»   » ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಗರ ಹಾವು ಕ್ರಿಕೆಟ್‌ ಪಂದ್ಯದ ರಂಗು

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಗರ ಹಾವು ಕ್ರಿಕೆಟ್‌ ಪಂದ್ಯದ ರಂಗು

Posted By: Staff
Subscribe to Filmibeat Kannada

ಒಂದೂವರೆ ತಾಸು ಕಾದ ನಂತರ ಕೊನೆಗೂ ನಾಗರ ಹಾವು ಕಪ್‌ ಕ್ರಿಕೆಟ್‌ ಶುರುವಾಗಿದೆ.
ಆಟದ ಮಧ್ಯೆ ತಣ್ಣೀರೆರಚಿದ ಮಳೆರಾಯನಿಗೆ ಬರೋಬ್ಬರಿ ನಲವತ್ತು ಸಾವಿರ ಹಿಡಿಶಾಪ. ಕ್ರಿಕೆಟ್ಟಿನ ಗೆಟಪ್ಪಲ್ಲಿದ್ದ ತಾರಾ ಸಮೂಹದ ಬಣ್ಣ ಕರಗಿದರೂ ಕ್ರಿಕೆಟ್ಟು ಕಳೆಗಟ್ಟಿತ್ತು.

ಶನಿವಾರ (ಆಗಸ್ಟ್‌ 17) ಮಧ್ಯಾಹ್ನ 12 ಗಂಟೆಗೇ ನಿಗದಿಯಾಗಿದ್ದ ಕ್ರಿಕೆಟ್ಟನ್ನು ನೋಡಲು ದೂರದೂರುಗಳಿಂದ ಆಸೆ ಕಂಗಳ ಅಭಿಮಾನಿಗಳು ಬಂದಿದ್ದರು. ಆದರೆ ಕಪಿಲ್‌ ದೇವ್‌ ನೆಚ್ಚಿಕೊಂಡ ರಾಕ್‌ಲೈನ್‌ ಸೇರಿದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಒಂದೂವರೆ ಗಂಟೆ ಚಾತಕ ಪಕ್ಷಿಗಳಂತೆ ಕಾಯಬೇಕಾಯಿತು. ಒಂದು ಅಂತರರಾಷ್ಟ್ರೀಯ ಒಂಡೇ ಪಂದ್ಯಕ್ಕಿರುವ ನೂಕುನುಗ್ಗಲು, ಖದರು, ಹರ್ಷೋದ್ಗಾರ ಈ ಪಂದ್ಯಕ್ಕೂ ಇದ್ದದ್ದು ರಾಕ್‌ಲೈನ್‌ಗೂ ಅಚ್ಚರಿ ಹುಟ್ಟಿಸಿತು. ನಾಗರಹಾವು ಕೆಸೆಟ್‌ ಬಿಡುಗಡೆ ಸಮಾರಂಭ ಕ್ರಿಕೆಟ್‌ ಪಂದ್ಯದೊಟ್ಟಿಗೆ ಕಳೆಗಟ್ಟಿರುವುದಂತೂ ದಿಟ.

ವಿಷ್ಣುವರ್ಧನ್‌, ಅಂಬರೀಶ್‌, ಉಪೇಂದ್ರ, ರವಿಚಂದ್ರನ್‌, ದೇವರಾಜ್‌, ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ರಾಂಕುಮಾರ್‌, ಪ್ರೇಮಾ, ದರ್ಶನ್‌, ಅನು ಪ್ರಭಾಕರ್‌.
ವರ್ಸಸ್‌
ಕಪಿಲ್‌ ದೇವ್‌, ಜಿ.ಆರ್‌.ವಿಶ್ವನಾಥ್‌, ಜಾವಗಲ್‌ ಶ್ರೀನಾಥ್‌, ಸೈಯದ್‌ ಕಿರ್ಮಾನಿ, ರಘುರಾಂ ಭಟ್‌, ಶ್ರೀಲಂಕಾದ ಅರ್ಜುನ ರಣತುಂಗ, ಸಿದ್ಧಾರ್ಥ ವೆಟ್ಟಮುನಿ, ರೋಷನ್‌ ಮಹಾನಾಮ, ಹಸನ್‌ ತಿಲಕರತ್ನೆ, ಅಮಲ್‌ ಸಿಲ್ಯ.

ಅಂದಹಾಗೆ, ಸುಮಲತಾ ಮತ್ತು ಭಾರತಿ ಅಂಪೈರ್‌ಗಳು. ಅನಂತನಾಗ್‌, ಕೆಎಸ್ಸೆಲ್‌ ಸ್ವಾಮಿ ವೀಕ್ಷಕ ವಿವರಣೆಕಾರರು. ಪಂದ್ಯದ ನಂತರ ಕಪಿಲ್‌ ದೇವ್‌, ಜಿ.ಆರ್‌.ವಿಶ್ವನಾಥ್‌ ಮತ್ತು ಬಿ.ಎಸ್‌.ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾಗುವುದು.

ನಲವತ್ತು ಸಾವಿರ ಅಭಿಮಾನಿಗಳು ಬಂದಿದ್ದಾರೆ ಅಂದರೆ, ನಾಗರಹಾವು ಆಡಿಯೋ ಕೆಸೆಟ್‌ಗಳು ೕಗಾಗಲೇ ಎಷ್ಟು ಬಿಕರಿಯಾಗಿರಬಹುದು, ಎಷ್ಟು ಬಿಕರಿಯಾದೀತು ಎನ್ನುವ ಲೆಕ್ಕ ರಾಕ್‌ಲೈನ್‌ ತಲೆಯಲ್ಲಿ ಈಗಾಗಲೇ ತಂಡದ ರನ ಸರಾಸರಿಗಿಂತ ಜೋರಾಗಿ ಓಡುತ್ತಿರಬಹುದು. ಅಲ್ಲಿಗೆ ಕೆಸೆಟ್‌ ಮಾರುವ ರಾಕ್‌ಲೈನ್‌ ಕ್ರಿಕೆಟ್‌ ತಂತ್ರ ಕ್ಲಿಕ್‌ ಅಂದ ಹಾಗಾಯಿತು. ನೀವೇನಂತೀರಿ?
ವಾರ್ತಾ ಸಂಚಯ

English summary
Stars Vs Veteran Cricketers Cricket Match begins in Chinnaswamy stadium, bangalore
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada