಟಿಯ ಚಿತ್ರಗಳಿಂದ ಹೊರಬರಲು ನೋಡುತ್ತಿದ್ದಾರೆ. ಅವರು ಮತ್ತೆ ತಮ್ಮ 'ಶ್!!' ದಿನಗಳಿಗೆ ಹೊರಳಲಿದ್ದಾರೆ. 1993ರಲ್ಲಿ ಬಿಡುಗಡೆಯಾದ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದಿದ್ದ ಶ್!! ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು.

ಕುಮಾರ್ ಗೋವಿಂದ್ ಅಭಿನಯದ ಮೊದಲ ಚಿತ್ರ ಇದಾಗಿತ್ತು. ಉಪೇಂದ ನಿರ್ದೇಶನದಲ್ಲಿ ಮೂಡಿಬಂದಿದ್ದ ಎರಡನೇ ಚಿತ್ರವಿದು. ಈಗ ಮತ್ತೊಮ್ಮೆ ಅಂತಹದ್ದೇ ಚಿತ್ರವೊಂದನ್ನು ಉಪ್ಪಿ ಕೈಗೆತ್ತಿಕೊಂಡಿದ್ದಾರೆ. ತಮಿಳು, ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿರುವ 'ಕಾಂಚನಾ'ವನ್ನು ಕನ್ನಡಕ್ಕೆ ತರುತ್ತಿರುವುದು ಗೊತ್ತೇ ಇದೆ.

ಈ ಚಿತ್ರಕ್ಕೆ ಕನ್ನಡದಲ್ಲಿ 'ಕಲ್ಪನ' ಎಂದು ಹೆಸರಿಡಲಾಗಿದೆ. ಉಪ್ಪಿ ನಿರ್ದೇಶನದಲ್ಲಿ ಮೂಡಿಬಂದಂತಹ ಏಕೈಕ ಹಾರರ್ ಚಿತ್ರ 'ಶ್!!'. ಈಗ ಮತ್ತೊಮ್ಮೆ ಪ್ರೇಕ್ಷಕರಿಗೆ ಥ್ರಿಲ್ ನೀಡಲು ಉಪ್ಪಿ ಮುಂದಾಗಿದ್ದಾರೆ. ತಮಿಳಿನಲ್ಲಿ ಲಕ್ಷ್ಮಿ ರೈ ಪೋಷಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಶ್ರುತಿ ಪೋಷಿಸುವ ಸಾಧ್ಯತೆಗಳಿವೆ. ಉಳಿದ ಮಾಹಿತಿ ಇನ್ನಷ್ಟೇ ಹೊರಬೀಳಬೇಕು. (ಏಜೆನ್ಸೀಸ್)

More from Filmibeat

English summary
Upendra is in a mood for a change. The actor, who has often preferred different genre films, is all set to star in a horror movie for the first time. Yes, he is gearing up to recreate the magic of his yesteryear directorial movie Shh with his next movie, which is a a remake of Tamil-Telugu superhit movie Kanchana. The Kannada version has been titled Kalpana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X