»   » ಭಾವನಾ ಭಾವಲೋಕದಲ್ಲಿ ಎಂಥದೋ ತಲ್ಲಣ

ಭಾವನಾ ಭಾವಲೋಕದಲ್ಲಿ ಎಂಥದೋ ತಲ್ಲಣ

Subscribe to Filmibeat Kannada

*ಜಯಂತಿ

Actress Bhavana
'ಬ್ಲೌಸ್ ಅರ್ಧ ಇಂಚು ಚಿಕ್ಕದಾಗಿದೆ" ಭಾವನಾ ಅಲವತ್ತುಕೊಂಡರು. ಕಾಶಿಯಲ್ಲಿ ಒಂದರ ಮೇಲೊಂದು ಬೀಳುವ ಹೆಣಗಳನ್ನು ನೋಡಿ ಅವರಿಗೆ ಬದುಕಿನ ಬೇರೆಯ ಮುಖದ ಪರಿಚಯವಾಗಿದೆ. ಕೊನೆಕೊನೆಗೆ ಅದೇ ಬದುಕು ಅಂತಲೂ ಅನ್ನಿಸಿದೆ. ಶೇಷಾದ್ರಿ ನಿರ್ದೇಶನದ ವಿಮುಕ್ತಿ ಚಿತ್ರ ಕೊಟ್ಟ ಜೀವನಪಾಠವನ್ನು ಅವರು ತತ್ವಜ್ಞಾನಿಯಂತೆ ಹೇಳುತ್ತಾ ಹೋದರು.

ಸಾವಿನ ಬಾಗಿಲಲ್ಲಿ ನಿಂತ ಅನೇಕ ಜೀವಗಳನ್ನು ನೇವರಿಸಿದ ಮೇಲೆ ಅವರ ಮನಸ್ಸಿನಲ್ಲಿ ಎಂಥದೋ ತಲ್ಲಣ. ಆ ತಲ್ಲಣಗಳ ಸಮೇತ ಬಂದು ಗಾಂಧಿಬಜಾರಿನಲ್ಲಿ ಕಾರಿನೊಳಗೆ ಕೂತಾಗ ಫೋನ್ ಕಾಲ್ ಬಂದು ಕೇಳುತ್ತದೆ- 'ಐಟಂ ಹಾಡಿದೆ. ಒಪ್ಕೋತೀರಾ?" ನಿಜ. 'ಹೊಡಿಮಗ" ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕುವ ಬುಲಾವು ಅದೇ ತಾನೆ ಬಂದಿತ್ತು. ಆದರೆ, ಒಪ್ಕೊಳ್ಳೋದೋ ಬೇಡವೋ ಎಂಬ ಗೊಂದಲ.

ಭಾವನಾಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿಲ್ಲವಲ್ಲ ಎಂಬ ಕುರಿತು ಬೇಸರವೇನೂ ಇಲ್ಲ. ಮುಂಬೈನಲ್ಲಿ ಅವರೀಗ ನೆಲೆಗೊಂಡಿದ್ದಾರೆ. ಆಗೀಗ ಇಲ್ಲಿಗೆ ಬಂದು ಬಣ್ಣ ಹಚ್ಚಿ ಹೋಗುವುದು ಇದ್ದೇ ಇದೆ. 'ನಾನಿರುವುದೇ ಹೀಗೆ. ಯಾವುದಕ್ಕೂ ಬೇಸರವಿಲ್ಲ" ಅಂತ ನಗುವಾಗಲೇ ಅವರ ಕಣ್ಣಾಲಿಗಳಲ್ಲಿ ಯಾಕೋ ನೀರಾಡುತ್ತದೆ. 'ಮುಖ್ಯಮಂತ್ರಿ ಐ ಲವ್ ಯೂ" ಚಿತ್ರದ ಡಬಿಂಗ್‌ಗೆ ರವಿ ಬೆಳೆಗೆರೆ ಇನ್ನೂ ಕರೆದೇ ಇಲ್ಲವಂತೆ. ಇನ್ನೊಂದು ಸಿನಿಮಾ ಮಾಡುವ ಆಶ್ವಾಸನೆಯನ್ನು ಕೂಡ ಅವರು ಕೊಟ್ಟಿದ್ದಾರೆ. ಅದು ಯಾವಾಗ ಅಂತ ಇನ್ನೂ ನಿರ್ಧಾರವಾಗಿಲ್ಲ. ಉಳಿದಂತೆ 'ವಿಮುಕ್ತಿ"ಯ ಹೊರತು ಭಾವನಾಗೆ ಬೇರೆ ಅವಕಾಶ ಸದ್ಯಕ್ಕೆ ಇಲ್ಲ.

'ಬಂದದ್ದೆಲ್ಲಾ ಬರಲಿ..." ಅಂತ ಅವರೊಮ್ಮೆ ಆಕಾಶ ನೋಡಿದರು. ಮೋಡ ಕವಿದುಕೊಂಡಿತು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada