»   » ಮುಂಗಾರು ಮಳೆ-1ಕುಣಿದು ಕುಣಿದು ಬಾರೆ... ಒಲಿದು ಒಲಿದು ಬಾರೆ...

ಮುಂಗಾರು ಮಳೆ-1ಕುಣಿದು ಕುಣಿದು ಬಾರೆ... ಒಲಿದು ಒಲಿದು ಬಾರೆ...

Posted By:
Subscribe to Filmibeat Kannada


ಆ ಜೋಗದ ಭೋರ್ಗರೆತ, ಮೈದುಂಬಿಕೊಂಡ ಮಲೆನಾಡು, ಸುರಿಯುವ ಮಳೆಯ ಸಿಂಚನ, ಜೊತೆಗೆ ಮಳೆಯ ಜೊತೆ ಮಳೆಯಾಗಿಸುವ.. ಹಾಡಿನ ಜೊತೆ ಹಾಡಾಗಿಸುವ ‘ಮುಂಗಾರು ಮಳೆ’ಯ ಸಂಗೀತ ಚಿತ್ರಪ್ರೇಮಿಗಳನ್ನು ಬೇರೊಂದು ಲೋಕಕ್ಕೇ ಕೊಂಡೊಯ್ದಿದೆ. ಜಯಂತ್‌ ಕಾಯ್ಕಿಣಿಯ ನಗುವಿನಷ್ಟೇ ಸೊಗಸಾದ ಅವರ ಹಾಡುಗಳು ಎಲ್ಲೆಲ್ಲೂ ಮಾರ್ದನಿಸುತ್ತಿವೆ, ಕಾಡುತ್ತಿವೆ. ಮಳೆಯ ಹನಿಗಳನ್ನು ‘ಬೊಗಸೆ’ಯಲ್ಲಿ ತುಂಬಿಕೊಳ್ಳಿ.

ಹಾಡಿದವರು : ಉದಿತ್‌ ನಾರಾಯಣ್‌, ಸುನಿಧಿ ಚೌಹಾನ್‌ ಹಾಗೂ ಸ್ಟೀಫನ್‌

ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ, ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ, ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ

ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ, ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ

ಇರುಳಲಿ ನೀನೆಲ್ಲೋ ಮೈಮುರಿದರೆ, ನನಗಿಲ್ಲಿ ನವಿರಾದ ಹೂಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ, ಮಾತಿಲ್ಲ ಕಥೆಯಿಲ್ಲ ಬರೀ ರೋಮಾಂಚನ
ನಿನ್ನ ಕಣ್ಣತುಂಬ, ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೆ, ಪರಿಮಳದಲ್ಲಿ ಅರಳುವ ಬಾರೋ
ಒಲವೇ ವಿಸ್ಮಯ

ಒಲವೇ ನೀನೊಲಿದ ಕ್ಷಣದಿಂದಲೇ, ಈ ಭೂಮಿ ಈ ಬಾನು ಹೊಸದಾಗಿದೆ
ಖುಶಿಯಿಂದ ಈ ಮನವೆಲ್ಲ ಹೂವಾಗಿರೆ, ಬೇರೇನೂ ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ, ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ, ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ

ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ, ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada