twitter
    For Quick Alerts
    ALLOW NOTIFICATIONS  
    For Daily Alerts

    'H2O' ಸಿನಿಮಾಗೆ 17 ವರ್ಷ : ಸಿನಿಮಾದ ಐದು ವಿಶೇಷತೆಗಳು

    |

    Recommended Video

    ಉಪೇಂದ್ರರ H20 ಸಿನಿಮಾಗೆ 17 ವರ್ಷ | ಇಲ್ಲಿದೆ ಸಿನಿಮಾದ ಕೆಲವು ವಿಶೇಷತೆಗಳು | FILMIBEAT KANNADA

    ನಟ ಉಪೇಂದ್ರಗೆ ರಿಯಲ್ ಸ್ಟಾರ್ ಎಂಬ ಬಿರುದು ಬಂದಿದ್ದೆ ಅವರ ರಿಯಾಲಿಸ್ಟಿಕ್ ಸಿನಿಮಾಗಳಿಂದ. ಅಂತಹ ಒಂದು ಅದ್ಬುತ ಸಿನಿಮಾ 'H2O'. ಈ ಚಿತ್ರ ಬಿಡುಗಡೆಯಾಗಿದ್ದು, ಮಾರ್ಚ್ 29 2002.

    'H2O' ಸಿನಿಮಾ ರಿಲೀಸ್ ಆಗಿ ಇಂದಿಗೆ 17 ವರ್ಷ ಕಳೆದಿದೆ. ಈ ಸಂಭ್ರಮವನ್ನು ಉಪೇಂದ್ರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕರ್ನಾಟಕ ಹಾಗೂ ತಮಿಳು ನಾಡಿನ ನಡುವಿನ ಕಾವೇರಿ ನೀರಿನ ಸಮಸ್ಯೆಗೆ ಉಪೇಂದ್ರ ಸಿನಿಮಾ ರೂಪ ನೀಡಿದ್ದರು. ತಮ್ಮ ಪ್ರತಿಭೆ ಮೂಲಕ ಎರಡು ರಾಜ್ಯವೂ ಒಪ್ಪುವ ಸಿನಿಮಾ ಮಾಡಿದ್ದರು.

    50ನೇ ಸಿನಿಮಾದ ಎಕ್ಸ್ ಕ್ಲೂಸಿವ್ ವಿಚಾರ ಬಿಚಿಟ್ಟ ಉಪ್ಪಿ 50ನೇ ಸಿನಿಮಾದ ಎಕ್ಸ್ ಕ್ಲೂಸಿವ್ ವಿಚಾರ ಬಿಚಿಟ್ಟ ಉಪ್ಪಿ

    ಅಂದಹಾಗೆ, 17 ವರ್ಷ ಕಳೆದ ಹಿನ್ನಲೆಯಲ್ಲಿ 'H2O' ಸಿನಿಮಾದ ಕೆಲ ವಿವರಗಳು ಮುಂದಿವೆ ಓದಿ...

    ಉಪ್ಪಿ ಕಥೆ, ಲೋಕನಾಥ್ ನಿರ್ದೇಶನ

    ಉಪ್ಪಿ ಕಥೆ, ಲೋಕನಾಥ್ ನಿರ್ದೇಶನ

    ಉಪೇಂದ್ರ ಬರೆದ ಬೆಸ್ಟ್ ಕಥೆಯ ಸಿನಿಮಾ 'H2O'. ಕಾವೇರಿ ನೀರಿನ ಸಮಸ್ಯೆಯನ್ನು ಉಪೇಂದ್ರ ತಮ್ಮ ಸ್ಟೈಲ್ ನಲ್ಲಿ ತೋರಿಸಿದ್ದರು. ತಮ್ಮ ಸಿನಿಮಾದ ಮೂಲಕ ಅದ್ಬುತ ಸಂದೇಶವನ್ನು ಕನ್ನಡ ಹಾಗೂ ತಮಿಳು ನಾಡಿನ ಜನರಿಗೆ ತಿಳಿಸಿದ್ದರು. ಉಪೇಂದ್ರ ಈ ಸಿನಿಮಾದ ಕಥೆ ಬರೆದಿದ್ದರೂ, ಅವರು ನಿರ್ದೇಶನ ಮಾಡಿರಲಿಲ್ಲ. ಎನ್ ಲೋಕನಾಥ್ ರಾಜಾರಾಮ್ ಈ ಚಿತ್ರದ ನಿರ್ದೇಶನ ಮಾಡಿದ್ದರು.

     'ಉಪ್ಪಿ 30' ಸಂದರ್ಶನ : ಮಲಗಿದ್ದರೆ ಸಾವು.. ಕುಳಿತ್ತಿದ್ದರೆ ರೋಗ.. ನಡೆಯುತ್ತಿದ್ದರೆ ಜೀವನ.. 'ಉಪ್ಪಿ 30' ಸಂದರ್ಶನ : ಮಲಗಿದ್ದರೆ ಸಾವು.. ಕುಳಿತ್ತಿದ್ದರೆ ರೋಗ.. ನಡೆಯುತ್ತಿದ್ದರೆ ಜೀವನ..

    ಉಪ್ಪಿ - ಪ್ರಿಯಾಂಕರ ಭೇಟಿ

    ಉಪ್ಪಿ - ಪ್ರಿಯಾಂಕರ ಭೇಟಿ

    ಬರೀ ಸಿನಿಮಾವಾಗಿ ಮಾತ್ರವಲ್ಲ ಉಪೇಂದ್ರ ನಿಜ ಜೀವನಕ್ಕೂ ಈ ಚಿತ್ರ ಬಹಳ ಹತ್ತಿರ ಆಗಿದೆ. ಕಾರಣ ಈ ಸಿನಿಮಾ ಉಪ್ಪಿ ಹಾಗೂ ಪ್ರಿಯಾಂಕ ಪ್ರೀತಿಗೆ ಮೊದಲ ಕಾರಣ. ಪ್ರಿಯಾಂಕ ಉಪೇಂದ್ರ ನಟನೆಯ ಮೊದಲ ಸಿನಿಮಾ ಇದಾಗಿತ್ತು. ಈ ಸಿನಿಮಾದ ವೇಳೆಯೇ ಉಪೇಂದ್ರ ಹಾಗೂ ಪ್ರಿಯಾಂಕ ಪ್ರೀತಿ ಶುರು ಆಯಿತು.

    ಪ್ರಭುದೇವ ಮೊದಲ ಕನ್ನಡ ಚಿತ್ರ

    ಪ್ರಭುದೇವ ಮೊದಲ ಕನ್ನಡ ಚಿತ್ರ

    ಈ ಸಿನಿಮಾ ಮೂಲಕ ಪ್ರಭುದೇವ ಮೊದಲ ಬಾರಿಗೆ ಕನ್ನಡ ಸಿನಿಮಾ ಮಾಡಿದರು. ಕನ್ನಡದವರೇ ಆಗಿದ್ದರೂ ತಮಿಳು ಭಾಷೆಯಲ್ಲಿ ಗುರುತಿಸಿಕೊಂಡಿದ್ದ ಪ್ರಭುದೇವ ಈ ಚಿತ್ರದಲ್ಲಿ ನಟಿಸಿದರು. ತಮಿಳು ನಾಡಿನ ನಾಯಕನಾಗಿ ಉಪೇಂದ್ರಗೆ ಪ್ರತಿಸ್ಪರ್ಧಿಯಾಗಿ ನಿಂತಿದ್ದರು. ಎಂದಿನಂತೆ ಅವರ ಡ್ಯಾನ್ಸ್ ಗಮನ ಸೆಳೆದಿತ್ತು.

    ಎಲ್ಲ ಹಾಡಿಗೆ ಉಪ್ಪಿ ಸಾಹಿತ್ಯ

    ಎಲ್ಲ ಹಾಡಿಗೆ ಉಪ್ಪಿ ಸಾಹಿತ್ಯ

    ಈ ಸಿನಿಮಾದ ಎಲ್ಲ ಹಾಡುಗಳನ್ನು ಉಪೇಂದ್ರ ಬರೆದಿದ್ದರು. ಸಾಧು ಕೋಕಿಲ ಸಂಗೀತ ನೀಡಿದ ಬೆಸ್ಟ್ ಸಿನಿಮಾಗಳ ಪೈಕಿ ಇದೂ ಒಂದಾಗಿತ್ತು. ಆರೂ ಹಾಡುಗಳು ಸೂಪರ್ ಹಿಟ್ ಆಗಿತ್ತು. 'ದಿಲ್ ಇಲ್ದೆ ಲವ್ ಮಾಡೋಕ್ಕೆ ಆಗಲ್ವೆ..' ಹಾಡನ್ನು ಉಪೇಂದ್ರ ಹಾಡಿದ್ದರು.

    7 ಕೋಟಿ ಗಳಿಕೆ ಮಾಡಿತ್ತು

    7 ಕೋಟಿ ಗಳಿಕೆ ಮಾಡಿತ್ತು

    ಇದೊಂದು ಪಕ್ಕಾ ಉಪ್ಪಿ ಸ್ಟೈಲ್ ಆಫ್ ಸಿನಿಮಾ ಆಗಿದ್ದು, ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದರು. ಸಿನಿಮಾ ಆ ಕಾಲಕ್ಕೆ 7 ಕೋಟಿ ಗಳಿಕೆ ಮಾಡಿತ್ತು. ಪಿ ಧನರಾಜ್ ಸಿನಿಮಾಗೆ ಬಂಡವಾಳ ಹಾಕಿದ್ದರು. ಉಪ್ಪಿಯ ಫೇವರೇಟ್ ಸಿನಿಮಾಟೋಗ್ರಾಫರ್ ಹೆಚ್ ಸಿ ವೇಣು ಚಿತ್ರವನ್ನು ಸೆರೆ ಹಿಡಿದ್ದಿದ್ದರು.

    English summary
    17 years for 'H2O' kannada movie. The movie is about kaveri water issue, script was written by Upendra. This is Upendra and Priyanka Upendra combination 1st movie.
    Friday, March 29, 2019, 16:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X