»   » ಬೆಂಗಳೂರಲ್ಲಿ ‘ಬಾಬಾ’ ದರ್ಶನಕ್ಕೆನೂಕುನುಗ್ಗಲು, ಅಭಿಮಾನಿ ಸಾವು

ಬೆಂಗಳೂರಲ್ಲಿ ‘ಬಾಬಾ’ ದರ್ಶನಕ್ಕೆನೂಕುನುಗ್ಗಲು, ಅಭಿಮಾನಿ ಸಾವು

Posted By: Staff
Subscribe to Filmibeat Kannada

ಬೆಂಗಳೂರು : ಸ್ಟೈಲ್‌ಕಿಂಗ್‌ ರಜನೀಕಾಂತ್‌ರ ಲೇಟೆಸ್ಟ್‌ ಚಿತ್ರ ಬಾಬಾಗೆ ಟಿಕೆಟ್‌ ಖರೀದಿಸುವ ಭರದಲ್ಲಿ ಉಸಿರುಕಟ್ಟಿ, ಹೃದಯಾಘಾತಕ್ಕೆ ತುತ್ತಾದ ನಗರದ ನಿವಾಸಿ ಮೃತಪಟ್ಟಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ರಜಾ ದಿನ ಬಿಡುಗಡೆಯಾದ ಈ ಚಿತ್ರವನ್ನು ನೋಡಲು ಲಾಲ್‌ಬಾಗ್‌ ಬಳಿಯಿರುವ ಊರ್ವಶಿ ಚಿತ್ರಮಂದಿರದಲ್ಲಿ ಜನವೋ ಜನ. ಈ ಸಾಲಿನಲ್ಲಿ ನಿಂತಿದ್ದ ವೇಣುಗೋಪಾಲ್‌ ಎಂಬ ಮಧ್ಯಮ ವಯಸ್ಕರೊಬ್ಬರು ನೂಕುನುಗ್ಗಲಲ್ಲಿ ಉಸಿರು ಕಟ್ಟಿ ಮೂರ್ಛೆ ಹೋದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟು ಹೊತ್ತಿಗೆ ಹೃದಯಾಘಾತದಿಂದ ವೇಣು ಗೋಪಾಲ್‌ ಮೃತಪಟ್ಟಿರುವುದಾಗಿ ವೈದ್ಯರು ಖಾತ್ರಿ ಪಡಿಸಿದರು.

ಅಭಿಮಾನಿ ವೃಂದ ನೆಚ್ಚಿನ ನಾಯಕನ ಚಿತ್ರವನ್ನು ಮೊದಲ ದಿನ ಮೊದಲ ಪ್ರದರ್ಶನದಲ್ಲೇ ನೋಡುವ ಭರಾಟೆಯಲ್ಲಿ ಈ ರೀತಿ ಪ್ರಾಣ ಕಳಕೊಳ್ಳುವ ಘಟನೆಗಳು ಹೊಸದೇನಲ್ಲ. ಅಣ್ಣಾವ್ರ ಅಭಿನಯದ ಎಷ್ಟೋ ಚಿತ್ರಗಳಲ್ಲಿ ಇಂಥಾ ಘಟನೆಗಳು ನಡೆದಿವೆ. ರಜನೀಕಾಂತ್‌ ಮಹತ್ವಾಕಾಂಕ್ಷೆಯ 'ಬಾಬಾ" ಚಿತ್ರಕ್ಕೆ ಸಿಕ್ಕಿರುವ ದೊಡ್ಡ ಓಪನಿಂಗ್‌ ಇದಾದರೆ, ಮೃತ ವೇಣು ಗೋಪಾಲ್‌ ಕುಟುಂಬಕ್ಕೆ ದುಃಖದ ಪರಮಾವಧಿ !ವಾರ್ತಾ ಸಂಚಯ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada