»   » ಮೊನಿಷಾ ಕಿಡ್ನ್ಯಾಪ್‌ ಹಾದಿಯಲ್ಲಿ ಪಾತಕಿಗಳು ಪೊಲೀಸರ ಗುಂಡಿಗೆ ಬಲಿ

ಮೊನಿಷಾ ಕಿಡ್ನ್ಯಾಪ್‌ ಹಾದಿಯಲ್ಲಿ ಪಾತಕಿಗಳು ಪೊಲೀಸರ ಗುಂಡಿಗೆ ಬಲಿ

Posted By: Staff
Subscribe to Filmibeat Kannada

ಮುಂಬಯಿ : ಬಾಲಿವುಡ್‌ ತಾರೆ ಮೊನಿಷಾ ಕೊಯಿರಾಲ ಅವರನ್ನು ಅಪಹರಿಸಲು ಹೊರಟಿದ್ದ ನಾಲ್ವರು ಭೂಗತ ಲೋಕದ ಪಾತಕಿಗಳನ್ನು ಮುಂಬಯಿ ಪೊಲೀಸರು ಬುಧವಾರ ಗುಂಡಿಕ್ಕಿ ಕೊಂದಿದ್ದಾರೆ.

ಉತ್ತರ ಮುಂಬಯಿಯಲ್ಲಿರುವ ಮೊನಿಷಾ ಮನೆಯತ್ತ ನೀಲಿ ಮಾರುತಿ ಕಾರೊಂದರಲ್ಲಿ ಪಾತಕಿಗಳ ತಂಡ ಹೊರಟಿತ್ತು. ಸಿಕ್ಕ ಮಾಹಿತಿಯ ಬೆನ್ನತ್ತಿ ಹೊರಟಾಗ, ನೀಲಿ ಮಾರುತಿ ಕಾರಿನಲ್ಲಿ ಗ್ಯಾಂಗ್‌ಸ್ಟರ್‌ಗಳು ಹೋಗುತ್ತಿದ್ದುದು ಗೊತ್ತಾಯಿತು. ಕಾರನ್ನು ಪೊಲೀಸರು ಅಡ್ಡಗಟ್ಟಿದರು. ಕಾರಿನ ಬಾಗಿಲು ತೆರೆಯುತ್ತಿದ್ದಂತೆ, ನಾಲ್ವರು ಪಾತಕಿಗಳು ಗುಂಡಿನ ಮಳೆಗರೆದರು. ಪೊಲೀಸರೂ ಗುಂಡಿನ ಉತ್ತರವನ್ನೇ ಕೊಟ್ಟರು. ನಾಲ್ವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟು ಹೊತ್ತಿಗೆ ಅವರೆಲ್ಲರ ಉಸಿರು ನಿಂತಿತ್ತು. ಈ ಎಲ್ಲರೂ ಭೂಗತ ಲೋಕದ ದೊರೆಯೆಂದೇ ಕರೆಸಿಕೊಳ್ಳುತ್ತಿರುವ ಅಬು ಸಲೀಂ ಕಡೆಯವರು ಎಂದು ಪೊಲೀಸ್‌ ವಕ್ತಾರರೊಬ್ಬರು ಹೇಳಿದರು.

ಮೂವತ್ತೆರಡರ ಹರೆಯದ ನಟಿ ಮೊನಿಷಾ ನೇಪಾಳದ ಮಾಜಿ ಪ್ರಧಾನಿ ದಿವಂಗತ ಬಿ.ಪಿ.ಕೊಯಿರಾಲ ಪುತ್ರಿ. ಕೆಲವು ದಿನಗಳಿಂದ ಈಕೆಗೆ ಬೆದರಿಕೆ ಕರೆಗಳು ಬರುತ್ತಿದ್ದು, ಪೊಲೀಸರು ರಕ್ಷಣೆ ಕೊಟ್ಟಿದ್ದಾರೆ. ದೊಡ್ಡ ಮೊತ್ತವನ್ನು ಕೊಡದಿದ್ದರೆ ಕೊಲ್ಲುವುದಾಗಿ ಮುಂಬಯಿ ಮಾಫಿಯಾದಿಂದ ಬೆದರಿಕೆಯ ಆಮಂತ್ರಣ ಪಡೆದ ನಟರ ಪೈಕಿ ಅಮಿತಾಬ್‌, ಶಾರುಖ್‌ ಕಾನ್‌ ಮತ್ತು ಹೃತಿಕ್‌ ರೋಷನ್‌ ಕೂಡ ಇದ್ದಾರೆ.

(ಎಎಫ್‌ಪಿ)

English summary
Police kill 4 gangsters on a way to kidnap Manisha Koirala. Manisha Koirala survives. Bollywood is under troble!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada