»   » ಮಲ್ಲನ ಹೊಸ ವೇಷ! ‘ಆದಿಶೇಷ’

ಮಲ್ಲನ ಹೊಸ ವೇಷ! ‘ಆದಿಶೇಷ’

Posted By: Staff
Subscribe to Filmibeat Kannada
Ravichandran
'ಮಲ್ಲ" ಚಿತ್ರದ ಯಶಸ್ಸಿನಿಂದ ರವಿಚಂದ್ರನ್‌ ಮತ್ತೆ ಗರಿಕೆದರಿದ್ದಾರೆ. ಗಾಂಧಿನಗರ ತುಂಬ ಈ ಮಲ್ಲನ ಕುರಿತೇ ಮಾತು. ತೆರೆಮರೆಗೆ ಸರಿಯುತ್ತಿದ್ದ ರವಿಚಂದ್ರನ್‌ ಕಾಲ್‌ಶೀಟ್‌ ಮತ್ತೆ ಬೇಡಿಕೆಯಲ್ಲಿದೆ. ಈ ಬಾರಿ ಅವರ ಕಾಲ್‌ಶೀಟ್‌ ಪಡೆದವರು ಕನಕಪುರ ಶ್ರೀನಿವಾಸ. ರವಿ-ಕನಕಪುರ ಜೋಡಿ ಅಂದಮೇಲೆ ಅದು ಭರ್ಜರಿ ಚಿತ್ರವೇ ಸರಿ. ಚಿತ್ರದ ಹೆಸರು 'ಆದಿಶೇಷ".

ಆದಿಶೇಷ! ಹೆಸರು ಕೇಳಿದ ಕ್ಷಣ ನೆನಪಾಗುವುದು ಐದು ತಲೆ. ಸಿನಿಮಾದಲ್ಲಿ ರವಿಚಂದ್ರನ್‌ ಐದು ತಲೆ ಬಳಸಲಿದ್ದಾರಂತೆ. ನಿರ್ದೇಶನ, ಕಥೆ, ಸಂಗೀತ, ಸಾಹಿತ್ಯ,ನಟನೆ.... ಚಿತ್ರದಲ್ಲಿ ಅವರಿಗೆ ಐದು ನಾಯಕಿಯರು.ಆದರೆ ಈ ನಾಯಕಿಯರಿಗೆ ರವಿಚಂದ್ರನ್‌ ಇಬ್ಬರು. ದ್ವಿಪಾತ್ರ!

ರವಿಯದ್ದು ತಂದೆ-ಮಗನ ಪಾತ್ರ. ಮಗ ತಂದೆಗೆ ಆಸರೆ. ಹಾಗಾಗಿ ಮಗ ಆದಿಶೇಷ. ಮತ್ತೆಲ್ಲ ಅವಶೇಷ? ತಂದೆಗೆ ಇಬ್ಬರು ಹೆಂಡಿರಾದರೆ ಮಗನಿಗೆ ಮೂವರು ನಾಯಕಿಯರು. ಐದು ನಾಯಕಿಯರದೂ ತುಂಬಾ ವಿಭಿನ್ನ ಪಾತ್ರವಂತೆ. ಬಹುಶಃ ಐದು ತಾರೆಯರು ಆಮದು ಆಗಬಹುದು. ನಾಯಕಿಯರ ಆಯ್ಕೆ ಇನ್ನೂ ನಿರ್ಧರಿತವಾಗಿಲ್ಲ. ಇಷ್ಟೆಲ್ಲ ಆದ್ಮೇಲೆ ಈ ಚಿತ್ರ 'ಮಲ್ಲ" ಚಿತ್ರದಂತೆ ಸಂಪೂರ್ಣ ರವಿಮಯ ಎನ್ನಲು ಅಡ್ಡಿಯಿಲ್ಲ.

ರವಿಚಂದ್ರನ್‌ ಇತರ ನಾಯಕರಿಗಿಂತ ಸ್ವಲ್ಪ ಮುಂದುವರಿದಿದ್ದಾರೆ. ಅವರಿಗೆ 18 ಹರೆಯದ ಹುಡುಗಿಯರ ಜೊತೆ ಅಭಿನಯಿಸಲು ಅಷ್ಟಾಗಿ ಇಷ್ಟವಿಲ್ಲ. ಅದು 'ಪ್ರೇಮಲೋಕ"ದ ಕಾಲ. ಇದು 'ಮಲ್ಲ" ನ ಕಾಲ ಎಂಬುದು ಅವರ ನಿಲುವು. ಈ ಆಲೋಚನೆ ಕನ್ನಡದ ಇತರ ಹಿರಿಯ ನಾಯಕರ ತಲೆಗೂ ಹೋದರೆ ನಾವು ಕೆಲವು ಉತ್ತಮ ಚಿತ್ರ ನೋಡಬಹುದು ಎಂದು ಯಾರೋ ಅಂದ್ಹಾಗಿದೆ!

'ಆದಿಶೇಷ"ನನ್ನು 2005ರ ಆದಿಯಲ್ಲೇ ತರುವ ಬಯಕೆ ನಿರ್ಮಾಪಕ ಕನಕಪುರ ಶ್ರೀನಿವಾಸ ಅವರದು.

English summary
Kanakapura shrinivas is producing a film, Adishesha for Ravichandran
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada