»   » ಐಟಂ ಸಾಂಗ್ ನಲ್ಲಿ ವಯಸ್ಸಾದ ಹುಡುಗಿ ಸುಮನ್ ರಂಗನಾಥ್!

ಐಟಂ ಸಾಂಗ್ ನಲ್ಲಿ ವಯಸ್ಸಾದ ಹುಡುಗಿ ಸುಮನ್ ರಂಗನಾಥ್!

Posted By:
Subscribe to Filmibeat Kannada


ಆಂಟಿಯರಾದ ಮೇಲೆ ಮನೆಯಲ್ಲಿ ಕೂರದೇ,ನಮ್ಮ ಅನ್ನ ಕಸಿಯುವ ಮಾಜಿ ನಟಿಯರಿಗೆ ಧಿಕ್ಕಾರ.. ಐಟಂ ಸಾಂಗ್ ನಮ್ಮ ಆಸ್ತಿ, ನಮ್ಮ ಹಕ್ಕು,ನಮ್ಮ ಸ್ವಾತಂತ್ರ್ಯ, ನಮ್ಮ ಬದುಕು, ನಮ್ಮಿಷ್ಟ.. ಎಂದು ಐಟಂ ಸಾಂಗ್ ಹುಡುಗಿಯರಾದ ಮುಮೈತ್ ಖಾನ್, ರಾಖಿ ಸಾವಂತ್, ಜೂನಿಯರ್ ಸಿಲ್ಕ್ ಮತ್ತಿತರರು ಪ್ರತಿಭಟಿಸಿದರೆ ಅಚ್ಚರಿಯೇನಿಲ್ಲ. ಕಾರಣ ಇಷ್ಟೆ: ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲು ಮಾಜಿ ನಟಿಯರು, ಒಬ್ಬರಾದ ಮೇಲೆ ಒಬ್ಬರು ಕ್ಯೂ ನಿಂತಿದ್ದಾರೆ!

ಮೊನ್ನೆಯಷ್ಟೇ ರಂಭಾ, ಉಪೇಂದ್ರ ಮತ್ತು ದರ್ಶನ್ ಅಭಿನಯದಅನಾಥರು ಚಿತ್ರದ ಐಟಂ ಸಾಂಗ್ ನಲ್ಲಿ ಕುಣಿದಿದ್ದರು. ಈಗ ಸುಮನ್ ರಂಗನಾಥ್, ಐಟಂ ಸಾಂಗ್ ನಲ್ಲಿ ಕುಣಿಯಲು ಸಜ್ಜಾಗುತ್ತಿದ್ದಾರೆ. ದರ್ಶನ್ ಅಭಿನಯದ ಗಜಚಿತ್ರದ ಐಟಂ ಸಾಂಗ್ ನಲ್ಲಿ ಕುಣಿಯಲು, ವಯಸ್ಸಾದ ಹುಡುಗಿ ಸುಮನ್ ಸದ್ಯದಲ್ಲಿಯೇ ಬೆಂಗಳೂರಿಗೆ ಬರಲಿದ್ದಾರೆ.

ಕನ್ನಡ ಹುಡುಗಿ ಸುಮನ್ ರಂಗನಾಥ್, ಅವಕಾಶ ಅರಸಿ ಎಲ್ಲೆಲ್ಲೋ ಸುತ್ತಿ ಕೊನೆಗೆ ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಸಿಬಿಐ ಶಂಕರ್, ಸಂತ ಶಿಶುನಾಳ ಶರೀಫ, ನಮ್ಮೂರ ಹಮ್ಮೀರ, ಚಿಕ್ಕೆಜಮಾನ್ರು ಮತ್ತಿತರ ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದ ಸುಮನ್ ಮುಂಬೈಗೆ ಹಾರಿ, ಐಟಂ ಡ್ಯಾನ್ಸರ್ ಆಗಿದ್ದಾರಂತೆ!

ಇನ್ನು ಯಾರ್ಯಾರು ಕುಣಿಯಲು ಬರ್ತಾರೋ ಬರಲಿ, ಮೆಚ್ಚೋರು ಮೆಚ್ಚಲಿ, ತೆಗಳೋರು ಐಟಂ ಹುಡುಗಿಯರ ಎಮ್ಮೆಗೆ ಸಾಟಿತೆಗಳಲಿ..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada