»   » ರಿಮೇಕ್‌ ಚಿತ್ರಗಳತ್ತ ಪಾರ್ವತಮ್ಮ ಒಲವು, ಸಾಹಿತಿಗಳ ಟೀಕೆ

ರಿಮೇಕ್‌ ಚಿತ್ರಗಳತ್ತ ಪಾರ್ವತಮ್ಮ ಒಲವು, ಸಾಹಿತಿಗಳ ಟೀಕೆ

Subscribe to Filmibeat Kannada

ಬೆಂಗಳೂರು : ರಿಮೇಕ್‌ ಚಿತ್ರಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡುವ ವಿಚಾರ, ಮತ್ತೊಂದು ಸುತ್ತಿನ ಚರ್ಚೆಗೆ ದಾರಿ ಮಾಡಿದೆ.

ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಾರ್ತಾಸಚಿವ ಬಿ.ಶಿವರಾಂ ಅಧ್ಯಕ್ಷತೆಯಲ್ಲಿ , ನಗರದ ಬಾದಾಮಿ ಹೌಸ್‌ನಲ್ಲಿ ಸಭೆ ನಡೆಯಿತು. ಈ ವಿಚಾರದಲ್ಲಿ ಸಭೆಯಲ್ಲಿ ಏಕಾಭಿಪ್ರಾಯ ಮೂಡಲಿಲ್ಲ. ಸಭೆಯಲ್ಲಿ ಚಿತ್ರರಂಗದ ಗಣ್ಯರು ಮತ್ತು ಸಾಹಿತಿಗಳು ಪಾಲ್ಗೊಂಡಿದ್ದರು.

ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಮಾತನಾಡಿ, ಕನ್ನಡದಲ್ಲಿ ಒಳ್ಳೆ ಕಥೆಗಳ ಕೊರತೆಯಿದೆ. ಹೀಗಾಗಿ ರಿಮೇಕ್‌ ಮಾಡುವುದು ತಪ್ಪೇನಲ್ಲ. ಈ ಚಿತ್ರಗಳಿಗೂ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಬೇಕು. ರಿಮೇಕ್‌ ಚಿತ್ರಗಳಿಂದ ಸಂಸ್ಕೃತಿ ಹಾಳಾಗುವುದಿಲ್ಲ ಎಂದರು.

ಪಾರ್ವತಮ್ಮ ಅವರ ವಾದಕ್ಕೆ ನಿರ್ಮಾಪಕ ಸಾ.ರಾ.ಗೋವಿಂದ್‌, ರಾಕ್‌ಲೈನ್‌ ವೆಂಕಟೇಶ್‌, ಸಂದೇಶ್‌ ನಾಗರಾಜ್‌ ಧ್ವನಿಗೂಡಿಸಿದರು.

ರಿಮೇಕ್‌ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುವ ವಾದಕ್ಕೆ ನಿರ್ದೇಶಕ ಗಿರೀಶ್‌ ಕಾಸರವಳಳಿ, ಡಾ.ಚಂದ್ರಶೇಖರ ಕಂಬಾರ, ಎಂ.ಎಸ್‌.ಸತ್ಯ, ಟಿ.ಎಸ್‌.ನಾಗಾಭರಣ, ಬರಗೂರು ರಾಮಚಂದ್ರಪ್ಪ, ಯು.ಆರ್‌.ಅನಂತಮೂರ್ತಿ ಮತ್ತಿತರರು ವಿರೋಧ ವ್ಯಕ್ತಪಡಿಸಿದರು.

ಸಹಮತ : ಚಿತ್ರನಗರಿ ನಿರ್ಮಾಣ, ಪುಟ್ಟಣ್ಣ ಕಣಗಾಲ್‌ ಚಿತ್ರಮಂದಿರದ ಅಭಿವೃದ್ಧಿ ಮತ್ತಿತರ ವಿಚಾರಗಳಿಗೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.

ರಿಮೇಕ್‌ ಚಿತ್ರಗಳ ಬಗೆಗೆ ನಿಮ್ಮ ಒಲವು ನಿಲುವು ನಮಗೆ ಬರೆಯಿರಿ

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada