»   »  ಈ ಶತಮಾನದ ವೀರಮದಕರಿ ನಾನೇ ಎಂದ ಕಿಚ್ಚ

ಈ ಶತಮಾನದ ವೀರಮದಕರಿ ನಾನೇ ಎಂದ ಕಿಚ್ಚ

Posted By:
Subscribe to Filmibeat Kannada
Veera Madakari hits silver screen on March 20
ವೀರ ಮದಕರಿ ಚಿತ್ರದ ನಾಯಕ ಹೇಗಿದ್ದಾನೋ ಯಾರಿಗೂ ಗೊತ್ತಿಲ್ಲ. ಆದರೆ ಕಿಚ್ಚಿ ಮಾತ್ರ ನಾನೇ ಈ ಶತಮಾನದ ವೀರ ಮದಕರಿ ಎಂದು ಚಿತ್ರಮಂದಿರಗಳಿಗೆ ಲಗ್ಗೆಯಿಡಲು ಇದೇ ತಿಂಗಳ 20 ರಂದು ಬರುತ್ತಿದ್ದಾನೆ. ಸುದೀಪ್‌ಗೆ ಮೊದಲಿನಿಂದಲೂ ರೀಮೇಕ್ ಸಿನಿಮಾಗಳ ಬಗ್ಗೆ ಬಲವಾದ ನಂಬಿಕೆ. ಅದಕ್ಕೆ ಕಾರಣವಿಲ್ಲದೆ ಇಲ್ಲ.

ಸುದೀಪ್‌ಗೆ ಸ್ಟಾರ್‌ಪಟ್ಟ ನೀಡಿದ್ದು ಕೂಡ 'ಹುಚ್ಚ' ಎಂಬ ತಮಿಳಿನ 'ಸೇತು' ರೀಮೇಕ್ ಸಿನಿಮಾನೇ ತಾನೇ! ಸುದೀಪ್‌ಗೆ ಹೆಚ್ಚಿನ ಹೆಂಗೆಳೆಯರ ಅಭಿಮಾನವನ್ನು ದಕ್ಕಿಸಿಕೊಟ್ಟ 'ಮೈ ಆಟೋಗ್ರಾಫ್' ಕೂಡ ತಮಿಳಿನಲ್ಲಿ ಚೇರನ್ ನಟಿಸಿ, ನಿರ್ದೇಶಿಸಿದ 'ಆಟೋಗ್ರಾಫ್' ಸಿನಿಮಾದ ರೀಮೇಕ್. ಹೀಗಾಗಿ ರೀಮೇಕ್ ಬಗ್ಗೆ ಸುದೀಪ್ ಗೆ ಸ್ವಲ್ಪ ಒಲವು ಜಾಸ್ತಿಯಂದೆ ತಪ್ಪಗಲಾರದು.

ಈಗ ಸಿದ್ದವಾಗಿರುವ 'ಈ ಶತಮಾನದ ವೀರ ಮದಕರಿ' ಕೂಡ ತೆಲುಗಿನಲ್ಲಿ ರವಿತೇಜ ನಟಿಸಿದ್ದ ಎಸ್.ಎಸ್.ರಾಜಮೌಳಿ ನಿರ್ದೇಶನದ ವಿಕ್ರಮಾರ್ಕಡು ಚಿತ್ರದ ರೀಮೇಕ್. ಅಂದಾಗೆ ಈ ಸಿನಿಮಾದಲ್ಲಿ ಕಿಚ್ಚ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಒಂದು ಪಾತ್ರ ಪೋಲೀಸ್ (ಮದಕರಿ) ಮತ್ತೊಂದು ಕಳ್ಳನ ಪಾತ್ರ. ಬಳ್ಳಾರಿ ಕಡೆಯಿಂದ ಎಂ.ಪಿ ಅಭ್ಯರ್ಥಿಯಾಗಿ ನಿಲ್ಲಪ್ಪ ಅಂತೇಳಿ ಗೌಡ್ರ ಪಕ್ಷದಿಂದ ಕರೆಯೇನೋ ಬಂದಿದೆ. ಆದರೆ ಕಿಚ್ಚ ಮಾತ್ರ ಎಲ್ಲೂ ಬಾಯಿಬಿಟ್ಟಿಲ್ಲ.ಕಾದು ನೋಡೋಣ ಸಿನಿಮಾ ಬಿಡುಗಡೆ ನಂತರ ಕಿಚ್ಚ ಬಳ್ಳಾರಿ ಕಡೆಗೆ ಮುಖ ಮಾಡುತ್ತಾರೋ ಇಲ್ಲವೋ ಅಂತ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸುದೀಪ್ ವೀರ ಮದಕರಿ ಚಿತ್ರಕ್ಕೆ ಮರು ನಾಮಕರಣ
ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada