»   » ‘ಓಂಕಾರ’ದ ಚುಯಿ ಮುಯಿ ಬಾಲೆ

‘ಓಂಕಾರ’ದ ಚುಯಿ ಮುಯಿ ಬಾಲೆ

Posted By: Staff
Subscribe to Filmibeat Kannada
Bollywood baby preeti
'ಚಚ್‌ ಗಯಿ ಚಚ್‌ ಗಯಿ ಕೂಡಿ ಚಚ್‌ಗಯೀ " ಹಾಡಿನ್ನೂ ನೆನಪಿನಿಂದ ಮಾಸಿರಲಿಕ್ಕಿಲ್ಲ. ಈ ಮನೆ ಮಾತಾಗಿದ್ದ ಆಲ್ಬಂ ಹಾಡಿನ ಚುಯಿಮುಯಿ ಬೆಡಗಿ, ಅಬ್ಬಾಸ್‌ ಆಲಿ ಜೊತೆ ನಟಿಸಿದ ಆ ಮುಗುದ ಮೊಗದ ನೆನಪಿಲ್ಲವೇ. ಅದೇ! ಪ್ರೀತಿ ಜಿಂಗಾನಿಯ !

ಉಪೇಂದ್ರ ನಟನೆಯ 'ನಾನು ನಾನೇ" ಮತ್ತು ರವಿಚಂದ್ರನ್‌ ಅಭಿನಯದ 'ಪಾಂಡುರಂಗ ವಿಠಲ"ದಲ್ಲಿ ನಟಿಸಬೇಕಿದ್ದ ಪ್ರೀತಿಗೆ ಮುಹೂರ್ತ ಕೂಡಿಬಂದಿರುವುದು ಈಗ- ಓಂಕಾರ ರೂಪದಲ್ಲಿ . ಆಕೆ ಉಪೇಂದ್ರನ ಹೊಸ ಚಿತ್ರ 'ಓಂಕಾರ"ದ ನಾಯಕಿ. ಈ ಮೂಲಕ ತನ್ನ ಸ್ಯಾಂಡಲ್‌ವುಡ್‌ ಇನ್ನಿಂಗ್ಸ್‌ನ್‌ ಮುಂಜಾವಿನಲ್ಲಿದ್ದಾಳೆ.

24ರ ಹರೆಯದ ಪ್ರೀತಿ ಬೆಳ್ಳಿತೆರೆಗೆ ಬಾಲಿವುಡ್‌ನ ಮೂಲಕ ಕಾಲಿರಿಸಿದ್ದು. ಅದಕ್ಕೂ ಮುನ್ನ ಮಾಡೆಲಿಂಗ್‌ ಲೋಕದ ಮಾಯಾಂಗನೆ. ಮೊದಲ ಚಿತ್ರ ತೆರೆಕಾಣುವ ಮುನ್ನವೇ, ಯಶ್‌ ಚೋಪ್ರಾ ನಿರ್ದೇಶನದ 'ಮೊಹಬತೇನ್‌" ತೆರೆಕಂಡಿತು. ಪ್ರೀತಿ ಯಶಸ್ಸಿನ ಬಾಗಿಲು ತೆರೆಯಿತು. ಆನಂತರ 'ಅವಾರಾ ದಿವಾನ ಪಾಘಲ್‌" ಸೇರಿದಂತೆ 10-12 ಚಿತ್ರಗಳಲ್ಲಿ ನಟಿಸಿದರು. ದಕ್ಷಿಣದಿಂದಲೂ ಅವಕಾಶಗಳು ಕೈಬೀಸಿ ಕರೆದವು. 'ನರಸಿಂಹ ನಾಯುಡು"ನಂತಹ ಯಶಸ್ವಿ ತೆಲುಗು ಚಿತ್ರದಲ್ಲಿ ನಟಿಸಿದಳು. ಈ ನಡುವೆ ಕೆಲಕಾಲ ಅನಾರೋಗ್ಯದಿಂದ ಹಲವು ಅವಕಾಶ ಕಳೆದುಕೊಂಡಳು. ಪಾಪ!

ಈಗ ಗಾಂಧೀನಗರಕ್ಕೆ ಬಂದಿದ್ದಾಳೆ ಚುಯಿಮುಯಿ ಹುಡುಗಿ. 'ಓಂಕಾರ" ಚಿತ್ರದಲ್ಲಿ ಆಕೆ ಒಬ್ಬ ಜನಸಾಮಾನ್ಯೆ. ಭೂಗತ ಲೋಕದ ಹಾಗೂ ಅದರ ಕರಾಳ ಬೆಳಕಿನಲ್ಲಿ ಸಿಲುಕಿರುವ ಹಿಂದಿ ಚಿತ್ರರಂಗದ ಮೇಲೆ ಈ ಕಥೆ ಆಧರಿಸಿದೆ. ನಾಯಕಿ ಪಾತ್ರ ಚಿತ್ರದಲ್ಲಿಯೂ ನಟಿಯದ್ದೇ. ಸ್ಯಾಂಡಲ್‌ವುಡ್‌ನಲ್ಲಿ ಬಾಲಿವುಡ್‌ ನಟಿಯ ಪಾತ್ರವನ್ನು ಪ್ರೀತಿ ಜಿಂಗಾನಿಯ ಹೇಗೆ ನಿರ್ವಹಿಸುತ್ತಾಳೆ, ನೋಡಬೇಕು.

English summary
Bollywood baby preeti steps into sandlewood. Her new film Omkar with Upendra

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada