»   » ರಾಕ್ಷಸ, ಜೋಗಿ, ವಾಲ್ಮೀಕಿ ಮತ್ತು ಶಿವು

ರಾಕ್ಷಸ, ಜೋಗಿ, ವಾಲ್ಮೀಕಿ ಮತ್ತು ಶಿವು

Subscribe to Filmibeat Kannada

ನಟ ಶಿವರಾಜ್‌ಕುಮಾರ್‌ರ ‘ಚಿಗುರಿದ ಕನಸು’ ಚಿತ್ರ ಚಿಗುರಲೇ ಇಲ್ಲ. ಇತ್ತ ಸಾರ್ವಭೌಮ, ಕಾಂಚನಗಂಗಾ ಚಿತ್ರಗಳು ತೆರೆಕಂಡಷ್ಟೇ ವೇಗವಾಗಿ ಬದಿಗೆ ಸರಿದವು. ಮೊನ್ನೆಯ ‘ರಿಷಿ’ ಚಿತ್ರದ ಯಶಸ್ಸು ಸಹಾ ಸಂಪೂರ್ಣವಾಗಿ ಅವರಿಗೆ ದಕ್ಕಲಿಲ್ಲ...ಆದರೂ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ.

ಫೀನಿಕ್ಸ್‌ನಂತೆ ಮರು ಜೀವ ಪಡೆಯಲು ಶಿವರಾಜ್‌ಕುಮಾರ್‌ ತಿಣುಕಾಡುತ್ತಿದ್ದಾರೆ. ಹೊಸ ಯುಗಾದಿಯ ಕನಸು ಅವರಲ್ಲಿದೆ. ಬಹುನಿರೀಕ್ಷೆಯ ರಾಕ್ಷಸ, ವಾಲ್ಮೀಕಿ, ಜೋಗಿ -ಈ ಮೂರು ಚಿತ್ರಗಳು ತೆರೆಗೆ ಸಿದ್ಧವಾಗಿವೆ.

ಪೋಲೀಸ್‌ ಅಧಿಕಾರಿ ನಟಿಸಿರುವ ‘ರಾಕ್ಷಸ’ ಮಾರ್ಚ್‌ ಅಂತ್ಯದಲ್ಲಿ ತೆರೆ ಕಾಣಬಹುದು. ಪ್ರೇಮ್‌ ನಿರ್ದೇಶನದ ‘ಜೋಗಿ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕಾತರವಿದೆ. ಮುಂಬೈ ಮೂಲದ ಜೆನ್ನಿಫರ್‌ ಚಿತ್ರದ ಮತ್ತೊಂದು ಆಕರ್ಷಣೆ.

ರಾಕ್ಷಸ ಮತ್ತು ವಾಲ್ಮೀಕಿ -ಈ ಎರಡೂ ಚಿತ್ರಗಳು ಸಾಹಸ ಪ್ರಧಾನಚಿತ್ರಗಳಾದರೇ, ಜೋಗಿಗೆ ಪ್ರೇಮ್‌ ಭಾವನಾತ್ಮಕತೆಯನ್ನು ತುಂಬಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada