»   » ಕನಸಿನ ಕನ್ಯೆ ಹೇಮಾಗೀಗ 57!

ಕನಸಿನ ಕನ್ಯೆ ಹೇಮಾಗೀಗ 57!

Posted By:
Subscribe to Filmibeat Kannada

ಕನಸಿನ ಕನ್ಯೆ ಹೇಮಮಾಲಿನಿ ಅವರಿಗೆ ಈಗ 57ನೇ ವಸಂತ. ಈ ಸುದ್ದಿ ಅವರ ಅಭಿಮಾನಿಗಳಿಗೆ ಅಷ್ಟು ಪ್ರಿಯವಾಗುವುದಿಲ್ಲವೇನೋ? ಆದರೆ, ಕಾಲವನ್ನು ತಡೆಯೋರು ಯಾರು ಇಲ್ಲ ... ಅಲ್ಲವೇ?

ಭಾನುವಾರವಷ್ಟೇ ತಮ್ಮ ಹುಟ್ಟುಹಬ್ಬದ ಸಂಭ್ರಮ ಅನುಭವಿಸಿದ ಸಂಸದೆ, ನೃತ್ಯಗಾರ್ತಿ ಮತ್ತು ಬಾಲಿವುಡ್‌ನ ಕಣ್‌ಕುಕ್ಕುವ ನಟಿ ಹೇಮಾಮಾಲಿನಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ನನಗೆ ವಯಸ್ಸಾಯಿತು ಎಂಬ ಚಿಂತೆ ಇಲ್ಲ ಎಂದಿದ್ದಾರೆ. ಆ ಚಿಂತೆ ಆವರ ರಸಿಕ ಅಭಿಮಾನಿಗಳಿಗೆ ಇದ್ದೇಇದೆ!

‘ನನಗೆ ವಯಸ್ಸಾದ ಚಿಂತೆಗಿಂತಲೂ, ಜೀವಿತದ ಒಂದು ವರ್ಷ ಕಡಿಮೆಯಾಯಿತಲ್ಲ ಎಂಬುದೇ ದೊಡ್ಡ ಚಿಂತೆ’ ಎನ್ನುವ ಅವರು, ನಾನು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಆ ಬಗ್ಗೆ ಗಮನ ನೀಡುವೆ ಎನ್ನುತ್ತಾರೆ. ಬದುಕಿನಲ್ಲಿನ ಕನಸುಗಳಿಗೆ ಜೀವ ತುಂಬಲು, ಆರೋಗ್ಯ ಕರುಣಿಸಿದ ಭಗವಂತನಿಗೆ ಥ್ಯಾಂಕ್ಸ್‌ ಹೇಳಲು ಹೇಮಾ ಮರೆಯುವುದಿಲ್ಲ.

ಸದ್ಯಕ್ಕೆ ಸಂಸದೀಯ ನಿಯೋಗದೊಂದಿಗೆ ಯುರೋಪ್‌ ಪ್ರವಾಸದಲ್ಲಿರುವ ಹೇಮಾಮಾಲಿನಿ, ತಮ್ಮ ಪತಿ ಧರ್ಮೇಂದ್ರ ಕಳುಹಿಸಿದ ಶುಭಾಶಯದ ಬಗ್ಗೆ ಹರ್ಷಗೊಂಡಿದ್ದಾರೆ. ಕಳೆದ ವರ್ಷ ರಾಜ್ಯ ಸಭಾ ಸದಸ್ಯರಾಗಿ ಅವರು ಆಯ್ಕೆಗೊಂಡಿದ್ದರು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada