»   » ಸುಂಟರಗಾಳಿ ಎಬ್ಬಿಸಲಿರುವ ಮಾನ್ಯಳಿಂದ ಐಟಂ ಸಾಂಗ್‌

ಸುಂಟರಗಾಳಿ ಎಬ್ಬಿಸಲಿರುವ ಮಾನ್ಯಳಿಂದ ಐಟಂ ಸಾಂಗ್‌

Posted By:
Subscribe to Filmibeat Kannada

‘ಊರಿಗೆ ಬಂದೋಳು ನೀರಿಗೆ ಬರೋದಿಲ್ವಾ’ ಅನ್ನೋದು ಗಾದೆ. ‘ಹೀರೋಯಿನ್‌ ಆದವಳು ಐಟಂ ಸಾಂಗ್‌ನಲ್ಲಿ ಕುಣಿಯೋದಿಲ್ವಾ’ ಅನ್ನೋದು ಸಿನಿ ಗಾದೆ!

ತಮ್ಮ ಮೊದಲ ಚಿತ್ರ ‘ವರ್ಷ’ದ ಮೂಲಕವೇ ಕನ್ನಡಿಗರ ಗಮನ ಸೆಳೆದಿದ್ದ, ಚೆಂದುಳ್ಳಿ ಚೆಲುವೆ ಮಾನ್ಯ, ಈಗ ಐಟಂ ಸಾಂಗ್‌ನಲ್ಲೂ ಮಾನ್ಯತೆ ಪಡೆದಿದ್ದಾರೆ! ದರ್ಶನ್‌ ಮತ್ತು ರಕ್ಷಿತಾ ಅಭಿನಯದ ‘ಸುಂಟರಗಾಳಿ’ ಚಿತ್ರದ ಐಟಂ ಸಾಂಗ್‌ವೊಂದರಲ್ಲಿ ಮಾನ್ಯ ಬಳುಕಿದ್ದಾರೆ.

ಬೆಂಗಳೂರಿನ ಸುಬ್ರಮಣ್ಯನಗರ ಮಿಲ್ಕ್‌ ಗ್ರೌಂಡ್‌ನಲ್ಲಿ ಹಾಡಿನ ಚಿತ್ರೀಕರಣ ಸಾಂಗವಾಗಿ ಸಾಗಿತು. ಸಹ ನರ್ತಕಿಯರೊಂದಿಗೆ ಮಾನ್ಯಮಿಂಚಿದರು. ಸಾಧು ಕೋಕಿಲಾ ನಿರ್ದೇಶನದ ‘ ಸುಂಟರಗಾಳಿ’ ಚಿತ್ರದಲ್ಲಿ ಉಮಾಶ್ರೀ, ಆಶೀಶ್‌ ವಿದ್ಯಾರ್ಥಿ, ರಂಗಾಯಣ ರಘು, ಶೋಭರಾಜ್‌ ತಾರಾಗಣದಲ್ಲಿದ್ದಾರೆ.

ಕನ್ನಡದಲ್ಲಿ ‘ಮಾನ್ಯ’ತೆ : ಮಲಯಾಳಂ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಜನಪ್ರಿಯರಾಗಿದ್ದ ತೆಲುಗು ಮೂಲದ ಮಾನ್ಯ, ಕನ್ನಡದ ಹುಡುಗಿಯರು ನಾಚುವಷ್ಟು ಚೆಂದವಾಗಿ ಕನ್ನಡ ಉಲಿಯುತ್ತಾರೆ. ಕನ್ನಡ ಸಿನಿಮಾಗಳ ಬಗ್ಗೆ ಅಪಾರ ಪ್ರೀತಿಯೂ ಅವರಿಗಿದೆ. ಆದರೇನು ಮಾಡುವುದು ಮಾನ್ಯಳ ಮುದ್ದುಮುಖ ಮೆಚ್ಚಿದ ಪ್ರೇಕ್ಷಕನಿಗೆ ಮಾನ್ಯ ಐಟಂ ಸಾಂಗಲ್ಲಿ ಕುಣಿಯುವುದು ಅಮಾನ್ಯ. ತಿಳಿದಿರಲಿ, ಚಿತ್ರರಂಗದಲ್ಲಿದು ಸಾಮಾನ್ಯ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada