ರವೀನಾಗೆ ಫೆ.22ರಂದು ಕಲ್ಯಾಣ
- ದಟ್ಸ್‌ಕನ್ನಡ ಬ್ಯೂರೊ
ಚಿತ್ರರಂಗದ ದಿಗ್ಗಜರಾದ ಅಮಿತಾ ಬಚ್ಚನ್, ಹೃತಿಕ್ ರೋಶನ್, ಗೋವಿಂದ ಸೇರಿದಂತೆ ರಾಜಾಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ, ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್, ಮದ್ಯದ ದೊರೆ ವಿಜಯ ಮಲ್ಯ ಮುಂತಾದ ಗಣ್ಯರು ಉಪಸ್ಥಿತರಿರುವರು ಎಂದು ವಧುವಿನ ಅಣ್ಣ-ಅತ್ತಿಗೆ ರಾಜೀವ್ ಟೆಂಡನ್ ಹಾಗೂ ರಾಖೀ ಪತ್ರಕರ್ತರಿಗೆ ತಿಳಿಸಿದ್ದಾರೆ.
ಈ ಸಾಂಪ್ರದಾಯಿಕ ಮದುವೆ ಫೆ.20 ರಿಂದಲೇ ಆರಂಭವಾಗುವುದು. ಚಿತ್ರ ನಿರ್ಮಾಪಕ ರವಿ ಟೆಂಡನ್ ತಮ್ಮ ಪುತ್ರಿಯನ್ನು ಕನ್ಯಾದಾನ ಮಾಡಿಕೊಡಲಿದ್ದಾರೆ. ಮದುವೆ ಮುನ್ನ ಮೆಹಂದಿ, ಹಾಡು, ಸಂಗೀತವೆಲ್ಲ ಶಾಸ್ತ್ರೋಕ್ತವಾಗಿ ಜರುಗಲಿದೆ.
ಹಿಂದಿ, ಕನ್ನಡ, ತಮಿಳು, ತೆಲುಗು ಇನ್ನಿತರ ಭಾಷೆಗಳ ಚಿತ್ರದಲ್ಲಿ ನಟಿಸಿರುವ ರವೀನಾ ಬಹುಭಾಷಾ ನಟಿ. ಫಿಲ್ಮ್‌ಫೇರ್, ಸರಕಾರದ ಪುರಸ್ಕಾರ ಸೇರಿದಂತೆ ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ತಾರೆ. ಬಿಜೆಪಿ ಸೇರಿ ರಾಜಕಾರಣಿಯೂ ಆಗಿರುವ ನಟೀಮಣಿ- ಮಕ್ಕಳ ಚಿತ್ರ ಮಂಡಳಿ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.
30 ಹರೆಯದ ರವೀನಾ ಟೆಂಡನ್ 1991ರಲ್ಲಿ ‘ಪಥರ್ ಕೆ ಫೂಲ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದವರು. ಈ ಮುನ್ನ ನಟ ಅಕ್ಷಯ್‌ಕುಮಾರ್ ಹಾಗೂ ಕ್ರಿಕೆಟಿಗ ರಾಹುಲ್ ದ್ರಾವಿಡ್ ಜೊತೆ ರವೀನಾ ಹೆಸರು ಗಾಸಿಪ್‌ಗೆ ಆಹಾರವಾಗಿತ್ತು.
(ಏಜನ್ಸೀಸ್)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications