»   » ನಿರ್ದೇಶಕ ಮಣಿರತ್ನಂಗೆ ಹೃದಯಾಘಾತ

ನಿರ್ದೇಶಕ ಮಣಿರತ್ನಂಗೆ ಹೃದಯಾಘಾತ

Subscribe to Filmibeat Kannada

ಒಂದೇ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದ ಇಬ್ಬರಿಗೆ ಆದ ಆಘಾತ ಪ್ರಕರಣವಿದು- ಬುಧವಾರ (ಜು.17) ಸಂಜೆ 5.20ರ ಸುಮಾರಿಗೆ ತಮ್ಮ ಲೇಟೆಸ್ಟ್‌ ಚಿತ್ರವೊಂದರ ಶೂಟಿಂಗ್‌ನಲ್ಲಿ ನಿರ್ದೇಶಕ ಮಣಿರತ್ನಂ ಬ್ಯುಸಿಯಾಗಿದ್ದರು. ಕೊಲ್ಕತ್ತದ ಹೂಗ್ಲಿ ಸೇತುವೆ ಮೇಲೆ ಸ್ಟಂಟ್‌ ದೃಶ್ಯವೊಂದರ ಚಿತ್ರೀಕರಣ. ಒಂದು ಕಡೆ ಡ್ಯೂಪು. ಇನ್ನೊಂದು ಕಡೆ ವಿವೇಕ್‌ ಓಬೆರಾಯ್‌. ಇಬ್ಬರೂ ಬೈಕ್‌ ಮೇಲೆ ಕೂತಿದ್ದರು. ವಿವೇಕ್‌ ಬೈಕ್‌ ಓಡಿಸಲು ಶುರುವಿಟ್ಟ ಕೆಲವೇ ನಿಮಿಷದಲ್ಲಿ ಕೆಳಕ್ಕೆ ಜಾರಿ ಬಿದ್ದರು. ಅದನ್ನು ಕಂಡು ಜೋರಾಗಿ ಚೀರಿದ ಮಣಿರತ್ನಂ ನಿಂತಲ್ಲೇ ಕುಸಿದರು.

ಮಣಿರತ್ನಂ ಅವರನ್ನು ಬಿ.ಎಂ.ಬಿರ್ಲಾ ಹಾರ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ಸೇರಿಸಲಾಯಿತು. ಅವರ ಹೃದಯಾಘಾತವಾಗಿರುವುದನ್ನು ಸ್ಪಷ್ಟಪಡಿಸಿದ ವೈದ್ಯರು, ಈಗ ಚಿಕಿತ್ಸೆ ಕೊಡುತ್ತಿದ್ದಾರೆ. ರತ್ನಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿವೇಕ್‌ ಓಬೆರಾಯ್‌ಗೆ ಸಾಕಷ್ಟು ಗಾಯವಾಗಿದ್ದು, ಕೋಲ್ಕತ್ತ ಮೆಡಿಕಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ಸೇರಿಸಲಾಗಿದೆ. ಗುರುವಾರ (ಜು.17) ಅವರಿಗೆ ಒಂದು ಸಣ್ಣ ಶಸ್ತ್ರಚಿಕಿತ್ಸೆ ನಡೆಯಲಿದೆ.

ಜಾತ್ಯತೀತ ಪ್ರೇಮಕಥೆಯುಳ್ಳ ಮಣಿರತ್ನಂರ ಈ ಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌, ಅಜಯ್‌ ದೇವಗನ್‌, ರಾಣಿ ಮುಖರ್ಜಿ ಮತ್ತು ಕರೀನ ಕಪೂರ್‌ ಕೂಡ ನಟಿಸುತ್ತಿದ್ದಾರೆ. ಮೂರನೇ ದಿನದ ಚಿತ್ರೀಕರಣದಲ್ಲಿ ಈ ಅವಘಡ ನಡೆದಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada