»   » ಅವಿನಾಶ್ ಮತ್ತು ಮಾಳವಿಕಾ ಮನೆಯಂಗಳದಲ್ಲಿ ಹೊಸ ಗೆಸ್ಟು!

ಅವಿನಾಶ್ ಮತ್ತು ಮಾಳವಿಕಾ ಮನೆಯಂಗಳದಲ್ಲಿ ಹೊಸ ಗೆಸ್ಟು!

Subscribe to Filmibeat Kannada

ನಟ ಅವಿನಾಶ್ ಸಕತ್ತು ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ಬದುಕಿನಲ್ಲೂ ಸಹಾ ಅವರಿಗೆ ಪುರಸೊತ್ತಿಲ್ಲ. ಕಾರಣ; ಅವರ ಮನೆಯಲ್ಲೀಗ ಹೊಸ ಅತಿಥಿಯೊಬ್ಬ ದರ್ಬಾರು ನಡೆಸುತ್ತಿದ್ದಾನೆ! ಅತಿಥಿ ಸತ್ಕಾರದಲ್ಲಿ ಅವಿನಾಶ್ ಮತ್ತು ಅವರ ಪತ್ನಿ ಮಾಳವಿಕಾ ತಲ್ಲೀನ. ಮಾಳವಿಕಾ ನಿಜ ಬದುಕಿನಲ್ಲಿ ಅಮ್ಮನ ಪಾತ್ರ ಮಾಡುತ್ತಿರುವ ಕಾರಣ, ಕಿರುತೆರೆಗೆ ಅವರು ಹಾಕಿರುವ ರಜೆ ಮುಂದುವರೆದಿದೆ. ಮುಂದೆ ಬಣ್ಣ ಹಚ್ಚುತ್ತಾರಾ ಅಥವಾ ಇಲ್ಲವಾ? ಸದ್ಯಕ್ಕೆ ಆ ಬಗ್ಗೆ ಮಾತಿಲ್ಲ.

ಹೌದು, ಅಪ್ಪ ಅಮ್ಮ ಆದ ಖುಷಿ ಅವಿನಾಶ್ ಮತ್ತು ಮಾಳವಿಕಾ ಅವರಲ್ಲಿ ತುಂಬಿ ತುಳುಕುತ್ತಿದೆ. 'ಗುಡ್ ನ್ಯೂಸ್ ಯಾವಾಗ?'ಎಂದು ಎದುರಿಗೆ ಸಿಕ್ಕಾಗಲೆಲ್ಲ ಅವಿನಾಶ್ ಮತ್ತು ಮಾಳವಿಕಾ ದಂಪತಿಗಳನ್ನು ಅವರ ಆಪ್ತರು ಕೇಳುತ್ತಲೇ ಇದ್ದರು. ನಾಲ್ಕೈದು ವರ್ಷಗಳಿಂದ ಎದ್ದಿದ್ದ ಈ ಪ್ರಶ್ನೆಗೆ, ಈಗ ಸಮಾಧಾನ ಸಿಕ್ಕಿದೆ. ವಿಜಯದಶಮಿ ದಿವಸ ಮಾಳವಿಕಾ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ತಾಯಿ ಮಗು ಇಬ್ಬರೂ ಕ್ಷೇಮ.

ಮತ್ತೊಂದು ಕಡೆ, ಬದಲಾಗುತ್ತಿರುವ ಸ್ಯಾಂಡಲ್ ವುಡ್ ಮಾರುಕಟ್ಟೆ ಬಗ್ಗೆ ಅವಿನಾಶ್ ಅವರಿಗೆ ಸಿಟ್ಟಿದೆ. 'ರಿಯಲ್ ಎಸ್ಟೇಟ್ ಉದ್ಯಮಿಗಳು ಸಿನಿಮಾ ತೆಗೆಯುತ್ತಿದ್ದಾರೆ.. ಸಂತೋಷ.. ಆದರೆ ಅವರಲ್ಲಿ ಎಷ್ಟೋ ಜನರಿಗೆ ಸಿನಿಮಾ ಗಾಳಿಗಂಧವೇ ಗೊತ್ತಿಲ್ಲ. ಅಂಥವರ ಮಧ್ಯೆ ಹೆಣಗೋದು ಕಷ್ಟ. ಇತ್ತೀಚೆಗೆ ಯಾರೋ ಒಬ್ಬ ನಿರ್ಮಾಪಕ, ನನ್ನ ರೇಟ್ ಬಗ್ಗೆ ಮಾತನಾಡುತ್ತಾನೆ. ರೇಟ್ ಫಿಕ್ಸ್ ಮಾಡಲು ಇವರ್ಯಾರು? ನಾವೇನು ವಸ್ತುಗಳಾ? ದುಡ್ಡು ಇದ್ದರೇ ಎಲ್ಲಾ ಸಾಧ್ಯ ಎಂದು ಹೊಸ ನಿರ್ಮಾಪಕರು ಭಾವಿಸಿದ್ದಾರೆ. ನನಗೆ ರೇಟ್ ಗಿಂತಲೂ ಪಾತ್ರವೇ ಮುಖ್ಯ' ಎನ್ನುತ್ತಾರೆ ಅವಿನಾಶ್.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...