For Quick Alerts
  ALLOW NOTIFICATIONS  
  For Daily Alerts

  ಮೈ ನೇಮ್ ಈಸ್ 'ಕರಿಚಿರತೆ' ಎಂದ ವಿಜಯ್

  By Rajendra
  |

  ಕೃಷ್ಣಯ್ಯ ಹಾಗೂ ಮೋಹನ್ ನಿರ್ಮಾಣದ 'ಕರಿಚಿರತೆ' ಚಿತ್ರಕ್ಕೆ ಕಳೆದ ವಾರ ಮಿನರ್ವ ಮಿಲ್‌ನಲ್ಲಿ ಹಾಡೊಂದರ ಚಿತ್ರೀಕರಣ ನಡೆಯಿತು. ಗಜ, ರಾಮ್ ಚಿತ್ರಗಳ ನಿರ್ದೇಶಕ ಮಾದೇಶ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿಜಯ್ ಕರಿಚಿರತೆಯಾಗಿ ಅಭಿನಯಿಸುತ್ತಿದ್ದಾರೆ.

  ಈಗಾಗಲೇ ಮೈಸೂರು ಸುತ್ತಮುತ್ತ 25 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ಮೊನ್ನೆ ಮಿಲ್‌ನ ಆವರಣದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಹಾಕಲಾಗಿದ್ದ ಅದ್ಧೂರಿ ಸೆಟ್‌ನಲ್ಲಿ 'ಮೈ ನೇಮ್ ಈಸ್ ಕರಿ ಚಿರತೆ...' ಎಂಬ ಹಾಡಿಗೆ ವಿಜಯ್, ಯಜ್ಞ ಶೆಟ್ಟಿ ಜೊತೆ 25 ಜನ ನೃತ್ಯಕಲಾವಿದರು ಹೆಜ್ಜೆ ಹಾಕುತ್ತಿದ್ದರು. ಹರ್ಷ ನೃತ್ಯ ನಿರ್ದೇಶನದಲ್ಲಿರುವ ಈ ಹಾಡು ನಾಯಕ, ನಾಯಕಿಗೆ ಪ್ರೇಮ ನಿವೇದನೆ ಮಾಡುವ ಕಾನ್ಸೆಪ್ಟ್ ಹೊಂದಿದೆ.

  ಜೀವನದಲ್ಲಿ ನಮಗಿರುವ ಆಸೆ ಒಂದಾಗಿದ್ದರೆ, ನಡೆವುದೇ ಬೇರೆಯಾಗಿರುತ್ತದೆ. ಆ ರೀತಿಯ ಘಟನೆ ನಾಯಕನ ಜೀವನದಲ್ಲಿ ಆದಾಗ ಆತ ಭ್ರಮನಿರಸನಗೊಂಡು ಹುಚ್ಚನಾಗುತ್ತಾನೆ. ನಾಯಕ ವಿಜಯ್ ಈ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಎನ್ನುತ್ತಾರೆ ನಿರ್ದೇಶಕ ಮಾದೇಶ್. ಸಾಧು ಕೋಕಿಲಾರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಶರ್ಮಿಳಾ ಮಾಂಡ್ರೆ ಹಾಗೂ ಯಜ್ಞ ಶೆಟ್ಟಿ ಇಬ್ಬರು ನಾಯಕಿಯರಿದ್ದು, ಜೈಜಗದೀಶ್, ರಂಗಾಯಣ ರಘು, ಸಂಗೀತ, ಸುಧಾ ಬೆಳವಾಡಿ ಪ್ರಮುಖ ಪಾತ್ರದಲ್ಲಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X