»   » ಎದೆ ತುಂಬಿ ಹಾಡುವ ಬಾಲಸುಬ್ರಹ್ಮಣ್ಯಂಗೆ ‘ಬಸವಶ್ರೀ’

ಎದೆ ತುಂಬಿ ಹಾಡುವ ಬಾಲಸುಬ್ರಹ್ಮಣ್ಯಂಗೆ ‘ಬಸವಶ್ರೀ’

Subscribe to Filmibeat Kannada


ಬೆಂಗಳೂರು : ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯ ಸೂರೆ ಮಾಡಿದ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ, ಪ್ರಸಕ್ತ ಸಾಲಿನ ಬಸವಶ್ರೀ ಪ್ರಶಸ್ತಿ ಸಂದಿದೆ.

ಬಾಲು ಅವರ ದಶಕಗಳ ಕಾಲದ ಸಂಗೀತ ಸೇವೆಯನ್ನು ಬಸವ ವೇದಿಕೆ ಗುರ್ತಿಸಿ, ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ ಎಂದು ವೇದಿಕೆ ಕಾರ್ಯದರ್ಶಿ ಸಿ.ಸೋಮಶೇಖರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಏ.20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ, ಪ್ರಶಸ್ತಿ ಪ್ರದಾನ ಮಾಡುವರು. ನಿಜಗುಣ ಅನುಭವ ಮಂಟಪದ ಅಧ್ಯಕ್ಷ ನಿಜಗುಣ ಸ್ವಾಮೀಜಿಗಳಿಗೆ ಇದೇ ಸಂದರ್ಭದಲ್ಲಿ ‘ವಚನ ಸಾಹಿತ್ಯ ಪ್ರಶಸ್ತಿ ’ ವಿತರಿಸುವುದಾಗಿ ಸೋಮಶೇಖರ್‌ ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada