twitter
    For Quick Alerts
    ALLOW NOTIFICATIONS  
    For Daily Alerts

    ಶನಿಮಹದೇವಪ್ಪ ಅವರಿಗೆ ವರದರಾಜ್ ಪ್ರಶಸ್ತಿ

    By Staff
    |

    Vardharaj Tribute Award for Shani Mahadevappa
    ವರನಟ ಡಾ.ರಾಜ್ ಕುಮಾರ್ ಅವರ ಸಹೋದರ ಎಸ್.ಪಿ.ವರದರಾಜು ಅವರ ಹೆಸರಿನಲ್ಲಿ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ತಲಾ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ(ಮಾ.17) ಸಂಜೆ 5.45ಕ್ಕೆ ಕನ್ನಡ ಭವನ ನಯನ ಸಭಾಂಗಣದಲ್ಲಿ ನಡೆಯಲಿದೆ. ರಂಗಭೂಮಿ ಕಲಾವಿದೆ ಸರೋಜಮ್ಮ ಮತ್ತು ಚಲನಚಿತ್ರ ಹಿರಿಯ ನಟ ಶನಿಮಹದೇವಪ್ಪ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.

    ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದ ರಂಗಭೂಮಿ ಕಲಾವಿದೆ ಸರೋಜಮ್ಮ ಧುತ್ತರಗಿ ಶ್ರೇಷ್ಠ ಅಭಿನೇತ್ರಿ. ಯಾವುದೇ ಪಾತ್ರವಿರಲಿ ಲೀಲಾಜಾಲವಾಗಿ ಅಭಿನಯಿಸುವ ಕಲಾವಿದೆ. 8ನೇ ವಯಸ್ಸಿಗೇ ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗಭೂಮಿಗೆ ಧುಮುಕಿದವರು. 25ನೇ ವಯಸ್ಸಿನಲ್ಲಿ ಕವಿ ಧುತ್ತರಗಿ ಅವರನ್ನು ವಿವಾಹವಾದರು. ಅವರಿಗೆ ಎಸ್ ಪಿ ವರದರಾಜು ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.

    ಮಂಡ್ಯ ಜಿಲ್ಲೆಯ ಮಳವಳ್ಳಿಯ ಬೆಳಕವಾಡಿಯವರಾದ ಶನಿಮಹದೇವಪ್ಪ ಸರಳತೆ ಮತ್ತು ಸೌಜನ್ಯಪೂರಿತ ವ್ಯಕ್ತಿತ್ವದವರು. ಹಿರಿಯ ಪೋಷಕ ನಟ. 'ಶನಿದೇವ'ನ ಪಾತ್ರದ ಮೂಲಕ ಶನಿಮಹದೇವಪ್ಪ ಎಂದು ಹೆಸರಾದವರು. ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರರಾದವರು.

    ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಕಾರ್ಯದರ್ಶಿ ಜಯರಾಮರಾಜ ಅರಸ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಖ್ಯಾತ ಸಾಹಿತಿ, ಚಿಂತಕ ಹಾಗೂ ಚಲನಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ಆಶಯ ಭಾಷಣ ಮಾಡಲಿದ್ದಾರೆ.

    (ದಟ್ಸ್ ಕನ್ನಡ ವಾರ್ತೆ)

    ಚಿತ್ರ ವಿಮರ್ಶೆ: 3ನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ
    ಇರುವುದೆಲ್ಲವ ಬಿಟ್ಟು ಇರದುದೆರೆಡೆಗೆ...

    Tuesday, March 17, 2009, 10:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X