»   » ಬುಧವಾರ ನಟ ಸಂಜಯ ದತ್‌ರ ಭವಿಷ್ಯ ನಿರ್ಧಾರ?

ಬುಧವಾರ ನಟ ಸಂಜಯ ದತ್‌ರ ಭವಿಷ್ಯ ನಿರ್ಧಾರ?

Subscribe to Filmibeat Kannada


ಮುಂಬಯಿ : 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬುಧವಾರ(ಅ.18) ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಆರೋಪಿ ಮತ್ತು ನಟ ಸಂಜಯದತ್‌ಗೆ ಟಾಡಾ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್‌ ದತ್‌ ಸಹಿತ 26 ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ. ಬುಧವಾರ ಸಂಜಯದತ್‌ರ ಭವಿಷ್ಯ ನಿರ್ಧಾರವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಮುಂಬೈ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪಿಟ್ಟಿರುವುದು ಇಲ್ಲಿ ಗಮನಾರ್ಹ.

ತೀರ್ಪು ವ್ಯತಿರಿಕ್ತವಾಗಿ ಬಂದರೆ ಗತಿಯೇನು ಎಂದು ಸಂಜಯದತ್‌ ಸಿನಿಮಾಗಳ ನಿರ್ಮಾಪಕರು ಕಂಗೆಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಸಂಜಯದತ್‌ ಮೇಲೆ ನೂರು ಕೋಟಿ ರೂ.ಗಳ ಬಂಡವಾಳವನ್ನು ನಿರ್ಮಾಪಕರು ಹೂಡಿದ್ದಾರೆ. ಎಲ್ಲರಿಗೂ ಬುಧವಾರದ ಮೇಲೆಯೇ ಕಣ್ಣು.

ಈ ಸಲದ ದೀಪಾವಳಿ, ದತ್‌ ಪಾಲಿಗೆ ಬೆಳಕು ನೀಡುವುದೋ. ಕತ್ತಲು ತುಂಬುವುದೋ ಗೊತ್ತಿಲ್ಲ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada