For Quick Alerts
  ALLOW NOTIFICATIONS  
  For Daily Alerts

  ರಾಜಕುಮಾರ, ನೀವೆಂದಿಗೂ ಅಮರ ಅಮರ ಅಮರ

  By Staff
  |

  ಶ್ರೀನಿವಾಸ್‌ ಅವರಿಗೆ ನಮಸ್ಕಾರ,

  ಅಣ್ಣಾವ್ರ ಬಗ್ಗೆ ನಿಮ್ಮ ಲೇಖನ ಓದಿ ಹೃದಯ ತುಂಬಿ ಬಂತು. ನಮ್ಮೆಲ್ಲರ ಅನಿಸಿಕೆಗಳನ್ನೇ ಬರೆದಿದ್ದೀರಾ. ನಮಗೆ ರಾಜ್‌ಕುಮಾರ್‌ ಕೇವಲ ಒಬ್ಬ ನಟ ಮಾತ್ರ ಆಗಿರಲಿಲ್ಲ. ಬಾಲ್ಯದಿಂದಲೂ ಒಂದಲ್ಲ ಒಂದು ಕಾರಣಕ್ಕೆ ರಾಜ್‌ಕುಮಾರ್‌ ಬಗ್ಗೆ ಯೋಚಿಸದ, ಅವರ ಧ್ವನಿ ಕಿವಿಗೆ ಬೀಳದ ದಿನವೇ ಇಲ್ಲ. ಬಾಲಣ್ಣ ತೀರಿಕೊಂಡಾಗ ಅಣ್ಣಾವ್ರು ಹೇಳಿದ್ದು ‘ಅವರು ಒಂದು ಸೂರ್ಯ ಇದ್ದಂತೆ. ಸೂರ್ಯನ ಬಗ್ಗೆ ಎಷ್ಟು ಹೇಳಿದರೂ ಕಡಿಮೇನೆ’.

  ಅದೇರೀತಿ, ‘ಏರಿದವನು ಚಿಕ್ಕವನಿರಲೇಬೇಕು ಎಂಬ ಮಾತನು’ ಬಾಳಿತೋರಿಸಿದ ಅಣ್ಣಾವ್ರ ಬಗ್ಗೆ ಏನು ಹೇಳಿದರೂ ಕಡಿಮೇನೆ. ನೂರಾರು ದಿನ ವೀರಪ್ಪನ್‌ ಜತೆ ನರಕ ಅನುಭವಿಸಿದರೂ ಅವನ ಬಗ್ಗೆ ಕೆಟ್ಟ ಮಾತು ಆಡದೆ ಕನಿಕರ ತೋರಿದ ಮಾನವತಾವಾದಿ ಡಾ।।ರಾಜ್‌.

  ಹಳ್ಳಿಗಾಡಿನ ಬಡ ಯುವಕನೊಬ್ಬ ಪ್ರತಿಭೆ, ದೈವಭಕ್ತಿ, ಶ್ರದ್ಧೆಗಳಿಂದ ಎಂತಹ ಎತ್ತರವನ್ನು ಏರಬಹುದು ಎಂದು ತೋರಿಸಿದವರು ಡಾ।।ರಾಜ್‌. ಹಳ್ಳಿಮುಕ್ಕನೊಬ್ಬ ದೇವಿಯ ದಯೆಯಿಂದ ಸುಲಲಿತವಾಗಿ ‘ಮಾಣಿಕ್ಯವೀಣಾಂ ಮುಪಲಾಲಯಂತಿ..’ ಎಂದು ಹಾಡಿ ತೋರಿದ ಕಾಳಿದಾಸ ಡಾ।।ರಾಜ್‌. ರಾಜಕೀಯ, ಜಾತೀಯತೆ ಮುಂತಾದ ರಾಜಸ, ತಾಮಸ ವಿಷಯಗಳಿಂದ ದೂರವಿದ್ದು ಕಲಾಸರಸ್ವತಿಯ ಪಾತಿವ್ರತ್ಯವನ್ನು ಕಾಪಾಡಿಕೊಂಡ ಸಾತ್ವಿಕ ಜೀವ ಡಾ।। ರಾಜ್‌.

  ಜ್ಞಾನಪೀಠ, ನೋಬೆಲ್‌ ಪ್ರಶಸ್ತಿಗಳನ್ನು ಪಡೆಯುವ ನೂರಾರು ಸಾಹಿತಿಗಳು ಮುಂದೆ ಬರುತ್ತಾರೆ. ಆದರೆ ಇಂದಿಗೂ ಜನ ಮೆಚ್ಚುವ ಕೃತಿಗಳನ್ನು ರಚಿಸಿದ ವ್ಯಾಸ, ಬಸವಣ್ಣ, ಪುರಂದರದಾಸರು ಬರಬಲ್ಲರೆ? ಹಾಗೆಯೇ, ಆಸ್ಕರ್‌ ಪ್ರಶಸ್ತಿಗಳನ್ನು ಪಡೆಯಬಲ್ಲ ನೂರಾರು ಕಲಾವಿದರು ಮುಂದೆ ಹುಟ್ಟಬಲ್ಲರು. ಆದರೆ ರಾಜ್‌ಕುಮಾರ್‌ ನಂತರ ಏನು? ಅಂತಹ ಹೃದಯವಂತ ಕಲಾವಿದ, ಅಂತಹ ಜನಪ್ರಿಯತೆ ಇನ್ನೊಮ್ಮೆ ಸಾಧ್ಯವೇ?ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ. ‘ನನ್ನಂತಹ ನೂರು ರಾಜ್‌ಕುಮಾರ್‌ ಬರಬೇಕು’ ಎಂದು ಅಣ್ಣಾವ್ರು ಆಗಾಗ ಹೇಳುತ್ತಿದ್ದರು. ಅವರ ಆಸೆಯಂತೆ ಅವರಂತಹ ನೂರಾರು ಪ್ರತಿಭೆಗಳು ಕನ್ನಡನಾಡಿನಲ್ಲಿ ಮುಂದೆ ಹುಟ್ಟಿ ಜನರ ಬದುಕನ್ನು ಸುಂದರಗೊಳಿಸಲಿ ಎಂದು ಪ್ರಾರ್ಥಿಸೋಣ. ರಾಜ್‌ಕುಮಾರರ ಪಾತ್ರಗಳು, ಹಾಡುಗಳು ನೂರಾರು ಚಿತ್ರಗಳಲ್ಲಿ ಜೀವನದ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂದು ತೋರಿಸುತ್ತವೆ. ಅವರ ಈ ಹಾಡು ಈ ದುಃಖದ ಸಮಯದಲ್ಲಿ ಅರ್ಥಪೂರ್ಣವಾಗಿದೆ.

  ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
  ವ್ಯರ್ಥವ್ಯಸನದಿಂದ ಸಿಹಿಯೂ ಕೂಡ ಬೇವು

  ಬಾಳ ಕದನದಲ್ಲಿ ಭರವಸೆಗಳು ಬೇಕು
  ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು

  ಜೀವರಾಶಿಯಲ್ಲಿ ಮಾನವನಿಗೆ ಆದ್ಯತೆ
  ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ

  ಇಲ್ಲಿ ಈಸಬೇಕು ಇದ್ದು ಜೈಸಬೇಕು
  ನಾಗರೀಕರಾದ ಮೇಲೆ ಸುಗುಣರಾಗಬೇಕು

  - ಶೇಷಾದ್ರಿವಾಸು

  *

  ಶೇಷಾದ್ರಿವಾಸು ಅವರಿಗೆ ನಮಸ್ಕಾರಗಳು,

  ನಿಮ್ಮ ಮಾತು ಸತ್ಯ. ಅಣ್ಣಾವ್ರಂಥ ಹೃದಯವಂತ ಕಲಾವಿದ ಮತ್ತೊಮ್ಮೆ ಹುಟ್ಟಿ ಬರುತ್ತಾರೆ ಎನ್ನುವುದು ಅನುಮಾನ.

  ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಅವರ ಅಭಿನಯ ನನಗೆ ಬಹಳ ಇಷ್ಟ. ಅದರಲ್ಲೂ ಕಾಳಿ ದೇವಿಯನ್ನು ಕಂಡ ತಕ್ಷಣ ಮುಗ್ಧವಾಗಿ ದೇವಿಯ ಪಾದಗಳಿಗೆರಗಿ ನಮಿಸುವ ದೃಶ್ಯ ನಂತರ ಅವರು ಹಾಡಿದ ‘ಮಾಣಿಕ್ಯ ವೀಣಾಂ...’ ಸಂಸ್ಕೃತ ಶ್ಲೋಕ ಮೊಟ್ಟಮೊದಲು ನೋಡಿದಾಗ ಮೂಖವಿಸ್ಮಿತನಾದೆ. ಇಂದೂ ಮನೆಯಲ್ಲಿ ಮನಸ್ಸಿಗೆ ಬೇಸರವಾದಗಲೆಲ್ಲ ಕವಿರತ್ನ ಕಾಳಿದಾಸ ಚಿತ್ರವನ್ನು ನೋಡುತ್ತೇನೆ. ಅದರಲ್ಲಿ ಕಾಳಿದಾಸನಾಗಿ ಅವರ ಪ್ರಬುದ್ಧ ಅಭಿನಯ ಭಾರತದ ಬೇರೆ ನಟರಿಂದ ಸಾಧ್ಯವಿಲ್ಲ ಎಂದರೆ ಅತಿಶಯೋಕ್ತಿಯಲ್ಲ ಎನಿಸುತ್ತದೆ.

  ‘ಆಕಸ್ಮಿಕ’ ಚಿತ್ರದ ಅತ್ಯುತ್ತಮ ಗೀತೆಯನ್ನು ನೆನಪಿಸಿದ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.

  ನಿಮ್ಮ

  - ಸಂಪಿಗೆ ಶ್ರೀನಿವಾಸ

  *

  ಡಾ.ರಾಜ್‌ ಅವರ ನಿಧನದಿಂದ ಕನ್ನಡನಾಡಷ್ಟೇ ಅಲ್ಲಾ, ಇಡೀ ಭಾರತ ದೇಶ ಮತ್ತು ವಿಶ್ವವ್ಯಾಪಿಯಾದ ಕನ್ನಡಿಗರೆಲ್ಲರಿಗೂ, ಕನ್ನಡದ ಕುಲಮಣಿ, ಕನ್ನಡಿಗರ ಕಣ್ಮಣಿ ಮತ್ತು ಕನ್ನಡದ ಕನ್ನಡಿಯನ್ನು ಕಳೆದುಕೊಂಡಂತಾಗಿದೆ. ಡಾ.ರಾಜ್‌ಅವರು ಕಣ್ಮರೆಯಾಗಿರುವುದು ಮನದಟ್ಟಾಗುವುದಂತೂ ಸಾಧ್ಯವಾಗದ ವಿಷಯವಾಗಿದೆ. (ಏಕೆಂದರೆ), ಡಾ.ರಾಜ್‌ ಅವರು ಕೊಟ್ಟಿರುವ ಕಾಣಿಕೆ ಮಣಿ ಮಣಿಯಂತೆ ಕನ್ನಡಿಗರೆಲ್ಲರ ಮನ ಮನೆಗಳಲ್ಲಿ ಮನೋಹರವಾಗಿ ಮಾರುಗೊಳಿಸುತ್ತಾ ಸರ್ವಕಾಲಕ್ಕೂ ಮೊಳಗುವುದರಲ್ಲಿ ಸಂಶಯವೇ ಇಲ್ಲ. ಡಾ.ರಾಜ್‌ ಅವರು ಎಷ್ಟು ಶ್ರೇಷ್ಠ ವ್ಯಕ್ತಿಯಾಗಿದ್ದರೆಂದರೆ... ಅವರ ಮಾತೃಭಾಷಾಭಿಮಾನ (ಕನ್ನಡದ ಹೊರತಾಗಿ ಬೇರೆ ಭಾಷೆಯ ಚಲನ ಚಿತ್ರಗಳಲ್ಲಿ ನಟಿಸಲೇ ಇಲ್ಲ), ಸಮಾಜ ಗೌರವ ( ಸಮಾಜಕ್ಕೆ ಅವರು ಸಲ್ಲಿಸಿದ ಗೌರವ, ಎಂತಹ ಅಪರಿಚಿತ, ಸಣ್ಣ ವ್ಯಕ್ತಿಯನ್ನೂ ನಮಸ್ಕರಿಸಿ ಮುದದಿಂದ ಮಾತಾಡಿಸುವ ಮಹತ್ವ), ‘ಕಾಯಕವೇ ಕೈಲಾಸ’ದಂತಿದ್ದ ಕಾರ್ಯ ವೈಖರಿ ( 50 ವರುಷಗಳ ತಡೆರಹಿತ, ವೈವಿಧ್ಯ ಪಾತ್ರಗಳ ಅಮಾನತ್ತು ಗೊಳಿಸಿದ ಅಭಿನಯ- 205 ಚಲನ ಚಿತ್ರಗಳಲ್ಲಿ), ಭಕ್ತಿ ಭಾವ (ಹಿರಿಯರಲ್ಲಿ, ದೇವರಲ್ಲಿ (ರಾಘವೇಂಧ್ರ) ಇಟ್ಟಿದ್ದ), ಸೌಜನ್ಯ (ಸಹೃದಯತೆಗೆ ಸಾಕಾರ), ನಿರಹಂಕಾರ (ಅತ್ಯುನ್ನತ ಸ್ಥಾನದಲ್ಲಿದ್ದರೂ, ಅಹಂಕಾರದ ಅರಿವೇ ಇಲ್ಲದ), ನಿರ್ಮಲ ಮನಸ್ಸು ( ವೈರಿಗೂ ಕೇಡು ಬಯಸದ), ಆದರದ ಔದಾರ್ಯತೆ ( ಸವಿನುಡಿಗಳಿಂದ ಸಾಂತ್ವನ ಗೊಳಿಸುವ), ಹೀಗೆ... ಅವರ ವ್ಯಕ್ತಿತ್ವವನ್ನು ಎಷ್ಟು ಬಣ್ಣಿಸಿದರೂ ಸಾಲದು, ಪದಗಳೇ ಇಲ್ಲ ವರ್ಣಿಸಲು. ಒಂದು ಸಾಲಿನಲ್ಲಿ ಹೇಳಲು ಯತ್ನಿಸಿದರೆ, ‘ಮನುಷ್ಯತ್ವದ ಮೇರು ಪರ್ವತವನ್ನು ಯಶಸ್ವಿಯಾಗಿ ಹತ್ತಿ, ತುದಿಯಲ್ಲಿ ನಿಂತು, ಬೇರೆಲ್ಲರನ್ನೂ ಅಲ್ಲಿಗೆ ಕರೆಯುತ್ತಾ ದಾರಿದೀಪದಂತಿರುವ ಬಂಗಾರದ ಮನುಷ್ಯ’, ಕನ್ನಡಿಗರ ಹೃದಯದಲ್ಲಿ ಸದಾ ಮಿಡಿಯುತ್ತಿರುವ ‘ಸ್ವಚ್ಛ, ಸತ್ಯ ಶಾಶ್ವತ’.

  ‘ಡಾ.ರಾಜ್‌ ಅವರ ಆತ್ಮಕ್ಕೆ ಚಿರವಾದ ಸತ್ಯ ಶಾಂತಿ ಸಿಗಲಿ’

  - ಡಾ: ಮೀನಾ ಸುಬ್ಬರಾವ್‌, ಸಲಿನಾಸ್‌, ಕ್ಯಾಲಿಫೋರ್ನಿಯಾ

  *

  ಡಾ.ರಾಜ್‌ ಅವರು ಎಂದೆಂದಿಗೂ ನಂದದ ನಂದಾದೀಪ. ಅವರು ಹಚ್ಚಿದ ಕಿಡಿ ನಮ್ಮೆಲ್ಲರ ಹೃದಯದ ಮಾರ್ಗದರ್ಶಿ ಅಗ್ನಿಯಾಗಿ ಎಂದೆಂದಿಗೂ ಉರಿಯುವುದು. ಸಮಸ್ತ ಮನುಕುಲಕೇ ಆದರ್ಶವಾಗಿ ಮಾನವತ್ವವನು ಬೆಳಗಿದ ರಾಜಣ್ಣ ಅಜರಾಮರ. ಕೇವಲ ರಜತ ಪರದೆಯಲ್ಲದೇ ಕನ್ನಡಿಗರ ಮನೋಸಿಂಹಾಸನದಿ ರಾಜ್ಯಗೈದ ಜಗ ಮೆಚ್ಚಿದ ಮಗ. ಕನ್ನಡಾಂಬೆಯ ಬಗ್ಗೆ ಅವರು ಕಂಡ ಕನಸು ನನಸಾಗಲಿ ಹಾಗೂ ಅವರ ಜೀವನ ಸಾಕ್ಷಾತ್ಕಾರವಾಗಲಿ. ಜೈ ಕನ್ನಡ.


  - ರವಿ ಕಲ್ಮಠ್‌

  *

  ‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು... ಕನ್ನಡವೇ ಸತ್ಯ ಅನ್ಯದ ನೆಲವೆ ಮಿಥ್ಯ’. ಕನ್ನಡ ಭಾಷೆ, ಕನ್ನಡ ಸಂಸ್ಕೃತಿಗಾಗಿ ಹಗಲಿರುಳು ದುಡಿದ ಬಂಗಾರದ ಮನುಷ್ಯ ‘ಅಣ್ಣಾ SDSU, Bookings, US alumini ತಂಡದ ವತಿಯಿಂದ ಅನಂತ ನಮಸ್ಕಾರಗಳು. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಕೋರುವ, ನಿಮ್ಮವರೆ ಆದ,

  - ಸುಧನ್ವ, ರಮೇಶ್‌, ಸುರೇಶ್‌, ಮಧು, ರಾಂಸಾಮಿ, ಪಶುಪತಿ, ನಾಗ, ಪುಟ್ಟ ಹಾಗೂ ಅನೇಕರು.

  *

  ಯೋಚಿಸಿದಷ್ಟೂ ದುಃಖ ಉಮ್ಮಳಿಸಿ ಬರುತ್ತಿದೆ. ಪ್ರೀತಿಯ ರಾಜಣ್ಣ ಇನ್ನಿಲ್ಲ. ಬದುಕಿದ್ದಾಗ ನೋಡುವ ಸೌಭಾಗ್ಯ ಸಿಗಲಿಲ್ಲ. ಮುಂದಿನ ಸಾರಿ ಬೆಂಗಳೂರಿಗೆ ಹೋದಾಗ ರಾಜಣ್ಣನ ಸಮಾಧಿ ಮುಂದೆ ನಿಂತು ಅಶ್ರುತರ್ಪಣ ಅರ್ಪಿಸಿ ಬರುತ್ತೇನೆ ಎಂದು ನನಗೆ ನಾನೇ ಸಂತೈಸಿಕೊಳ್ಳುತ್ತಿದ್ದೇನೆ.

  - ಗುರುಪ್ರಸಾದ್‌ ವೆಂಕಟರಾಮು, ಟೋಕಿಯೊ, ಜಪಾನ್‌

  *

  ರಾಜ್‌ ಅಪರೂಪದ ವ್ಯಕ್ತಿ - ಅವರಂತವರು ಕನ್ನಡನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ.

  - ಸತೀಶ್‌ಕುಮಾರ್‌

  *

  ಅಮರ

  ಜನಿಸಿದನು ತಾಯ್ತಂದೆಯರಿಗೆ ಮುತ್ತುರಾಜನಾಗಿ
  ಬೆಳೆದನು ದೇಶದ ರಾಜಕುಮಾರನಾಗಿ
  ಜಗಮಗಿಸಿದನು ಕರ್ನಾಟಕದ ಅನರ್ಘ್ಯ ರತ್ನವಾಗಿ
  ಮೊಳಗಿದನು ಗಂಧರ್ವಗಾನ ತರಂಗಗಳಾಗಿಮಿಡಿದನು ಚಿತ್ರಲೋಕದ ನಾಡಿ ಬಡಿತವಾಗಿ
  ಬೇರೂರಿಹನು ಹೃದಯಗಳಲಿ ಶಾಶ್ವತ ಮರವಾಗಿ
  ಉಳಿಯುವನು ಚಿರಕಾಲ ತಂಪನೆರೆಯುವ ಅಮರನಾಗಿ
  ರಾಜಕುಮಾರ, ನೀವೆಂದಿಗೂ
  ಅಮರ ಅಮರ ಅಮರ

  - ವಿದ್ಯಾ ಭಾನು

  *

  ಪ್ರಾಣ ನಮ್ಮ ದೇಹವನ್ನು ತೊರೆದು ಹೋಗುವಾಗ ಅನುಭವಿಸುವ ಯಾತನೆಯಂತಿದೆ ರಾಜ್‌ ಅವರ ಅಗಲಿಕೆ, ಕಣ್ಣಲ್ಲಿ ನಿದ್ದೆ ಇದ್ದರೂ ನಿದ್ದೆ ಬಾರದು, ಹಸಿದಿದ್ದರೂ ಊಟ ಸೇರದು, ಎಂದೆಂದಿಗೂ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ ರಾಜ್‌ ಅಮರರಾಗಲಿ.

  - ಮಹೇಶ್‌

  *

  ಯಾಹೂ ಮೆಸೇಜ್‌ನಲ್ಲಿ ಏನಾದ್ರು ಮೆಸೇಜ್‌ ಇದೆಯಾ ಎಂದು... USAನಲ್ಲಿ ಬೆಳಿಗ್ಗೆ ಬಂದೆ ನೋಡಲು ಆಫ್‌ಲೈನ್‌ನಲ್ಲಿ ನನ್ನ ಅಕ್ಕನ ಮಗ ಮೆಸೇಜ್‌ ಇತ್ತಿದ್ದ ರಾಜ್‌ ಇನ್ನಿಲ್ಲವೆಂದು... ನನ್ನ ಎದೆ ಢಂ ಅಂತು.. ನೋೕೕೕೕೕ ಎಂದು ಅಳು ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತೆ. ಸುಳ್ಳಾಗಿರಲಿ ದೇವರೆ ಎಂದು ಮನದಲ್ಲೆ ಪ್ರಾರ್ಥಿಸುತ, ನ್ಯೂಸ್‌ ನೋಡೋಣ ಎಂದು ನಡುಗುವ ಕೈಯಿಂದಲೇ ಟಿವಿ ಆನ್‌ ಮಾಡಿದರೆ...ದೊಡ್ಡದಾದ ಅಕ್ಷರದಲ್ಲಿ ನಮ್ಮ ರಾಜ್‌ ಚಿತ್ರ ಮತ್ತು ಸತ್ತ ಮೆಸೇಜ್‌ ನಿಜವಾದದ್ದು ಎಂದು ಅರಿತು ತಡೆಯಲಾರದೆ ಕಂಬನಿ..ಇನ್ನು ಜೋರಾಗಿ ಉಕ್ಕಿ ಬಂತು...

  ಆ ಕ್ಷಣ ರಾಜ್‌ರವರ ಭಕ್ತಿ ಪ್ರಧಾನ ಸಿನಿಮಾ ನೆನಪಾಗಿ... ದೇವರಲ್ಲಿ ನಂಬಿಕೆ ಇದ್ರೆ... ಸತ್ತವರನ್ನು ಬದುಕಿಸಿ ಮತ್ತೆ ಜೀವ ತರುವಂತೆ ಮಾಡುವ ಹಾಗೆ ಪ್ರಾರ್ಥಿಸುತ...ಜೀವ ಬಂದ್ರೆ ಎಂದು ಅನ್ನಿಸಿತು. ಆದರೆ, ಹಮ್‌ ನನ್ನಲ್ಲಿ ಆ ಭಕ್ತಿ, ಶ್ರದ್ದೆ ಇಲ್ಲವಲ್ಲ... ಅದನ್ನು ಮಾಡುವವರು ನಮ್ಮ ರಾಜ್‌.

  ಕಾಳಿದಾಸನಂತೆ, ಮಂತ್ರಾಲಯ ರಾಘವೇಂದ್ರರಂತೆ, ಮಾರ್ಕಂಡೇಯನಂತೆ ಶ್ರದ್ಥೆ, ಭಕ್ತಿ ಆ ನಿನ್ನ ಕೋಟಿ ಕೋಟಿ ಅಭಿಮಾನಿಗಳಲ್ಲಿ ಒಬ್ಬರಿಗಾದರೂ ಇದ್ದಿದ್ರೆ, ಅಥವಾ ಎಲ್ಲ ಅಭಿಮಾನಿಗಳ ಮೊರೆ ಆ ದೇವರಿಗೆ ಕೇಳಿಸಿ ರಾಜ್‌ಗೆ ಪುನರ್ಜೀವ ಕೊಡಬಾರದಿತ್ತೆ ಎಂದುಕೊಂಡೆ.

  ಫ್ರೆಂಡ್‌ ಮನೆಗೆ ಹೋಗಿ ಪ್ರಜಾಮತ, ಸುಧಾ ಇತರೆ ಮ್ಯಾಗಜಿನ್‌ಗಳಲ್ಲಿ ಬರುವ ರಾಜ್‌ ಚಿತ್ರಗಳನ್ನು ಕಲೆಕ್ಟ್‌ ಮಾಡಿ ಅಲ್ಬಮ್‌ ಮಾಡಿದ್ದೆ. ಮೊದಲ ದಿನನೇ ಸಿನೆಮಾ ನೋಡುತ್ತಿದ್ದೆ. ನೋಡುವುದು ಮಾತ್ರವಲ್ಲಿ ಅವರ ಚಿತ್ರಗಳಿಂದ ಕಲಿಯುವುದೂ ಸಾಕಷ್ಟಿತ್ತು. ರಾಜ್‌ರ ಸಿನೆಮಾ ಮನರಂಜನೆ ಮಾತ್ರವಲ್ಲ ಪಾಠಶಾಲೆ ಥರ ಇತ್ತು , ನನ್ನ ಪಾಲಿಗೆ. ದುಃಖ ತಡೆಯಲಾಗುತ್ತಿಲ್ಲ. ದೇವರು ನಮ್ಮೆಲ್ಲರ ಮೆಚ್ಚಿನ ರಾಜ್‌ ಅವರ ಆತ್ಮಕ್ಕೆ ಶಾಂತಿ ಕೊಡಲೆಂದು ಪ್ರಾರ್ಥಿಸುತ್ತ ಕೋಟ್ಯಂತರ ಅಭಿಮಾನಿಗಳಲ್ಲಿ ಒಬ್ಬಳು,

  - ಗಿರಿಜಾ

  *

  Rajkumars movies conveyed message to the audience and was a great influence on crores of Karnataka people including myself. He will always remain with us in our memories as we grew up watching his movies.

  We will not see another Rajkumar in our life time. His act of donating eyes is commendable.

  - Chandrakumar, Cedar Rapids USA

  *

  Dr. Raj was and continues to be the role model for all Kannadigas. Dr.Raj has showed how "humble" can conquer tens of millions of hearts. He showed how we, Kannadigas, can be humble and at the same proud of our language and heritage.

  Dr. Raj will always be my role model and I am sure Kannadigas can never forget his contributions. His name and fame will live forever.

  Sirigannadamgelge.

  - M. Anjanappa

  *

  Manyare:
  Kannadada varanata Rajkumar innillavendare nambalasadya. Nanu avarannu kenadada Toronto nagaradalli bheti maadidde haagu swalpa samaya kaleyuava avakasha nannadaagittu. aamele nanu bengalurige bandaga kelavusala bheti maadidde. Avaru nijakku obba sarala manushya. avara aatmakke shanti sigali endu prarthisuttene.

  - S. R. Murthy

  *

  Hello

  Dr Rajkumar Annavru hutti beleda manninalli navu huttiddeve anta nanage thumba hemme.

  Avara cinemagalannu nodutha beledavanu nanu. Annavaru beledu banda manninalli andare avara talukinavanu annuvudake nanu punya madiddene. Avarondu devara pratiroopa.

  Anna na ninna mareyalare.

  - Anand, Chamarajanagara

  *

  Dr.Rajanna is a unique and great personality not only in Kannada filmdom but also in real life. He has inspired countless Kannidigas and fans across the world. We Kannadigas are prowd and fortunate to have Dr.Rajanna born & lived in our land and blessed with such great talent, taking our Language, heritage, culture across the nation, cutting all the borders.
  Dr.Rajanna is chiranjeevi. He can never part from us. My heartfelt condolences for his sad demise.

  - Raghu Prasad S.


  ಇನ್ನಷ್ಟು ನೆನಪು :
  ರಾಜ ವೈಭವಕ್ಕೆ ತೆರೆಬಿದ್ದಿದೆ... ಆದರೆ ನೆನಪುಗಳಿಗೆ ಎಲ್ಲಿಯ ತೆರೆ?
  ಕನ್ನಡ ಕಂಠೀರವ ರಾಜ್‌ ನಿಧನಕ್ಕೆ ವಿಶ್ವಕನ್ನಡಿಗರ ತಲ್ಲಣ
  ದೇವತಾ ಮನುಷ್ಯ : ಯಾರ್ಯಾರು ಏನ್‌ ಹೇಳಿದರು?

  ಅಭಿಮಾನಿಗಳೇ, ನಿಮ್ಮ ಸಂಕಟ-ಸಂತಾಪ ನಮ್ಮೊಂದಿಗೆ ಹಂಚಿಕೊಳ್ಳಿ


  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X