»   » ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ..

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ..

Subscribe to Filmibeat Kannada


ಗಣೇಶ್, ಅಮೂಲ್ಯ ಅಭಿನಯದ ಚೆಲುವಿನ ಚಿತ್ತಾರ ಚಿತ್ರದ ಹಾಡುಗಳು ಎಲ್ಲರ ಬಾಯಲ್ಲೂ ನಲಿದಾಡುತ್ತಿವೆ. ಎಸ್. ನಾರಾಯಣ್ ಬರೆದ ಹಾಡುಗಳಿಗೆ ಮಧುರ ಸಂಗೀತ ನೀಡಿದವರು; ಮನೋಮೂರ್ತಿ.ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನ್ ಹೊಳೆ
ಹರಿಯುತಿದೆ ಕಣ್ಣಲಿ
ಮುಂಜಾನೆಯು ನೀ
ಮುಸ್ಸಂಜೆಯು ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದ ಮೊದಲು ನನ್ನೊಳಗೆ
ಉದಯಿಸಿದಾ ಆಸೆಯು ನೀ
ನನ್ನವನೆ ಎಂದಿಗು ನೀ
ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ

ನಾನನಾನಾನಾ ನಾನನಾನಾನ

ಮಾತಿಲ್ಲದೆ ಕತೆಯಿಲ್ಲದೆ
ದಿನವೆಲ್ಲ ಮೌನವಾದೆ
ನಾ ಕಳೆದು ಹೋದೆನು
ಹುಡುಕಾಡಿ ಸೋತೆನು
ಹಸಿವಿಲ್ಲದೆ ನಿದಿರಿಲ್ಲದೆ
ದಣಿವಾಗಲು ಇಲ್ಲ
ನನ್ನೊಳಗೆ ನೀನಿರೆ
ನನಗೇನು ಬೇಡವೊ
ನನ್ನ್ ಪಾಠವು ನೀ
ನನ್ನೂಟವು ನೀ
ನಾ ಬರೆವ ಲೇಖನಿ ನೀ
ನಾ ಉಡುವ ಉಡುಗೆಯು ನೀ

ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ

ಸ ನಿ ಸ ನಿ ಸಾ
ಸ ನಿ ಸ ನಿ ಸಾ
....

ಇನ್ನಿತರ ಹಾಡುಗಳು ಸದ್ಯದಲ್ಲೇ ನಿರೀಕ್ಷಿಸಿ..

Please Wait while comments are loading...