»   » ಸುದೀಪ್‌,ಶ್ರುತಿ, ಓಂ ಪ್ರಕಾಶ್‌ಗೆ ಚಿತ್ರಪ್ರೇಮಿ ಪ್ರಶಸ್ತಿ-07

ಸುದೀಪ್‌,ಶ್ರುತಿ, ಓಂ ಪ್ರಕಾಶ್‌ಗೆ ಚಿತ್ರಪ್ರೇಮಿ ಪ್ರಶಸ್ತಿ-07

Posted By:
Subscribe to Filmibeat Kannada


ಬೆಂಗಳೂರು : ಕನ್ನಡ ಚಿತ್ರಪ್ರೇಮಿಗಳ ಒಕ್ಕೂಟದ ‘32ನೇ ಚಿತ್ರಪ್ರೇಮಿ ಪ್ರಶಸ್ತಿ ’ವಿತರಣಾ ಸಮಾರಂಭ, ಶನಿವಾರ ಸಂಜೆ 6ಕ್ಕೆ ನಗರದಲ್ಲಿ ಆರಂಭಗೊಳ್ಳಲಿದೆ.

ನಗರದ ಟೌನ್‌ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌, ನಟ ಅಂಬರೀಷ್‌ ಮತ್ತು ಡಾ.ವಿಷ್ಣುವರ್ಧನ್‌ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಬೃಹತ್‌ ಕೈಗಾರಿಕೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ದು ಮತ್ತು ಕಾರ್ಮಿಕ ಸಚಿವ ಇಕ್ಬಾಲ್‌ ಅನ್ಸಾರಿ ಪ್ರಶಸ್ತಿಗಳನ್ನು ವಿತರಿಸುವರು.

ಪ್ರಸಕ್ತ ಸಾಲಿನ ಪ್ರಮುಖ ಪ್ರಶಸ್ತಿ ವಿಜೇತರು :

  • ಉತ್ತಮ ನಟ -ಸುದೀಪ್‌(ಮೈ ಆಟೋಗ್ರಾಫ್‌)
  • ಉತ್ತಮ ನಟಿ -ಶ್ರುತಿ(ಸಿರಿವಂತ)
  • ಉತ್ತಮ ಸಂಗೀತ ನಿರ್ದೇಶಕ -ವಿ.ಹರಿಕೃಷ್ಣ(ಜೊತೆಜೊತೆಯಲಿ)
  • ಉತ್ತಮ ನಿರ್ಮಾಪಕ -ಮುರಳೀಧರ ಹಾಲಪ್ಪ(ಸೈನೈಡ್‌)
  • ಉತ್ತಮ ನಿರ್ದೇಶಕ -ಓಂ ಪ್ರಕಾಶ್‌ ರಾವ್‌(ಹುಬ್ಬಳ್ಳಿ)
(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada