»   » ಚಿಕ್ಕಮಗಳೂರು ಹುಡುಗಿಯಿಂದ ಪ್ರೇಮ್‌ಗೆ ಆತ್ಮಹತ್ಯೆ ಬೆದರಿಕೆ!

ಚಿಕ್ಕಮಗಳೂರು ಹುಡುಗಿಯಿಂದ ಪ್ರೇಮ್‌ಗೆ ಆತ್ಮಹತ್ಯೆ ಬೆದರಿಕೆ!

Subscribe to Filmibeat Kannada

ಚಿಕ್ಕಮಗಳೂರಿನ ಹುಡುಗಿ ಪ್ರೇಮ್‌ಗೆ ಗಂಟು ಬಿದ್ದಿದ್ದು, ‘ತಾಳಿ ಕೊಡು, ಅಥವಾ ನೇಣಿನ ಹಗ್ಗ ಕೊಡು’ ಎಂದು ಕಾಡುತ್ತಿದ್ದಾಳೆ! ಅಷ್ಟು ಮಾತ್ರವಲ್ಲ, ‘ರಕ್ಷಿತಾಳನ್ನು ಮದುವೆಯಾದರೆ ನಾನು ಸುಮ್ಮನಿರುವುದಿಲ್ಲ. ನಿಮ್ಮ ಮದುವೆ ಕಲ್ಯಾಣ ಮಂಟಪದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಪ್ರೇಮಬೆದರಿಕೆ ಹಾಕಿದ್ದಾಳಂತೆ.

‘ಅಮ್ಮಾ ತಾಯಿ, ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು’ ಎಂಬ ಪ್ರೇಮ್‌ ಮನವಿಗೆ, ಚಿಕ್ಕಮಗಳೂರಿನ ಸೂಜಿ ಮಲ್ಲಿಗೆ ಕಿಲುಬು ಕಾಸಿನ ಕಿಮ್ಮತ್ತು ನೀಡಿಲ್ಲವಂತೆ!

ಕರಿಯ, ಎಕ್ಸ್‌ಕ್ಯೂಸ್‌ ಮಿ, ಜೋಗಿ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದೇ ತಡ, ಪ್ರೇಮ್‌ಗೆ ತಾರಾಪಟ್ಟ ಕಾಲಬದಿಗೆ ಬಂತು. ತುಂಡುತುಂಡು ಹುಡುಗಿಯರ ಮನದಲ್ಲಿ ಪ್ರೇಮರಾಗ ಶುರುವಾಯಿತು. ಆಗಲಿಂದಲೂ ಪ್ರೇಮಿಗಳ ಕಾಟ ಪ್ರೇಮ್‌ಗೆ ತಪ್ಪಿಲ್ಲವಂತೆ.

ಫೋನ್‌ನಲ್ಲಿ ಪ್ರೀತಿ ಮಾಡು, ನನ್ನ ಮದ್ವೆಯಾಗು ಅನ್ನೋ ಹುಡುಗಿಯರಿಗೆ, ಪ್ರೇಮ್‌ ಸಮಾಧಾನ ಹೇಳಿದ್ದರಂತೆ. ಬುದ್ದಿ ಹೇಳಿದ್ದರಂತೆ. ಕೆಲವರನ್ನು ಗದರಿಸಿಯೂ ಇದ್ದರಂತೆ. ಈಗಲೂ ಗದರಿಸುತ್ತಿದ್ದಾರಂತೆ. ರಕ್ತದಿಂದ ಹುಡುಗಿಯರು ಬರೆದ ಪ್ರೇಮ ಪತ್ರಗಳೂ ಅವರ ಬಳಿ ಇವೆಯಂತೆ. ಎಲ್ಲವೂ ಪ್ರೇಮಮಯ!

ರಕ್ಷಿತಾ ಮದುವೆ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾದ ದಿನದಿಂದಲೂ, ಇಂತಹ ಕರೆಗಳು ಮತ್ತಷ್ಟು ಹೆಚ್ಚಿವೆ ಅನ್ನೋದು ಪ್ರೇಮ್‌ ಅಭಿಪ್ರಾಯ. ಅವರ ಅಭಿಪ್ರಾಯ ಏನೇ ಇರಲಿ, ನೀವೇನಂತಿರಾ ರಕ್ಷಿತಾ?

Post your views

ಇದನ್ನೂ ಓದಿ :
ನಾನೀಗ ನಾಯಕ - ಪ್ರೇಮ್‌
ರಕ್ಷಿತಾಗೆ ಬಿಳಿ ಗಂಡ ಬೇಕಂತೆ!?
ಕೊನೆಗೂ ನೆರವೇರಿದ ರಕ್ಷಿತಾ-ಪ್ರೇಮ್‌ ನಿಶ್ಚಿತಾರ್ಥ


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada