ಹಿಂದಿ, ಒರಿಯಾ ಭಾಷೆಗಳಿಗೆ ಉಪೇಂದ್ರ ಸೂಪರ್

By Rajendra

ಉಪೇಂದ್ರ ನಿರ್ದೇಶನದ 'ಸೂಪರ್ ಚಿತ್ರ ತೆಲುಗಿಗೆ ಡಬ್ ಆಗುತ್ತಿರುವುದು ಗೊತ್ತಿರುವ ವಿಷಯ. ಇದೇ ತಿಂಗಳ 21ರಂದು ಹೈದರಾಬಾದ್‌ನಲ್ಲಿ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆಯಲಿದೆ. ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯನ್ನು ಉಪೇಂದ್ರ ನಡೆಸುತ್ತಿದ್ದಾರೆ. ತೆಲುಗಿನಲ್ಲಿ ಬಿಡುಗಡೆಯಾದ ನಂತರ ತಮಿಳಿಗೆ ಡಬ್ ಮಾಡುವ ಕೆಲಸ ಆರಂಭವಾಗಲಿದೆ.

ರಾಷ್ಟ್ರ ಭಾಷೆ ಹಿಂದಿ ಸೇರಿದಂತೆ ಒರಿಯಾ ಹಾಗೂ ಬಂಗಾಳಿ ಭಾಷೆಯ ನಿರ್ಮಾಪಕರು ಡಬ್ಬಿಂಗ್ ಹಕ್ಕನ್ನು ಪಡೆಯಲು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರನ್ನು ಸಂಪರ್ಕಿಸಿದ್ದಾರೆ. ತೆಲುಗು-ತಮಿಳಿನಲ್ಲಿ ಬಿಡುಗಡೆಯಾದ ನಂತರ ಈ ಚಿತ್ರವನ್ನು ವಿದೇಶದಲ್ಲಿ ಬಿಡುಗಡೆ ಮಾಡುವುದಾಗಿ ರಾಕ್‌ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ಪೈರಸಿ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ವಿದೇಶಗಳಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ತಡವಾಗಿ ಪ್ರಾರಂಭಿಸಲು ರಾಕ್‌ಲೈನ್ ನಿರ್ಧರಿಸಿದ್ದಾರೆ. ಕನ್ನಡ ಚಿತ್ರವೊಂದು ಈ ರೀತಿ ದೇಶದ ನಾನಾ ಭಾಷೆಗಳಿಗೆ ಡಬ್ ಆಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ.

ಇತ್ತೀಚೆಗೆ ಟಿವಿ 9ನಲ್ಲಿ ಮುಖ್ಯಮಂತ್ರಿ ಬಿ ಯಸ್ ಯಡಿಯೂರಪ್ಪ ಅವರನ್ನು ಉಪ್ಪಿ ಸಂದರ್ಶಿಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತಮ್ಮ ಸಚಿವ ಸಂಪುಟದ ಸ ಹದ್ಯೋಗಿಗಳೊಂದಿಗೆ ಸೂಪರ್ ಚಿತ್ರವನ್ನು ವೀಕ್ಷಿಸುವುದಾಗಿಯೂ ಯಡಿಯೂರಪ್ಪ ತಿಳಿಸಿದ್ದಾರೆ. [ಉಪೇಂದ್ರ]

More from Filmibeat

English summary
Real star Upendra directed and acted Kannada movie Super dubbed into Hindi and Oriya. Meanwhile the Telugu version of the movie is ready to hit the screen in February. On Jan 21st Telugu 'Super' audio to be launched in Hyderabad. Recently Karnataka Chief Minister B S Yeddyurappa expressed his desire to watch the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X