»   » ಮುಂಗಾರು ಮಳೆ-6 ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ

ಮುಂಗಾರು ಮಳೆ-6 ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ

Subscribe to Filmibeat Kannada


‘ಮುಂಗಾರು ಮಳೆ’ ಚಿತ್ರದ ಈ ಹಾಡು, ಹಾಡಿನಲ್ಲಿ ನಾಯಕ ಗಣೇಶ್‌ರ ಲವಲವಿಕೆ ಕೂತವರನ್ನು ಎದ್ದು ಕುಣಿಯುವಂತೆ ಮಾಡುತ್ತದೆ! ಪ್ರೇಯಸಿಯ ಮನಸ್ಸಿನಲ್ಲಿ ಕನಸುಗಳು ನಾಟಿ ಮಾಡುತ್ತದೆ! ಬೇಕಿದ್ದರೆ, ಒಂದು ಸಲ ಓದಿ ನೋಡಿ...

ಗಾಯಕ : ಹೇಮಂತ್‌ ಕುಮಾರ್‌
ಸಾಹಿತ್ಯ :ಶಿವ

ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾಂತ ಚೆನ್ನಿಗರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು

ಚಿನ್ನ, ಅಪರಂಜಿಗಿಂತ ಚೆನ್ನ ನಿನ್ನ ಹುಡುಗನು
ನಿನ್ನ ನೆರಳಂತೆ ಮೂರು ಹೊತ್ತು ಜೊತೆ ಇರುವನು
ಯಾರೂ ಕೊಡದಷ್ಟು ಒಲವ ತಂದು ತೊಗೊ ಎನುವನು
ಒಂದು ಘಳಿಗೇನು ನಿನ್ನ ಬಿಟ್ಟು ಇರನು ಇರನು

ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾಂತ ಚೆನ್ನಿಗರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು

ಅವನ ಮನಸೊಂದು ಒಲವ ತೂಗೋ ಜೋಕಾಲಿಯೋ
ಅಲ್ಲಿ ಹಾಡುವಂತ ಜೋಗುಳಗಾನ ಪ್ರೀತಿ ಲಾಲಿಯೋ
ಗೆಳತಿ ಆ ಉಯ್ಯಾಲೆಯಲ್ಲಿ ಆ ಲಾಲಿಯಾ ಕೇಳೋಚ್‌
ಭಾಗ್ಯ ಬಂದು ಬಾಗಿಲ ತಟ್ಟಿ ಕರೆದಿದೆ ನಿನ್ನ

ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾಂತ ಚೆನ್ನಿಗರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada