»   » ‘ಜೋಗಿ’ ದಾಖಲೆ ಮುರಿದ ‘ಪ್ರೀತಿ ಏಕೆ ಭೂಮಿ ಮೇಲಿದೆ?’

‘ಜೋಗಿ’ ದಾಖಲೆ ಮುರಿದ ‘ಪ್ರೀತಿ ಏಕೆ ಭೂಮಿ ಮೇಲಿದೆ?’

Posted By:
Subscribe to Filmibeat Kannada


ಜೋಗಿ’ ಚಿತ್ರದ ಕ್ಯಾಸೆಟ್‌ ಮತ್ತು ಸಿ.ಡಿ.ಗಳ ಮಾರಾಟದ ಮೂಲಕವೇ, 20 ಕೋಟಿ ರೂ.ವಹಿವಾಟು ನಡೆಸಿ ದಾಖಲೆ ಸೃಷ್ಟಿಸಿದ್ದ ಅಶ್ವಿನಿ ರೆಕಾರ್ಡಿಂಗ್‌ ಕಂಪನಿ, ಈಗ ಇನ್ನೊಂದು ದಾಖಲೆ ಸೃಷ್ಟಿಸಿದೆ. ಅಶ್ವಿನಿ ರಾಮಪ್ರಸಾದ್‌ಗಂತೂ ಖುಷಿಯೋ ಖುಷಿ.

ಜೋಗಿ’ ಚಿತ್ರದ ಕ್ಯಾಸೆಟ್‌ ಮತ್ತು ಸಿ.ಡಿ.ಗಳ ಮಾರಾಟದ ಮೂಲಕವೇ, 20 ಕೋಟಿ ರೂ.ವಹಿವಾಟು ನಡೆಸಿ ದಾಖಲೆ ಸೃಷ್ಟಿಸಿದ್ದ ಅಶ್ವಿನಿ ರೆಕಾರ್ಡಿಂಗ್‌ ಕಂಪನಿ, ಈಗ ಇನ್ನೊಂದು ದಾಖಲೆ ಸೃಷ್ಟಿಸಿದೆ. ಅಶ್ವಿನಿ ರಾಮಪ್ರಸಾದ್‌ಗಂತೂ ಖುಷಿಯೋ ಖುಷಿ.

ರಾಮಪ್ರಸಾದ್‌ ನಿರ್ಮಾಣ ಮಾಡುತ್ತಿರುವ ‘ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರದ ಧ್ವನಿ ಸುರುಳಿಗಳಿಗೆ ಈಗ ಭಾರೀ ಬೇಡಿಕೆ. ಪ್ರೇಮಿಗಳ ದಿನ ಬಿಡುಗಡೆಯಾದ ಈ ಚಿತ್ರದ ಎಂಟು ಹಾಡುಗಳ ರಿಂಗ್‌ ಟೋನ್‌ ಕೇಳಿದ ಅಭಿಮಾನಿಗಳಿಂದ, 2ಲಕ್ಷ ಸೀಡಿ ಮತ್ತು1ಲಕ್ಷ ಕ್ಯಾಸೆಟ್‌ಗೆ ಬೇಡಿಕೆ ಬಂದಿದೆ ಎನ್ನುವುದು ರಾಮಪ್ರಸಾದ್‌ರ ಹೇಳಿಕೆ.

ಅಂದ ಹಾಗೆ ಮಾರ್ಚ್‌ 19ರಂದು ಕ್ಯಾಸೆಟ್‌ ಮತ್ತು ಸೀಡಿಗಳು ಮಾರುಕಟ್ಟೆಗೆ ಬರಲಿವೆ. ಮಾ.19ರಂದು ಬೆಂಗಳೂರಿನಲ್ಲಿ, ಏಪ್ರಿಲ್‌ 7ರಂದು ಹುಬ್ಬಳ್ಳಿಯಲ್ಲಿ ಕ್ಯಾಸೆಟ್‌ ಬಿಡುಗಡೆ ಸಮಾರಂಭ ನಡೆಯಲಿದೆ. ಕನ್ನಡ ಚಿತ್ರರಂಗದಲ್ಲಿಯೇ ಪ್ರಥಮ ಬಾರಿಗೆ 99ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ನಮ್ಮ ಮುಂದಿದೆ ಎಂದು ರಾಮಪ್ರಸಾದ್‌ ಹೇಳಿದ್ದಾರೆ.

ಪ್ರೇಮ್‌ ಮತ್ತು ಮಲ್ಲಿಕಾಶೆರಾವತ್‌ರನ್ನು ನಂಬಿಕೊಂಡು ನೀರಿನಂತೆ ರಾಮಪ್ರಸಾದ್‌ ಹಣ ಸುರಿಯುತ್ತಿದ್ದಾರೆ... ಅವರಿಗೆ ತಾವು ನಂಬಿದ ‘ಅಜ್ಜಯ್ಯ’ ಕೈಬಿಡುವುದಿಲ್ಲವೆಂಬ ನಂಬಿಕೆ. ಅವರಿಗೆ ಒಳ್ಳೆಯದಾಗಲಿ...

‘ಪ್ರೀತಿ ಏಕೆ ಭೂಮಿ ಮೇಲಿದೆ?’ ಗ್ಯಾಲರಿ ನೋಡಿದಿರಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada