»   » ನಮ್ಮತನಕ್ಕೆ ಬೆಲೆ ನೆಲೆ ಎಲ್ಲಿದೆ ಸ್ವಾಮಿ?

ನಮ್ಮತನಕ್ಕೆ ಬೆಲೆ ನೆಲೆ ಎಲ್ಲಿದೆ ಸ್ವಾಮಿ?

Posted By: ನಾವಿಕ
Subscribe to Filmibeat Kannada

ರೀಮೇಕು ಅನ್ನೋ ಪಿಶಾಚಿ ತೊಲಗಿಹೋಯಿತು ಅನ್ನುವ ಅಚ್ಚ ಕನ್ನಡಿಗರ ಸಂತೋಷ ಇನ್ನು ಮೂರು ತಿಂಗಳಲ್ಲಿ ಮಾಯವಾಗುತ್ತದೆಯಾ?

ಗಾಂಧಿನಗರದಲ್ಲಿ ಅಂಥಾದ್ದೊಂದು ಸುದ್ದಿ ಹಬ್ಬಿದೆ. ಕೆಲವು ದೊಡ್ಡ ನಿರ್ಮಾಪಕರಿಗಂತೂ ಆ ಬಗ್ಗೆ ಅನುಮಾನವೇ ಇಲ್ಲ. ಅವರ ತರ್ಕಕ್ಕೆ ಕಾರಣಗಳೂ ಇವೆ. ಈಗಾಗಲೇ ರೆಡಿಯಾಗಿರುವ ರೀಮೇಕು ಸರಕು ಇನ್ನು ಮೂರು ತಿಂಗಳಿಗೆ ಸಾಕಾಗುತ್ತದೆ. ಅನಂತರ ಸಹಜವಾಗಿಯೇ ಚಿತ್ರಗಳು ಕಡಿಮೆ, ಅಂದರೆ ಕಾರ್ಮಿಕರಿಗೆ ಕೆಲಸಾನೂ ಕಡಿಮೆ ಆಗುತ್ತೆ. ಹೋಗಲಿ, ಸ್ವಮೇಕು ಚಿತ್ರಗಳನ್ನೇ ನಿರ್ಮಿಸಬಹುದಲ್ಲ ಅಂದರೆ ಇಲ್ಲಿ ಒಳ್ಳೇ ಕತೆಗಾರರಿಗೆ ಮತ್ತು ನಿರ್ದೇಶಕರಿಗೆ ಬರ. ಹಾಗಾಗಿ ಇಡೀ ಕನ್ನಡ ಚಿತ್ರೋದ್ಯಮವೇ ಸಂಕಷ್ಟಕ್ಕೀಡಾಗುತ್ತದೆ ಅನ್ನುವ ವಾದ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳ ಬಳಿಗೆ ಒಂದು ನಿಯೋಗ ತೆರಳುವ ಯೋಚನೆಯೂ ನಿರ್ಮಾಪಕರಿಗೆ ಇದೆ.

ಸರ್ಕಾರ ಈ ಪ್ರಪೋಸಲ್‌ಗೆ ಖಂಡಿತಾ ಒಪ್ಪುತ್ತದೆ ಅನ್ನುವ ಗ್ಯಾರಂಟಿ ಮೇಲೆ ಒಂದಿಬ್ಬರು ನಿರ್ಮಾಪಕರು ಈಗಾಗಲೇ ಐದೈದು ತಮಿಳು ಚಿತ್ರಗಳ ರೀಮೇಕ್‌ ಹಕ್ಕನ್ನು ಖರೀದಿಸಿದ್ದೂ ಆಗಿದೆ. ಕನ್ನಡದಲ್ಲಿ ರೀಮೇಕಿಗೆ ತೆರಿಗೆ ಹಾಕಿದ್ದಾರೆ ಅನ್ನುವ ಸುದ್ದಿ ಪ್ರಕಟವಾದಕ್ಷಣ ಅಲ್ಲೂ ರೇಟು ಕುಸಿದಿದೆ. ಆಫ್‌ ಸೀಸನ್‌ನಲ್ಲಿ ಖರೀದಿಸುವವನೇ ಜಾಣ ಅಲ್ವೇ.

English summary
Remake, still more in number in Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada