»   » ಸೊಂಟಕ್ಕೆ ಬಂತು ಕನ್ನಡ.. ಗೋವಿಂದ ಗೋವಿಂದ!

ಸೊಂಟಕ್ಕೆ ಬಂತು ಕನ್ನಡ.. ಗೋವಿಂದ ಗೋವಿಂದ!

By: *ವಿಘ್ನೕಶ್ವರ ಕುಂದಾಪುರ
Subscribe to Filmibeat Kannada

'ಬೇಕೇನು ಸಾಮಾನು ನೋಡು ನೋಡು...".
ಕನ್ನಡದ ಮೊದಲ ಅಧಿಕೃತ ದ್ವಂದ್ವಾರ್ಥದ ಗೀತೆಯಿದು. ಬರೆದವರು ಚಿ. ಉದಯಶಂಕರ್‌. ಆದರೆ ಯಾರೂ ಇದನ್ನು ಅಷ್ಟೊಂದು ಸೀರಿಯಸ್ಸಾಗಿ ತಗೊಂಡಿರಲಿಲ್ಲ. ಅನಂತರ ರಾಜ್ಕುಮಾರ್‌ 'ಮೈದೋರಿ ಮುಂದೆ ಸಹಕರಿಸು" ಎಂದು ಹಾಡಿದಾಗಲೂ ಪ್ರೇಕ್ಷಕ ಸುಮ್ಮನೇ ಇದ್ದ. ಸಜ್ಜನಕವಿ ಕಲ್ಯಾಣ್‌ 'ಅಂಗಾಂಗ ಅರಳಿಸಿ, ಪಂಚಾಗ ಹೊರಳಿಸಿ, ಪಲ್ಲಂಗ ಹಾಸಿ ಬಿಡುವೆ, ಈ ಮೈಸೂರಾ ಬರೆದುಬಿಡುವೆ" ಅಂದ ಹಾಡು ಯಾರ ಕಿವಿ ತಲುಪಿತೋ ಗೊತ್ತಿಲ್ಲ.

ಚಿತ್ರೋದ್ಯಮಿಗಳಿಗೆ ಸೊಂಟದ್ಕೆಳಗಿನ ಭಾಷೆ ಹೊಸದಲ್ಲ. ಚಿತ್ರವೊಂದರ ಚಿತ್ರೀಕರಣ ಆರಂಭವಾಗಿ ಮುಗಿಯುವ ಮುನ್ನ ನಿರ್ಮಾಪಕರಿಂದ ಹಿಡಿದು ಲೈಟ್‌ಬಾಯ್‌ತನಕ ಎಲ್ಲರೂ ಕಿವಿ ತುಂಬುವಷ್ಟು ಇಂಥಾ ಭಾಷೆ ಪ್ರಯೋಗಿಸುತ್ತಾರೆ. ಆದರೆ ಅದು ಚಿತ್ರದೊಳಗೂ ನುಗ್ಗಿದಾಗಲೇ ಅಪಾಯ ಕಾಡುವುದು. ಇದಕ್ಕೆ ಲೇಟಸ್ಟು ಉದಾಹರಣೆ ಅಂದರೆ 'ಚಂದು" ಚಿತ್ರದ ಸೊಂಟ ಗೀತೆ.

'ಸೊಂಟಕ್ಕನಕನ್ನಕ್ಕನಕನ್ನಕನ್ನ.." ಎಂದು ಹಾಡು ಆರಂಭವಾಗುತ್ತಿದ್ದಂತೆಯೇ 'ಅಕ್ಕನ್‌" ಥರ ಕೇಳಿಸುತ್ತದೆ. ಆಮೇಲೆ ತಗೊಳ್ಳಿ- 'ಸೊಂಟದ ಇಸ್ಯ ಬ್ಯಾಡಮ್ಮ ಸಿಸ್ಯ... ಸೊಂಟ ಸೂಪರ್ರು... ಆದ್ರೆ ಭಾರಿ ಡೇಂಜರ್ರು.... ಸೊಂಟದಾ ಆಸುಪಾಸು ಇನ್ನು ಡೇಂಜರ್ರು...".

ಸೊಂಟದ ಅಸುಪಾಸು ಅಂದರೇನು? ಗುರುಕಿರಣ್‌ ಹೇಳುತ್ತಾರೆ. 'ಇದೆಷ್ಟೋ ವಾಸಿ. ಮೊದಲು ಬರೆದಿದ್ದ ಹಾಡಲ್ಲಿ ಸೊಂಟದ ಮೇಲೆಕೆಳಗೆ ಅಂತ ಇತ್ತು . ವಲ್ಗರ್‌ ಆಯ್ತು ಅಂತ ಆಸುಪಾಸು ಮಾಡಿದ್ವಿ?".

ಸೆನ್ಸಾರ್‌ನಲ್ಲೂ ಈ ಗೀತೆ ಸಲೀಸಾಗಿ ಪಾಸ್‌ ಆಯ್ತು. ಯಾಕೆಂದರೆ ಈ ಹಾಡನ್ನು ಕತ್ತರಿಸವಂತೆಯೇ ಇಲ್ಲ , ಇಡೀ ಚಿತ್ರದ ಕತೆಯೇ ಸೊಂಟದ ಸುತ್ತ ಸುತ್ತುತ್ತದೆ.

ಕಾಲ ಎಲ್ಲಿಗೆ ಬಂತು ನೋಡಿ? ಎದೆಯಿಂದ ಝರ್ರಂತ ಸೊಂಟಕ್ಕೆ. ಚಿತ್ರ ನಿರ್ಮಿಸಿದವರು ಕನ್ನಡದ ರಕ್ಷಣೆಗೆ ಟೊಂಕ ಕಟ್ಟಿರುವ ಸಾ.ರಾ. ಗೋವಿಂದು. ಸೊಂಟ ಮತ್ತು ಟೊಂಕದ ನಡುವೆ ಅಂಥಾ ವ್ಯತ್ಯಾಸವೇನೂ ಇಲ್ಲ.
ಸೊಂಟ ಸಂಚಯ

English summary
More vulgar songs in sandalwood. This time by Kannada activist cum producer Sa.Ra.Govindu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada