ಜಯಪ್ರದಾ ಮೇಡಂ ಈಗ ಕಿತ್ತೂರು ರಾಣಿ ಚೆನ್ನಮ್ಮ!
ವಿಷ್ಣುವರ್ಧನ್ ಅಭಿನಯದ ಈ ಬಂಧನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದ ಜಯಪ್ರದಾ, ಇನ್ನೊಂದು ಕನ್ನಡ ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಚಿತ್ರದ ಹೆಸರು ಸಂಗೊಳ್ಳಿ ರಾಯಣ್ಣ.
ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸುತ್ತಿರುವ ಹೆಮ್ಮೆ ಜಯಪ್ರದಾ ಅವರಲ್ಲಿದೆ. ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರವನ್ನು ಜಯಪ್ರದಾ, ಸಂಗೊಳ್ಳಿ ರಾಯಣ್ಣನ ಪಾತ್ರವನ್ನು ಅರ್ಜುನ್ ಸರ್ಜಾ ನಿರ್ವಹಿಸುವರು. ನಾಗಣ್ಣ ಚಿತ್ರದ ನಿರ್ದೇಶಕರು.
ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಈ ಹಿಂದೆ ಬಿ.ಸರೋಜಾದೇವಿ ಅಭಿನಯಿಸಿ, ಪಾತ್ರಕ್ಕೆ ಜೀವತುಂಬಿದ್ದರು. ಆ ಮುಖಾಂತರ ಕನ್ನಡಿಗರ ಮನದಲ್ಲಿ ಚೆನ್ನಮ್ಮನ ನೆನಪನ್ನು ಅವರು ಹಸಿರಾಗಿಟ್ಟಿದ್ದಾರೆ. ನಂತರ ಚೆನ್ನಮ್ಮನ ಪಾತ್ರವನ್ನು(ಪುಟ್ಟ ತುಣುಕು )ಮಾಲಾಶ್ರೀ, ಕಿತ್ತೂರಿನ ಹುಲಿ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಜಯಪ್ರದಾ ಸರದಿ.
ಕವಿರತ್ನ ಕಾಳಿದಾಸ, ಸನಾದಿ ಅಪ್ಪಣ್ಣ, ರಾಜ್‌ಕುಮಾರ್ ಕಡೆಯ ಚಿತ್ರ ಶಬ್ದವೇಧಿ ಸೇರಿದಂತೆ ಬೇರೆಬೇರೆ ಚಿತ್ರಗಳ ಮೂಲಕ ಜಯಪ್ರದಾ, ಕನ್ನಡಿಗರಿಗೆ ಚಿರಪರಿಚಿತರು. ರಾಣಿ ಚೆನ್ನಮ್ಮನನ್ನು ಕಾಣಲು, ಕನ್ನಡಿಗರಿಗೆ ಈಗ ಕಾತುರ.
ಇನ್ನೊಂದು ಸುದ್ದಿ : ಸಂಗೊಳ್ಳಿ ರಾಯಣ್ಣ ಎಂಬ ದೈನಂದಿನ ಧಾರಾವಾಹಿ, ಸುವರ್ಣ ಚಾನೆಲ್‌ನಲ್ಲಿ ಮೂಡಿಬರುತ್ತಿದೆ.


Click it and Unblock the Notifications