ಫಿಲಂ ಹಿಟ್‌ ಆದ್ರೆ ಮ್ಯೂಸಿಕ್ಕು ಜನರಿಗೆ ತಲುಪುತ್ತೆ.

By *ಸುಧೀಂದ್ರ ಕಂಚಿತೋಟ

ವಿ.ಮನೋಹರ್‌ ಪತ್ರಕರ್ತ, ವ್ಯಂಗ್ಯ ಚಿತ್ರಕಾರ, ಕತೆ-ಚಿತ್ರಕತೆಗಾರ, ಗೀತ ರಚನೆಗಾರ, ಸಂಗೀತ ನಿರ್ದೇಶಕ, ನಿರ್ದೇಶಕ, ನಟ ಎಲ್ಲವೂ ಹೌದು. ಆದರೆ ಎಲ್ಲಿಯೇ ಎದುರು ಸಿಕ್ಕಿದರೂ ತಾನು ಏನೂ ಅಲ್ಲವೆನ್ನುವಂತೆ ಒಂದು ಮುಗ್ಧ ನಗೆ ತೇಲಿಸಿಬಿಡುವ ಆಸಾಮಿ. 'ಮಾಯ ಮಂತ್ರ ಬ್ರಹ್ಮನ್‌ ಜಾದೂ ತಿಳಿದರೆ ನಾ ಜೀರುಂಡೆ, ಮಿಂಚುಹುಳು ಆಗುತ್ತಿದ್ದೆನೊ... ಇರುಳೆಲ್ಲಾ ನಿನ್ನ ಜೊತೆ ಆಡುತ್ತಿದ್ದೆನೊ..'- 'ಪ್ರೇಮದ ಸುಳ್ಳಲ್ಲೂ ಎಂಥ ಸುಖ.. ಆ ಸುಖ ಬಲ್ಲವನೇ ರಸಿಕ...' ಎಂದೆಲ್ಲಾ ಪ್ರೇಮಿಗಳಿಗೆ ಕಚಗುಳಿ ಇಟ್ಟಿರುವ ಅವರು ಕನ್ನಡ ಚಿತ್ರರಂಗದ ಮೋಸ್ಟ್‌ ಎಲಿಜೆಬಲ್‌ ಬ್ಯಾಚಲರ್‌ಗಳಲ್ಲಿ ಒಬ್ಬರು! ಮೊನ್ನೆ 'ಪಾಪ ಪಾಂಡು' ಧಾರಾವಾಹಿಯ 200 ನೇ ಕಂತಿನ ಸಂಭ್ರಮಾಚರಣೆಯಂದು ಇವರ ಜತೆ ಹರಟುವ ಅವಕಾಶ ಸಿಕ್ಕಿತ್ತು ...

ಇಷ್ಟೆಲ್ಲಾ ವಿಭಾಗಗಳಲ್ಲಿ ಕೈಯಾಡಿಸ್ತೀರಲ್ಲಾ. ಹೇಗೆ ಮೇನೇಜ್‌ ಮಾಡ್ತೀರಿ. ಒಂದೇ ಸಲಕ್ಕೆ ಅಷ್ಟೊಂದು ದೋಣಿಗಳ ಪಯಣ ಕಷ್ಟ ಅನ್ಸೊಲ್ವಾ?

ಕಷ್ಟಗಿಷ್ಟ ಏನೂ ಇಲ್ಲ. ಎಲ್ಲಾ ಕೆಲ್ಸಾನೂ ಗೊತ್ತಿದ್ರೆ ಬೋರ್‌ ಆಗೊಲ್ಲ. ನಿರುದ್ಯೋಗ ಸಮಸ್ಯೇನೂ ಇರೊಲ್ಲ !

ಅದು ಸರಿ. ಟೈಮ್‌ ಹೇಗೆ ಹೊಂದಿಸಿಕೊಳ್ತೀರಿ? ಟೈಮ್‌ ಟೇಬಲ್‌ ಪ್ರಕಾರ ಕೆಲಸ ಮಾಡ್ತೀರಾ?

ಒಂಥರಾ ಹಂಗೇ. ಬೇರೆ ಬೇರೆ ಕೆಲಸಗಳಿಗೆ ನನ್ನದೇ ಆದ ಷೆಡ್ಯೂಲ್‌ ಹಾಕ್ಕೊಂಡಿದೀನಿ. ಆದ್ರೂ ನೋಡಿ, ಈ ಪ್ರೊಫೆಷನ್‌ ಇದ್ಯಲ್ಲಾ. ಇಲ್ಲಿ ಒಂದು ಚೌಕಟ್ಟಿನೊಳಗೆ ಕುಳಿತು ಕೆಲಸ ಮಾಡೋದು ಕಷ್ಟ. ಇಲ್ಲಿ ಮೂಡ್‌ ಬಹಳ ಮುಖ್ಯ. ಆಯಾ ಸಮಯಕ್ಕೆ ಯಾವ ಕೆಲಸ ಖುಷಿ ಕೊಡುತ್ತೋ ಅದನ್ನು ಮಾಡೋದು. ಆದ್ರೂ ಕೆಲವೊಮ್ಮೆ ಆ ಟೈಮ್‌ಗೆ ಅನಿವಾರ್ಯವಾಗಿ ಮಾಡಲೇಬೇಕಾಗಿರೋ ಕೆಲಸಕ್ಕೆ ನಮ್ಮ ಮನಸ್ಸು ಒಗ್ಗಿಕೊಳ್ಳೋ ಹಾಗೆ ನೋಡ್ಕೋಬೇಕಾಗುತ್ತೆ.

ಈಗ ಹಲವಾರು ಪ್ರತಿಭಾವಂತರು ಕಿರುತೆರೆಯಲ್ಲಿ ತುಂಬಾ ಹಿಟ್‌ ಎನ್ನಿಸಿಕೊಳ್ತಿದಾರೆ. ನಿಮಗೂ ಅಂಥಾ ಆಸೆ ಇಲ್ವಾ?

ಯಾಕಿಲ್ಲ ? ಕಿರುತೆರೆಯಲ್ಲಿ ನಟನೆ, ಸಂಗೀತ ನಿರ್ದೇಶನವಂತೂ ಇದ್ದೇ ಇದೆ. ಇನ್ನೂ ಒಂದು ಧಾರಾವಾಹಿಗಾಗಿ ಸ್ಕಿೃಪ್ಟ್‌ ರೆಡಿ ಮಾಡಿದ್ದೀನಿ. ಯಾವಾಗ ಪ್ರಸಾರವಾಗುತ್ತೇಂತ ನಿಖರವಾಗಿ ಗೊತ್ತಿಲ್ಲ.

ಇತ್ತೀಚೆಗೆ ನಿಮ್ಮೊಳಗಿರುವ ಸಂಗೀತ ನಿರ್ದೇಶಕ ಯಾಕೋ ವೀಕ್‌ ಆಗಿಬಿಟ್ಟಿದ್ದಾನೆ...

ಹಾಗೇನೂ ಇಲ್ಲ. ಮೂರು ವರ್ಷಗಳಿಂದ ನಾನು ಮ್ಯೂಸಿಕ್‌ ಮಾಡೋದನ್ನೇ ನಿಲ್ಸಿಬಿಟ್ಟಿದ್ದೆನಲ್ಲ. ಈಗ ಮತ್ತೆ ಎರಡು ಮೂರು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದೆ. ಯಾವುದೂ ಹಿಟ್‌ ಆಗ್ಲಿಲ್ಲ. ನಾನು ಸಂಗೀತ ನೀಡಿದ 'ಮನಸೇ ಓ ಮನಸೇ ಹಾಗೂ ಡ್ಯಾಡಿ ನಂ.1' ಫ್ಲಾಪ್‌ ಆಯ್ತು. ಈಗ ಸೀತಾರಾಮ ಕಾರಂತರ 'ಸ್ಮೈಲ್‌'ಗೆ ನನ್ನದೇ ಸಂಗೀತ. ಅದರ ಮೇಲೆ ತುಂಬಾ ಹೋಪ್ಸ್‌ ಇದೆ. ನೋಡಿ ಫಿಲಂ ಹಿಟ್‌ ಆದರೆ ಮ್ಯೂಸಿಕ್ಕೂ ಜನರಿಗೆ ತಲುಪುತ್ತೆ. ಇಲ್ಲಾಂದ್ರೆ ಹಾಡು ಎಷ್ಟು ಚೆನ್ನಾಗಿದ್ರೂ ವೇಸ್ಟು.

ಇರಬಹುದು. ನಿಮ್ಮದೇ ನಿರ್ದೇಶನದ 'ಇಂದ್ರಧನುಷ್‌' ಹಾಡುಗಳೂ ಅಷ್ಟೇನೂ ಇಂಪಾಗಿರಲಿಲ್ಲ ಅಲ್ವಾ. ಗೆಜ್ಜೆನಾದ, ಅನುರಾಗ ಸಂಗಮ, ಜನುಮದ ಜೋಡಿ, ಜೋಡಿ ಹಕ್ಕಿ, ಮುಂಗಾರಿನ ಮಿಂಚು ಚಿತ್ರಗಳ ಮನೋಹರ್‌ ಎಲ್ಲಿ ಹೋದರು?

ಇಲ್ಲ . ನನಗೂ ಜನರ ಬಾಯಲ್ಲಿ ನಲಿದಾಡೋ ಹಾಡುಗಳನ್ನು ನೀಡಬೇಕು ಅನ್ನೋ ಆಸೆಯಿದೆ. ಮುಂದೆ ಖಂಡಿತ ಅದು ಸಾಧ್ಯವಾಗುತ್ತೆ.

ಎರಡೇ ಚಿತ್ರ ನಿರ್ದೇಶಿಸುವಷ್ಟರಲ್ಲಿ ಸುಸ್ತಾಗಿಬಿಟ್ರಾ?

ಖಂಡಿತಾ ಇಲ್ಲ . ಮತ್ತೊಂದು ಸ್ಕಿೃಪ್ಟ್‌ ರೆಡಿಯಾಗ್ತಾ ಇದೆ. ಈಗ ಆ ಕೆಲಸದಲ್ಲೇ ಬಿಜಿಯಾಗಿದ್ದೀನಿ. ಒಂದೊಳ್ಳೆಯ ಚಿತ್ರ ಮಾಡಬೇಕು ಅನ್ನೋದು ನನ್ನಾಸೆ. ಎಷ್ಟಾದರೂ ನಿರ್ದೇಶನ ನನ್ನ ಮೊದಲ ಆದ್ಯತೆ ಅಲ್ವಾ...

(ವಿಜಯ ಕರ್ನಾಟಕ)

English summary
A small interview with sandalwood director and music director V.Manohar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X