»   » ಅಣ್ಣಾವ್ರೇ ಗಾಜನೂರಿಗೆ ಹೋಗಿ, ಕಾಯಲು ನಾವಿದ್ದೇವೆ-ಖರ್ಗೆ

ಅಣ್ಣಾವ್ರೇ ಗಾಜನೂರಿಗೆ ಹೋಗಿ, ಕಾಯಲು ನಾವಿದ್ದೇವೆ-ಖರ್ಗೆ

Posted By:
Subscribe to Filmibeat Kannada

ಬೆಂಗಳೂರು : ವೀರಪ್ಪನ್‌ಗೆ ಡಾ.ರಾಜ್‌ಕುಮಾರ್‌ ಹೆದರಬೇಕಿಲ್ಲ. ಅವರು ಗಾಜನೂರಿಗೆ ಹೋಗಬಯಸಿದರೆ ಹೋಗಲಿ. ಅವರಿಗೆ ಬೇಕಾದ ಸಕಲ ಭದ್ರತೆಯನ್ನೂ ನಾವು ಕೊಡುತ್ತೇವೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳದ್ದಾರೆ.

ರಾಜ್‌ಕುಮಾರ್‌ ಮೇಲೆ ನಾವು ಯಾವುದೇ ನಿಯಂತ್ರಣ ಹೇರಿಲ್ಲ. ಅವರು ಎಲ್ಲಿಗೆ ಬೇಕಾದರೂ ಹೋಗಬಹುದು. ಅವರು ಬಯಸಿದಲ್ಲಿ ಯಾವಾಗ ಬೇಕಾದರೂ ರಕ್ಷಣೆ ಕೊಡುತ್ತೇವೆ ಎಂದು ಖರ್ಗೆ ಶುಕ್ರವಾರ (ಅ. 17) ಸುದ್ದಿಗಾರರ ಮುಂದೆ ಭರವಸೆ ಕೊಟ್ಟರು.

ಕಳೆದ ವಾರ ರಾಜ್‌ಕುಮಾರ್‌ ಮಾತಾಡಿ, ಗಾಜನೂರಿಗೆ ಹೋಗುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ, ವೀರಪ್ಪನ್‌ ಹಿಡಿಯುವವರೆಗೆ ಅದು ಅಸಾಧ್ಯ ಎಂಬ ಭಯವನ್ನೂ ತೋಡಿಕೊಂಡಿದ್ದರು.

ಮೂರು ವರ್ಷಗಳ ಹಿಂದೆ ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಗಾಜನೂರಿನಿಂದ ಅಪಹರಿಸಿ, 108 ದಿನ ಕಾಡಿನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಜ್‌ಕುಮಾರ್‌ ಬಿಡುಗಡೆಯಾದಾಗಿನಿಂದ ಅವರಿಗೆ ‘ವೈ’ ದರ್ಜೆಯ ಭದ್ರತೆಯನ್ನು ಒದಗಿಸಲಾಗುತ್ತಿದೆ.

(ಪಿಟಿಐ)

ಪೂರಕ ಓದಿಗೆ-
ರಾಜ್‌ ಮನೆಯಲ್ಲಿ ಬಿಜೆಪಿ ನಾಯಕರು


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada