»   » ಅಂಬಾರಿ ಮೇಲೇರಿದ ಲೂಸ್ ಮಾದ ಯೋಗೀಶ

ಅಂಬಾರಿ ಮೇಲೇರಿದ ಲೂಸ್ ಮಾದ ಯೋಗೀಶ

Subscribe to Filmibeat Kannada

ನಂದ ಲವ್ಸ್ ನಂದಿತಾ ಚಿತ್ರದ ಯಶಸ್ಸಿನ ನಂತರ ಯೋಗೀಶ್ 'ಅಂಬಾರಿ' ಏರಿ ಕೂತ್ತಿದ್ದಾರೆ. ನನ್ನ ಮೊದಲೆರಡು ಚಿತ್ರಗಳಿಗಿಂತ ಈಚಿತ್ರ ವಿಭಿನ್ನ. ಇದು ಅಪ್ಪಟ ಲವ್ ಸ್ಟೋರಿ ಎಂದೆಲ್ಲಾ ಯೋಗೀಶ್ ಖುಷಿಯಿಂದ ಹೇಳುತ್ತಾರೆ. ಅಂಬಾರಿ ಚಿತ್ರದ ಚಿತ್ರೀಕರಣ ಶೇ. 60 ರಷ್ಟು ಮುಗಿದಿದ್ದು, ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ದುನಿಯಾ ಖ್ಯಾತಿಯ ಸಿನಿಮಾಛಾಯಾಗ್ರಾಹಕ ಸತ್ಯಹೆಗಡೆ ಅವರು ಬೆಂಗಳೂರಿನ ಬೇಸಿಗೆಯ ಮೇ ತಿಂಗಳ ಹೂಗಳ ರಂಗನ್ನು ತೋರಿಸಿ, ಎಲ್ಲರ ಮನತಣಿಸಲಿದ್ದಾರೆ.

ಯೋಗೀಶ್ ಗೆ ನಾಯಕಿಯಾಗಿ ಸುಪ್ರಿತಾ ಆಯ್ಕೆಯಾಗಿದ್ದಾರೆ. ಅಂಬಾರಿ ಚಿತ್ರ ಬೆಂಗಳೂರಿನ ಸುತ್ತಮುತ್ತಾ 25 ದಿನಗಳ ಚಿತ್ರ್ರೀಕರಣ ಹಾಗೂ ದಾಂಡೇಲಿ, ರಾಜಸ್ಥಾನ, ಜೈಪುರ, ಆಗ್ರಾ, ಖಂಡಾಲ, ಇಂದೋರ್, ಗ್ವಾಲಿಯಾರ್ ನಲ್ಲಿ 25ದಿನಗಳ ಚಿತ್ರೀಕರಣದ ಯೋಜನೆ ಹೊಂದಿದೆ. ಚಿತ್ರದಲ್ಲಿ ಶೇ. 30 ರಷ್ಟು ದೃಶ್ಯಗಳು ರಸ್ತೆಯ ಮೇಲೆ ಹಾಗೂ ಪ್ರಯಾಣದಲ್ಲಿ ಮೂಡಿಬಂದಿದೆ. ಈ ಚಿತ್ರವನ್ನು ಎ.ಪಿ ಅರ್ಜುನ್ ನಿರ್ದೇಶಿಸುತ್ತಿದ್ದಾರೆ. ಈ ಮುಂಚೆ ಚಿತ್ರ ನಿರ್ಮಾಣದ ಹೊಣೆಹೊತ್ತಿದ್ದ ನಿರ್ಮಾಪಕ ಸಿದ್ದರಾಜು ಅವರು ಕಾರಣಾಂತರದಿಂದ ಹೊರಬಿದ್ದಿದ್ದಾರೆ. ಅಪ್ಪನ ಈ ನಡೆ ಮಗ ಯೋಗೀಶ ಅವರಿಗೂ ಅನಿರೀಕ್ಷಿತವಾಗಿದೆ.

ನಿರ್ಮಾಪಕರಾದ ಲಕ್ಷ್ಮಿಕಾಂತ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ಕಲ್ಪನೆಯನ್ನು ವಿವರಿಸಿದರು. ಮೈಸೂರು ಅರಮನೆಯ ಮುಂದೆ ಸಂಜೆ ವೇಳೆ, ಎಲ್ಲಾ ದೀಪಾಲಂಕಾರದಿಂದ ಅರಮನೆ ಜಗಜಗಮಗಿಸುವಾಗ ಆನೆಯೊಂದು ಅಂಬಾರಿ ಮೇಲೆ ಕ್ಯಾಸೆಟ್ ಹೊತ್ತು ತರುವುದು. ನಂತರ ಅದನ್ನು ಜನರ ಸಮ್ಮುಖದಲ್ಲಿ ಅನಾವರಣಗೊಳಿಸಲಾಗುವುದು. ಸಮಾರಂಭಕ್ಕೆ ಅತಿಥಿಗಳನ್ನು ಇನ್ನೂ ನಿರ್ಧರಿಸಿಲ್ಲ ಎಂದು ಲಕ್ಷ್ಮಿಕಾಂತ್ ಹೇಳಿದರು.

(ದಟ್ಸ್ ಸಿನಿವಾರ್ತೆ)

Please Wait while comments are loading...