»   » ಟ್ವಿಂಕಲ್‌ಗೆ ಹುಟ್ಟಿದ ಗಂಡು ಮಗು ಹೆಸರು ಅರಾವ್‌

ಟ್ವಿಂಕಲ್‌ಗೆ ಹುಟ್ಟಿದ ಗಂಡು ಮಗು ಹೆಸರು ಅರಾವ್‌

Posted By: Staff
Subscribe to Filmibeat Kannada

ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡ ಸುದ್ದಿ ಮುಟ್ಟಿದ್ದೇ ತಡ, ಅಕ್ಷಯ್‌ ಕುಮಾರ್‌ ಕೇಪ್‌ಟೌನಿನಿಂದ ಮುಂಬಯಿಗೆ ಒಂದೇ ಉಸಿರಲ್ಲಿ ಹಾರಿ ಬಂದರು!

ಅಕ್ಷಯ್‌ ಕುಮಾರ್‌ ಮತ್ತು ಟ್ವಿಂಕಲ್‌ ಕುಮಾರ್‌ ಈಗ ಅಪ್ಪ- ಅಮ್ಮ ಆಗಿದ್ದಾರೆ. ಸೆಪ್ಟೆಂಬರ್‌ 15ನೇ ತಾರೀಖು ಟ್ವಿಂಕಲ್‌ ಗಂಡು ಮಗುವಿಗೆ ಜನ್ಮ ಕೊಟ್ಟರು. ಮಗುವಿನ ಹೆಸರು ಅರಾವ್‌.

ಮಗು ಪಡೆದ ಸಂತೋಷವನ್ನು ಅಕ್ಷಯ್‌ ಹಂಚಿಕೊಂಡಿದ್ದು ಹೀಗೆ-
ನಾನು- ಟ್ವಿಂಕಲ್‌ ಮೋಡಗಳ ಮೇಲೆ ಓಡಾಡುತ್ತಿದ್ದೇವೆ. ಭಾನುವಾರ ಬೆಳಗ್ಗೆ ನಾನು ಕೇಪ್‌ಟೌನಿನಲ್ಲಿದ್ದೆ. ಸಂಜೆ ನನ್ನ ಮಗು ಜೊತೆ ಮುಂಬಯಿಯಲ್ಲಿದ್ದೆ. ಮಗುವನ್ನು ಕೈಯಲ್ಲಿ ಎತ್ತಿಕೊಂಡ ಗಳಿಗೆಯಲ್ಲಿ ನಾನು ಸ್ವರ್ಗದಲ್ಲಿದ್ದೆ. ಟ್ವಿಂಕಲ್‌ಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಡಾಕ್ಟರ್‌ ನನಗೆ ಫೋನ್‌ ಮಾಡಿದರು. ನಾನು 'ಅಂದಾಜ್‌" ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೆ. ಫೋನ್‌ ಬಂದಾಕ್ಷಣವೇ ಎಲ್ಲಾ ಕೆಲಸವನ್ನೂ ಬದಿಗೊತ್ತಿ ಹೊರಟು ನಿಂತೆ. ಇಡೀ ಚಿತ್ರ ತಂಡ ನನ್ನ ಸಂತೋಷದಲ್ಲಿ ಭಾಗಿಯಾಗಲು ನನ್ನೊಡನೆ ಹೊರಟಿತು!

ಅಂದಹಾಗೆ, ಅಕ್ಷಯ್‌ ಕುಮಾರ್‌ ಇನ್ನೂ ಹೆಂಡತಿ ಹಾಗೂ ಮಗು ಪಕ್ಕದಲ್ಲೇ ಇದ್ದಾರೆ. ಅಪ್ಪ ಅಂದರೆ ಹೀಗಿರಬೇಕು !

English summary
Akshay Kumar, Twinkle have a baby boy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada