»   » ಸೂರ್ಯ ಟೀವಿಯೇ ಈಗ ದೊಡ್ಡ ಮಾರುಕಟ್ಟೆ.

ಸೂರ್ಯ ಟೀವಿಯೇ ಈಗ ದೊಡ್ಡ ಮಾರುಕಟ್ಟೆ.

By: *ಕಾಮರಾಜ್‌, ತಿರುವನಂತಪುರ
Subscribe to Filmibeat Kannada

ಸೂರ್ಯ ಟೀವಿಯಲ್ಲೀಗ ಭಾನುವಾರ ಶುರುವಾಗುವುದೇ ಶಕೀಲಾ ಸುಪ್ರಭಾತದೊಂದಿಗೆ ; ಅದೂ ನಡುರಾತ್ರಿಯಲ್ಲೇ !
ಶಕೀಲಾಳ ಹಸಿ ಹಸಿ ತುಂಬು ದೇಹ ತುಂಬಿದ ಬರೋಬ್ಬರಿ 50 ಕೆಸೆಟ್ಟುಗಳ ಹಕ್ಕನ್ನು ಸೂರ್ಯ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದಕ್ಕೆ ಅದು ಕಕ್ಕಿರುವ ದುಡ್ಡು ಕೇವಲ 4 ಕೋಟಿ ರುಪಾಯಿ.

ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ರಾತ್ರಿ ಹನ್ನೊಂದೂವರೆ ಹನ್ನೆರಡು ಗಂಟೆಯಾದೊಡನೆ ಸ್ಪರ್ಧೆಗೆ ಬಿದ್ದವರಂತೆ ಎಟಿಎನ್‌, ಸನ್‌, ಉದಯ ಮೊದಲಾದ ಚಾನೆಲ್ಲುಗಳು ಮಿಡ್‌ನೈಟ್‌ ಮಸಾಲಾದಲ್ಲಿ ಹಸಿ ಬಿಸಿ ಹಾಡುಗಳ ತೋರುತ್ತಿದ್ದವು. ಅಷ್ಟು ಹೊತ್ತಿಗೆ ನಂದುತ್ತಿದ್ದ ಎಷ್ಟೋ ಮನೆಯ ಟೀವಿಗಳು ರಾತ್ರಿ ಹನ್ನೆರಡೂವರೆಯಾದರೂ ಹಾಡುವಂತೆ ಮಾಡಿದ ಅಗ್ಗಳಿಕೆ ಈ ಚಾನೆಲ್‌ಗಳದ್ದು. ಓದುವ ಮಕ್ಕಳು ರಾತ್ರಿ ಹೆಚ್ಚು ಹೊತ್ತು ಓದುತ್ತಾರೆ. ದೊಡ್ಡವರೆಲ್ಲಾ ಮಲಗಿರುತ್ತಾರೆ. ಇಂಥಾ ಹಾಡುಗಳನ್ನು ನೋಡೋದೇ ಮಕ್ಕಳ ಚಟವಾಗುತ್ತದೆ ಎಂಬ ಕಾರಣಕ್ಕೆ ಹಸಿ ಬಿಸಿ ಹಾಡುಗಳ ಪ್ರಸಾರವನ್ನು ಬ್ಯಾನ್‌ ಮಾಡಲಾಯಿತು.

ಕಳೆದ ಆರೇಳು ತಿಂಗಳವರೆಗೆ ನೋ ಸೆಕ್ಸೀ ಸಾಂಗ್ಸ್‌. ಆದರೆ, ಇದ್ದಕ್ಕಿದ್ದಂತೆ ಒಂದು ದಿನ ಏಷಿಯಾನೆಟ್‌ ಚಾನೆಲ್ಲು 'ಕಿನ್ನರ ತುಂಬಿಕಳ್‌" ಎಂಬ ಶಕೀಲಾ ಅಭಿನಯದ ಮಲೆಯಾಳಿ ಸಿನಿಮಾವನ್ನು ಪ್ರೆೃಮ್‌ ಟೈಮಿನಲ್ಲೇ ಪ್ರಸಾರ ಮಾಡಿತು. ಕೇರಳ ಮನೆ ಮನೆಗಳಲ್ಲಿ ಹೆಂಗಸರು ದಂಗುಬಡಿದುಹೋದರು. ಪಡ್ಡೆಗಳು ನಾಲಗೆ ಹೊರ ಬಿಟ್ಟರು. ಕೆಲವು ಮಕ್ಕಳು ನಾಚಿ ರೂಮಿಗೆ ಓಡಿಹೋದರೆ, ಇನ್ನು ಕೆಲವು ಮಕ್ಕಳು ಕದ್ದು ಮುಚ್ಚಿ ನೋಡಿಬಿಟ್ಟವು. ಈ ಸಿನಿಮಾ ತೋರಿದ್ದೇ ತೋರಿದ್ದು, ಏಷಿಯಾನೆಟ್ಟಿನ ಟಿಆರ್‌ಪಿ ಗ್ರಾಫು ಆಕಾಶಕ್ಕೇರಿತು. ಶಕೀಲಾಳ ಈ ಒಂದೇ ಸಿನಿಮಾ ಪ್ರಸಾರ ಅನಾಮತ್ತು 50 ಲಕ್ಷ ರುಪಾಯಿ ತಂದು ಏಷಿಯಾನೆಟ್ಟಿನ ಬೊಕ್ಕಸಕ್ಕೆ ಹಾಕಿತು. ಪ್ರಾಯಶಃ ಶಕೀಲಾಳ ಆ ಚಿತ್ರ ನಿರ್ಮಾಣಕ್ಕೇ ಇಷ್ಟೊಂದು ಹಣ ಖರ್ಚಾಗಿಲ್ಲ !

ನೇಮ ಮುರಿದು, ಕಾಮ ತೋರಿ ದುಡ್ಡು ಕೊಳ್ಳೇ ಹೊಡೆದ ಏಷಿಯಾನೆಟ್ಟು ಮಾದರಿಯಾದದ್ದು ಸನ್‌ ನೆಟ್‌ವರ್ಕ್ಸ್‌ನ ಸೂರ್ಯ ಚಾನೆಲ್‌ಗೆ. ಸೂರ್ಯ ಚಾನೆಲ್ಲಿನ ಯಜಮಾನ ನೇರ ಶಕೀಲಾ ಸೆಕ್ಸ್‌ ಸಿನಿಮಾ ದಲ್ಲಾಳಿಗಳ ಬೆನ್ನು ಹತ್ತಿದರು. ಒಂದು ಸಲ ಡಬ್ಬದಿಂದ ಹೊರಬಂದು, ಮತ್ತೆ ಡಬ್ಬದೊಳಕ್ಕೆ ಸೇರಿದ ಶಕೀಲಾ ಚಿತ್ರಗಳ ಹಕ್ಕು ಈ ದಲ್ಲಾಳಿಗಳಿಗೆ 20 ಸಾವಿರ ರುಪಾಯಿಗೆ ಒಂದರಂತೆ ಸಿಕ್ಕಿರುತ್ತದೆ. ಚೌಕಾಶಿಯ ನಂತರವೂ ಸೂರ್ಯ ಟೀವಿಯವರು ಒಂದು ಕೆಸೆಟ್ಟಿಗೆ 5 ರಿಂದ 10 ಲಕ್ಷ ರುಪಾಯಿ ಕೊಟ್ಟು ಖರೀದಿಸಿದ್ದಾರೆ. ದಲ್ಲಾಳಿಗಳ ಗಲ್ಲಾ ಈಗ ಝಣಝಣ.

ಸೂರ್ಯ ಟೀವಿಯೇ ಈಗ ಶಕೀಲಾ ಥರದ ನಟೀಮಣಿಯರಿಗೆ ದೊಡ್ಡ ಮಾರುಕಟ್ಟೆ. ಹತ್ತೋ ಹದಿನೈದೋ ಲಕ್ಷ ರುಪಾಯಿ ಖರ್ಚು ಮಾಡಿ ಒಂದು ಸಿನಿಮಾ ತೆಗೆದರೆ ಮುಗೀತು. ಕಡಿಮೆ ಅಂದರೂ ಅದರ ಮೂರರಷ್ಟು ಹಣ ಗಿಟ್ಟೋದು ಗ್ಯಾರಂಟಿ. ಅದಕ್ಕೇ ಈಗ ಲಕ್ಷಾಧೀಶ್ವರರಾಗಿರುವ ದಲ್ಲಾಳಿಗಳೇ ಕಾಮ ಕೇಳಿ ಸಿನಿಮಾ ನಿರ್ಮಾಪಕರಾಗಿದ್ದಾರೆ. ಸುಮಾರು 25 ಸೆಕ್ಸಿ ಸೆಕ್ಸಿ ಮಲೆಯಾಳಿ ಸಿನಿಮಾಗಳು ಈಗಾಗಲೇ ಸೆಟ್ಟು, ಅಲ್ಲಲ್ಲ, ಮಂಚ ಏರಿವೆ !
ಸೆಕ್ಸಿ ಸಂಚಯ

English summary
Shakeela Suprabhata in Surya TV. Now TV chaneels are the big market for soft porn movies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada